Viral: ಶಾರ್ಟ್ಸ್ ಧರಿಸಿ ಬೆಂಗಳೂರು ರಸ್ತೆಯಲ್ಲಿ ಸುತ್ತಾಡಿದ ಯುವತಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮಹಿಳೆ
ಪ್ರತಿದಿನ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ತುಣುಕುಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಶಾರ್ಟ್ಸ್ ತೊಟ್ಟು ಸಾರ್ವಜನಿಕ ಸ್ಥಳದಲ್ಲಿ ಓಡಾಡಿದ್ದಕ್ಕೆ ಯುವತಿಯೊಬ್ಬಳಿಗೆ ಮಹಿಳೆಯೊಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈಗೀಗ ಶಾರ್ಟ್ಸ್, ತುಂಡುಡುಗೆ ತೊಟ್ಟು ಓಡಾಡುವುದು ಕಾಮನ್ ಆಗಿ ಬಿಟ್ಟಿದೆ. ಬೆಂಗಳೂರು, ಮುಂಬೈನಂತಹ ದೊಡ್ಡ ದೊಡ್ಡ ಸಿಟಿಗಳಲ್ಲಿ ಯುವತಿಯರು ಸ್ಟೈಲಿಷ್ ಆಗಿ ಕಾಣಲು ತುಂಡುಡುಗೆ ತೊಟ್ಟು ಓಡಾಡ್ತಿರ್ತಾರೆ. ಆದ್ರೆ ದೇಸಿ ಜನ್ರಿಗೆ ಇದನ್ನೆಲ್ಲಾ ನೋಡಿದಾಗ ʼಇದೆಲ್ಲಾ ಏನ್ ಅವತಾರʼ ಅಂತ ಸ್ವಲ್ಪ ಸಿಟ್ಟು ಬರುತ್ತೆ. ಅದೇ ರೀತಿ ಇಲ್ಲೊಬ್ರು ಮಹಿಳೆ ಕೂಡಾ ಯುವತಿಯೊಬ್ಬಳು ಶಾರ್ಟ್ಸ್ ಧರಿಸಿ ಸಾರ್ವಜನಿಕವಾಗಿ ಓಡಾಡಿದ್ದನ್ನು ಕಂಡು ಸಿಕ್ಕಾಪಟ್ಟೆ ಕೋಪಗೊಂಡಿದ್ದು, ಹಂಗೆಲ್ಲಾ ಬಿಚ್ಕೊಂಡು ಓಡಾಡ್ಬಾರ್ದು ಎಂದು ಆಕೆಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಯುವತಿ “ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ಸ್ ಧರಿಸಲು ಅವಕಾಶವಿಲ್ವಾ?” ಎಂದು ಪ್ರಶ್ನೆ ಕೇಳಿದ್ದಾಳೆ.
ಈ ಘಟನೆ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಟ್ಯಾನಿ ಭಟ್ಟಾಚಾರ್ಜಿ ಅವರು ಶಾರ್ಟ್ಸ್ ಧರಿಸಿ ಬೆಂಗಳೂರು ನಗರದಲ್ಲಿ ಓಡಾಡಿದ್ದಕ್ಕಾಗಿ ಮಹಿಳೆಯೊಬ್ಬರು ಹಿಂಗೆಲ್ಲಾ ತುಂಡುಡುಗೆ ತೊಟ್ಟು ಓಡಾಡ್ಬಾರ್ದು ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಟ್ಯಾನಿ (fit_and_fabb) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ʼಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ಸ್ ಧರಿಸಲು ಅವಕಾಶವಿಲ್ವಾ?” ಎಂದು ಪ್ರಶ್ನೆ ಕೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಯುವತಿಗೆ ಕ್ಲಾಸ್ ತೆಗೆದುಕೊಳ್ಳುವ ದೃಶ್ಯವನ್ನು ಕಾಣಬಹುದು. ಯುವತಿಯ ಪರವಾಗಿ ಒಂದಷ್ಟು ಜನ ಏನ್ ತಪ್ಪಿದೆ ಅದ್ರಲ್ಲಿ ಅಂತ ಪ್ರಶ್ನೆ ಮಾಡಿದ್ರೂ ಆ ಮಹಿಳೆ ಹಂಗೆಲ್ಲಾ ಬಿಚ್ಕೊಂಡು ಓಡಾಡ್ಬಾರ್ದೂ, ಎಲ್ರೂ ನನ್ ಮಕ್ಳೇ ಹಂಗೆಲ್ಲಾ ಓಡಾಡ್ಬಾರ್ದೂ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಟಿ ಹುಡ್ಗೀರು ಹಳ್ಳಿ ಹುಡುಗ್ರನ್ನ ಮದುವೆಯಾದ್ರೆ ಸರ್ಕಾರ ಕೊಡುತ್ತೆ 3ಲಕ್ಷ ಹಣ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮಹಿಳೆ ಹೇಳುವುದರಲ್ಲಿ ತಪ್ಪೇನಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಸಾರ್ವಜನಿಕವಾಗಿ ಯುವತಿಗೆ ತೊಂದರೆ ಕೊಟ್ಟ ಆ ಮಹಿಳೆಯನ್ನು ಬಂಧಿಸಿ ಎಂದು ಯುವತಿಯ ಪರ ಮಾತಾಡಿದ್ರೆ, ಇನ್ನೂ ಕೆಲವರು ಅವರು ಸರಿಯಾಗಿಯೇ ಬುದ್ಧಿವಾದ ಹೇಳಿದ್ದಾರೆ ಎಂದು ಮಹಿಳೆಯ ಪರ ಬ್ಯಾಟ್ ಬೀಸಿದ್ದಾರೆ.