ಸಿಟಿ ಹುಡ್ಗೀರು ಹಳ್ಳಿ ಹುಡುಗ್ರನ್ನ ಮದುವೆಯಾದ್ರೆ ಸರ್ಕಾರ ಕೊಡುತ್ತೆ 3ಲಕ್ಷ ಹಣ
ನಗರದಲ್ಲಿರುವ ಹೆಣ್ಣುಮಕ್ಕಳು, ಹಳ್ಳಿಯಲ್ಲಿರುವ ಯುವಕರನ್ನು ಮದುವೆಯಾದರೆ ಸರ್ಕಾರವು 3 ಲಕ್ಷ ರೂ. ಕೊಡುತ್ತದೆ. ಹಳ್ಳಿಯಲ್ಲಿರುವ ಯುವಕರು ಬ್ರಹ್ಮಚಾರಿಯಾಗಿಯೇ ಇರಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಈ ಮಾದರಿಯ ಯೋಜನೆ ಇರುವುದೆಲ್ಲಿ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಮದುವೆ ಎಂಬುದು ಕೇವಲ ಇಬ್ಬರ ನಡುವಿನ ಸಂಬಂಧವಲ್ಲ ಎರಡು ಕುಟುಂಬದ ನಡುವಿನ ಅನುಬಂಧ. ಹಲವು ಕಾರಣಗಳಿಂದಾಗಿ ನಿಶ್ಚಯವಾಗಿರುವ ಮದುವೆ ಮುರಿದುಬಿದ್ದಿರುವ ಉದಾಹರಣೆಗಳೂ ಇವೆ. ಕೇವಲ ಭಾರತ ಮಾತ್ರವಲ್ಲ ಎಲ್ಲಾ ದೇಶದಲ್ಲಿಯೂ ಹಳ್ಳಿಯಲ್ಲಿರುವ ಹುಡುಗರನ್ನು ಮದುವೆಯಾಗಲು ಹೆಣ್ಣುಮಕ್ಕಳು ಹಿಂದೇಟು ಹಾಕುವುದುಂಟು. ಹಾಗಾಗಿ ಈ ದೇಶದ ಸರ್ಕಾರವು ಒಂದೊಮ್ಮೆ ನಗರದಲ್ಲಿರುವ ಹೆಣ್ಣುಮಕ್ಕಳು ಹಳ್ಳಿಯ ಹುಡುಗರನ್ನು ಮದುವೆಯಾದರೆ 3 ಲಕ್ಷ ರೂ. ನೀಡುತ್ತದೆ.
ತಂತ್ರಜ್ಞಾನ ಹಾಗೂ ತನ್ನ ನೈತಿಕ ಮೌಲ್ಯಗಳಿಂದಲೇ ಹೆಸರುವಾಸಿಯಾಗಿರುವ ಜಪಾನ್ ಇತ್ತೀಚಿನ ದಿನಗಳಲ್ಲಿ ಮತ್ತೊಂದು ವಿಚಾರದಿಂದ ಸುದ್ದಿಯಲ್ಲಿದೆ. ಹಳ್ಳಿಯ ಪುರುಷರನ್ನು ಮದುವೆಯಾಗಲು ನಗರದ ಹೆಣ್ಣುಮಕ್ಕಳಿಗೆ ಹಣಕೊಟ್ಟು ಒಪ್ಪಿಸುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಹೀಗಾಗಿ ಜಪಾನ್ ಸರ್ಕಾರವು ಹಳ್ಳಿಯ ಹುಡುಗರನ್ನು ಮದುವೆಯಾಗುವ ಯುವತಿಯರಿಗೆ 3 ಲಕ್ಷ ರೂ. ನೀಡುವ ವಾಗ್ದಾನವನ್ನು ಮಾಡಿತ್ತು.
ಪಾನ್ ಸರ್ಕಾರವು ಮದುವೆಗಳನ್ನು ಉತ್ತೇಜಿಸಲು ಇಂತಹ ಯೋಜನೆಯನ್ನು ತಂದಿದೆ, ಇದರಿಂದಾಗಿ ಸರ್ಕಾರ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಜಪಾನ್ ಸರ್ಕಾರ ಸಿದ್ಧಪಡಿಸಿದ ಯೋಜನೆಯ ಪ್ರಕಾರ, 600,000 ಯೆನ್ ಅಂದರೆ 3 ಲಕ್ಷದ 52 ಸಾವಿರ ರೂಪಾಯಿಗಳನ್ನು ಕೊಟ್ಟು ಹಳ್ಳಿಯ ಹುಡುಗನನ್ನು ಮದುವೆಯಾಗಲು ಹುಡುಗಿಯರನ್ನು ಪ್ರೋತ್ಸಾಹಿಸಲಾಗುತ್ತದೆ. ಟೋಕಿಯೊವನ್ನು ತೊರೆದು ಗ್ರಾಮೀಣ ಪ್ರದೇಶಗಳಿಗೆ ಹೋಗುವ ಹುಡುಗಿಯರಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ.
ಮತ್ತಷ್ಟು ಓದಿ: ಸಮಾಧಿಯಿಂದ ಶವ ತೆಗೆದು ಹೊಸ ಬಟ್ಟೆ ಹಾಕಿ, ಸಿಗರೇಟ್ ಸೇದಿಸುವ ಜನ, ವಿಚಿತ್ರ ಸಂಪ್ರದಾಯ
ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ಪಕ್ಷಗಳಿಂದ ಮತ್ತು ಜನರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು . ಇದರಿಂದಾಗಿ ಸರ್ಕಾರ ತನ್ನ ಯೋಜನೆಯನ್ನು ಹಿಂಪಡೆಯಬೇಕಾಯಿತು. ಆದರೆ ಚೀನಾದಲ್ಲಿ ಇಂತಹ ಕಾನೂನು ಸಾಮಾನ್ಯವಾಗಿದೆ, ಗುವಾಂಗ್‌ಡಾಂಗ್ ಪ್ರಾಂತ್ಯದ ಜನರಿಗೆ ಮದುವೆ ಮತ್ತು ಮಕ್ಕಳನ್ನು ಹೊಂದಲು ಹಣವನ್ನು ಕೊಡಲಾಗಿತ್ತು.
25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಕೂಡ ಮದುವೆಯಾಗಿ ಮಗುವಿಗೆ ಜನ್ಮ ನೀಡಿದರೆ ಹಣವನ್ನು ನೀಡಲಾಗುತ್ತಿತ್ತು. ಜಪಾನ್‌ನಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ