ಸಮಾಧಿಯಿಂದ ಶವ ತೆಗೆದು ಹೊಸ ಬಟ್ಟೆ ಹಾಕಿ, ಸಿಗರೇಟ್​ ಸೇದಿಸುವ ಜನ, ವಿಚಿತ್ರ ಸಂಪ್ರದಾಯ

|

Updated on: Sep 13, 2024 | 11:25 AM

ವಿಶ್ವದ ಒಂದೊಂದು ಭಾಗಗಳಲ್ಲಿ ಒಂದೊಂದು ಬಗೆಯ ಸಂಪ್ರದಾಯವಿದೆ. ಹುಟ್ಟಿಗೊಂದು ಸಂಪ್ರದಾಯವಾದರೆ ಸಾವಿಗೊಂದು.ಇಂಡೋನೇಷ್ಯಾದಲ್ಲಿರುವ ಈ ವಿಚಿತ್ರ ಸಂಪ್ರದಾಯ ಇಡೀ ವಿಶ್ವವೇ ಅಚ್ಚರಿಪಡುವಂತಿದೆ.

ಸಮಾಧಿಯಿಂದ ಶವ ತೆಗೆದು ಹೊಸ ಬಟ್ಟೆ ಹಾಕಿ, ಸಿಗರೇಟ್​ ಸೇದಿಸುವ ಜನ, ವಿಚಿತ್ರ ಸಂಪ್ರದಾಯ
ಇಂಡೋನೇಷ್ಯಾ ಜನ
Follow us on

ವಿಶ್ವದ ಒಂದೊಂದು ಭಾಗಗಳಲ್ಲಿ ಒಂದೊಂದು ಬಗೆಯ ಸಂಪ್ರದಾಯವಿದೆ. ಹುಟ್ಟಿಗೊಂದು ಸಂಪ್ರದಾಯವಾದರೆ ಸಾವಿಗೊಂದು.ಇಂಡೋನೇಷ್ಯಾದಲ್ಲಿರುವ ಈ ವಿಚಿತ್ರ ಸಂಪ್ರದಾಯ ಇಡೀ ವಿಶ್ವವೇ ಅಚ್ಚರಿಪಡುವಂತಿದೆ.

ಭಾರತದಲ್ಲಿ ತಮ್ಮ ಪ್ರೀತಿಪಾತ್ರರು ಮೃತಪಟ್ಟರೆ ಪ್ರತಿ ವರ್ಷವು ಅವರ ತಿಥಿ ಮಾಡುವ ಮೂಲಕ ನೆನಪಿಸಿಕೊಂಡರೆ, ಇಲ್ಲಿನ ಜನ ಬೇರೆಯದ್ದೇ ರೀತಿಯಲ್ಲಿ ನೆನಪಿಸಿಕೊಳ್ಳುತ್ತಾರೆ.

ಅವರು ತಮ್ಮ ಪೂರ್ವಜರ ಸಮಾಧಿಯನ್ನು ಅಗೆಯುವ ಮೂಲಕ ಸತ್ತವರನ್ನು ಹೊರ ತೆಗೆಯುತ್ತಾರೆ. ದೇಹಕ್ಕೆ ಸ್ನಾನಮಾಡಿಸುತ್ತಾರೆ. ಹೊಸ ಬಟ್ಟೆ ಹಾಕಿಸುತ್ತಾರೆ, ಸಿಗರೇಟ್ ಸೇದಿಸುತ್ತಾರೆ. ಅಷ್ಟೇ ಅಲ್ಲದೆ ಕುಟುಂಬದವರು ಆ ಶವಗಳ ಜತೆ ಫೋಟೊವನ್ನು ತೆಗೆಸಿಕೊಳ್ಳುತ್ತಾರೆ.

ತಾನಾ ತೊರಾಜ ಪ್ರದೇಶವು ಇಂಡೋನೇಷ್ಯಾದ ದಕ್ಷಿಣ ಸುಲವೆಸಿಯಲ್ಲಿದೆ. ತೊರಾಜ ಬುಡಕಟ್ಟಿನ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಜನರು ನಿರ್ಜೀವ ವಸ್ತುಗಳನ್ನು ಸಹ ಜೀವಂತವಾಗಿ ಪರಿಗಣಿಸುತ್ತಾರೆ. ಮನುಷ್ಯರಾಗಲಿ ಅಥವಾ ಪ್ರಾಣಿಯಾಗಲಿ ಅವರೆಲ್ಲರಿಗೂ ಆತ್ಮವಿದೆ ಮತ್ತು ಅವರನ್ನು ಗೌರವಿಸಬೇಕು ಎಂಬುದು ಅವರ ವಾದವಾಗಿದೆ.

ಮತ್ತಷ್ಟು ಓದಿ: Viral: ಅಯ್ಯೋ ನನ್ನ ಕಣ್ಣು ಹೋಯ್ತಲ್ಲ ದೇವ್ರೇ, ಮಕ್ಕಳ ಮೊಬೈಲ್‌ ಚಟವನ್ನು ಬಿಡಿಸಲು ಶಿಕ್ಷಕಿಯಿಂದ ವಿನೂತನ ಪ್ರಯತ್ನ

ಈ ಜನರು ಸತ್ತ ತಕ್ಷಣ ತಮ್ಮ ಪ್ರೀತಿಪಾತ್ರರನ್ನು ಸಮಾಧಿ ಮಾಡುವುದಿಲ್ಲ. ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆಯುತ್ತಾರೆ. ಪ್ರತಿ ವರ್ಷ ಆಗಸ್ಟ್​ ಸಮಯದಲ್ಲಿ ಈ ಜನರು ತಮ್ಮ ಸಮಾಧಿಯಿಂದ ಮೃತ ದೇಹಗಳನ್ನು ಹೊರತೆಗೆಯುತ್ತಾರೆ. ನಂತರ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸುತ್ತಾರೆ. ಅವರು ಜೀವಂತ ಮನುಷ್ಯರಂತೆ ಅವರೊಂದಿಗೆ ಇರಿಸಿಕೊಳ್ಳುತ್ತಾರೆ. ಅವರೊಂದಿಗೆ ಫೋಟೊ ತೆಗೆದುಕೊಳ್ಳುತ್ತಾರೆ. ಆಹಾರ, ಪಾನೀಯ, ಸಿಗರೇಟ್​ ಕೂಡ ಕೊಡುತ್ತಾರೆ.

ಈ ಆಚರಣೆ ಬಳಿಕ ಸಮಾಧಿಯನ್ನು ಸ್ವಚ್ಛಗೊಳಿಸುತ್ತಾರೆ. ಮತ್ತೆ ಹೂಳುತ್ತಾರೆ, ಇದನ್ನು ಪ್ರತಿ ವರ್ಷ ಮಾಡುತ್ತಾರೆ. ಮೃತ ದೇಹವನ್ನು ಸುರಕ್ಷಿತವಾಗಿಡಲು ಸಾಕಷ್ಟು ಕಾಳಜಿ ವಹಿಸಲಾಗಿದೆ. ಈ ಜನರು ನಿಧನರಾದವರ ಮೃತದೇಹಗಳನ್ನೂ ಕೆಲವು ತಿಂಗಳುಗಳ ಕಾಲ ತಮ್ಮ ಮನೆಗಳಲ್ಲಿ ಇಡುತ್ತಾರೆ.

ಈ ಹಬ್ಬದ ಸಂದರ್ಭದಲ್ಲಿ ಎಮ್ಮೆಗಳಿಂದ ಹಿಡಿದು ಹಂದಿಗಳವರೆಗೂ ಬಲಿಕೊಡಲಾಗುತ್ತದೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಪ್ರಾಣಿಗಳ ಮಾಂಸವನ್ನು ನೀಡಲಾಗುತ್ತದೆ. ಚಿಕ್ಕ ಮಕ್ಕಳ ಶವಗಳನ್ನು ಟೊಳ್ಳಾದ ಮರಗಳ ಪೊಟರೆಗಳಲ್ಲಿ ಹೂಳಲಾಗುತ್ತದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ