Viral Video : ಇಂಡಿಗೋ ಪೈಲಟ್ ಒಬ್ಬರು ವಿಮಾನದಲ್ಲಿ ಇಂಗ್ಲಿಷ್ ಮತ್ತು ಪಂಜಾಬಿಯಲ್ಲಿ ಉದ್ಘೋಷಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು 47,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಬೆಂಗಳೂರಿನಿಂದ ಚಂದೀಗಢಕ್ಕೆ ಹೊರಟಿದ್ದ ಈ ವಿಮಾನದ ಕ್ಯಾಪ್ಟನ್ ಪಂಜಾಬಿ ಮತ್ತು ಇಂಗ್ಲಿಷ್‌ನಲ್ಲಿ ಅನೌನ್ಸ್ ಮಾಡಿದಾಗ ಪ್ರಯಾಣಿಕರು ಹರ್ಷಚಿತ್ತರಾದರು. ದನ್ವೀರ್ ಸಿಂಗ್ ಎನ್ನುವವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಅನೌನ್ಸ್ ಮಾಡುವುದು ಸಾಮಾನ್ಯ. ಆದರೆ ಈ ಪೈಲಟ್ ಇಂಗ್ಲಿಷ್ ಮತ್ತು ಪಂಜಾಬಿ ಎರಡರಲ್ಲೂ ಮಾತನಾಡುವ ಮೂಲಕ ತಮ್ಮ ಪ್ರಯಾಣಿಕರನ್ನು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಾರೆ.
Some tips by the Captain in a Punjabi English mix to passengers on flight Bangalore to Chandigarh. pic.twitter.com/7V3dQ9PUdO
ಇದನ್ನೂ ಓದಿ— Danvir Singh दानवीर सिंह (@danvir_chauhan) August 24, 2022
303 ರೀಟ್ವೀಟ್ ಪಡೆದಿದೆ ಈ ಪೋಸ್ಟ್. ನೀವೂ ಹೀಗೆ ಪ್ರಯಾಣಿಸುವಾಗ ಕನ್ನಡದಲ್ಲಿಯೂ ಪೈಲಟ್ ಅನೌನ್ಸ್ಮೆಂಟ್ ಮಾಡುವ ಗಳಿಗೆಗಳು ಬಂದರೆ ಎಷ್ಟು ಚೆಂದ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:22 pm, Thu, 25 August 22