Inspiration: ಅಜ್ಜನನ್ನು ಕಳೆದುಕೊಂಡ ಮೊಮ್ಮಗಳ ಸ್ಫೂರ್ತಿ ಕಥೆ; 1500 ಕ್ಕೂ ಹೆಚ್ಚು ಸೈಕಲ್​ಗಳಿಗೆ ಹೆಡ್​ಲೈಟ್ ವಿತರಿಸಿದ ಖುಷಿ!

|

Updated on: Mar 19, 2023 | 10:58 AM

ಈಗಾಗಲೇ ಖುಷಿಯವರಿಗೆ ಸೈಕಲ್ ಅಗರಬತ್ತಿ ಸೇರಿ ಹಲವರು ಉಚಿತ ಹೆಡ್​ಲೈಟ್​ಗಳನ್ನು ನೀಡಲು ಮುಂದೆ ಬಂದಿದ್ದಾರೆ. ಸುಮಾರು 1500 ಕ್ಕೂ ಹೆಚ್ಚು ಸೈಕಲ್​ಗಳಿಗೆ ಖುಷಿ ಉಚಿತ ಹೆಡ್​ಲೈಟ್ ಅನ್ನು ಫಿಕ್ಸ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Inspiration: ಅಜ್ಜನನ್ನು ಕಳೆದುಕೊಂಡ ಮೊಮ್ಮಗಳ ಸ್ಫೂರ್ತಿ ಕಥೆ; 1500 ಕ್ಕೂ ಹೆಚ್ಚು ಸೈಕಲ್​ಗಳಿಗೆ ಹೆಡ್​ಲೈಟ್ ವಿತರಿಸಿದ ಖುಷಿ!
Kushi Pandey, Social Worker
Image Credit source: LinkedIn
Follow us on

ಹೆತ್ತವರು ಬಿಟ್ಟರೆ ಅಜ್ಜ-ಅಜ್ಜಿಯಷ್ಟು (Grandparents) ಮಕ್ಕಳನ್ನು ಬೇರೆ ಯಾರೂ ಪ್ರೀತಿಸಲು ಸಾಧ್ಯವಿಲ್ಲ. ಅಲ್ಲದೇ ಒಂದು ಪಕ್ಷ ಹೆತ್ತವರು (Parents) ಬೈದರೂ ಮಕ್ಕಳನ್ನು ಕಾಪಾಡಲು ಅಜ್ಜ-ಅಜ್ಜಿ ಸದಾ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಾಲಾ ರಜೆಯಲ್ಲಿ ಅಜ್ಜಿ ಮನೆಗೆ ಹೋಗಿ ಬಂದ ಮೇಲೆ ಮಕ್ಕಳಿಗೆ ಅವರ ನೆನಪೂ ಇರುವುದಿಲ್ಲ. ಆದರೆ ಇಲ್ಲೊಂದು ಹೆಣ್ಣು ಮಗಳ ತನ್ನ ಅಜ್ಜನ ನೆನಪಿನಲ್ಲಿ ಸಮಾಜ ಸೇವೆ ಮಾಡಿ ಅದೆಷ್ಟೋ ಜನರ ಜೀವನಕ್ಕೆ ಬೆಳಕಾಗಿದ್ದಾಳೆ. ಈಕೆಯ ಈ ಹೆಜ್ಜೆ ರಸ್ತೆಯಲ್ಲಿ ಆಗುವ ಅದೆಷ್ಟೋ ಅವಘಡವನ್ನು ತಡೆಯುತ್ತಿದೆ.

ಉತ್ತರ ಪ್ರದೇಶದ (Uttar Pradesh) ಖುಷಿ ಪಾಂಡೆ (Kushi Pandey) 2020 ರಲ್ಲಿ ತಮ್ಮ ಅಜ್ಜನನ್ನ (ಅಮ್ಮನ ಅಪ್ಪ) ರಸ್ತೆ ಅಪಘಾತದಲ್ಲಿ ಕಳೆದುಕೊಂಡರು. ಮನೆಗೆ ಮರಳುತ್ತಿದ್ದ ಅಜ್ಜನ ಸೈಕಲ್ ಅಲ್ಲಿ ಹೆಡ್​ಲೈಟ್ ಇಲ್ಲದಿದ್ದ ಕಾರಣ, ಹಿಂದೆ ಬರುತ್ತಿದ್ದ ಕಾರಿಗೆ ಕಾಣದೆ ಸೈಕಲ್ಲಿಗೆ ಗುದ್ದಿದ್ದಾನೆ, ಈ ಅಪಘಾತದಲ್ಲಿ ಖುಷಿ ಪಾಂಡೆ ತಮ್ಮ ಪ್ರೀತಿಯ ಅಜ್ಜನನ್ನು ಕಳೆದುಕೊಂಡರು. ಈ ಘಟನೆಯಿಂದ ಖುಷಿ ಗದ್ಗದಿತರಾಗಿದ್ದರು. ಆದರೆ ತನ್ನ ಅಜ್ಜನಿಗೆ ಆದಂತೆ ಬೇರೆ ಯಾರಿಗೂ ಆಗಬಾರದು, ಯಾವ ಮೊಮ್ಮಗಳು ಅಜ್ಜನನ್ನು ಈ ರೀತಿ ಕಳೆದುಕೊಳ್ಳ ಬಾರದು ಎಂಬ ಕಾರಣಕ್ಕೆ ಸುಮಾರು 2 ವರ್ಷಗಳಿಂದ ರಸ್ತೆಯಲ್ಲಿ ಓಡಾಡುವ ಹೆಡ್​ಲೈಟ್ ಇಲ್ಲದ ಸೈಕಲ್​ಗಳನ್ನು ನಿಲ್ಲಿಸಿ ಉಚಿತವಾಗಿ ಲೈಟ್ ಅನ್ನು ಫಿಕ್ಸ್ ಮಾಡಿ ಕೊಡುತ್ತಿದ್ದಾರೆ.

ಅದೆಷ್ಟೋ ಕಾರ್ಮಿಕರು ಕೆಲಸ ಮುಗಿಸಿ ಸೈಕಲ್ ಅಲ್ಲೇ ಮನೆಗೆ ತೆರಳುತ್ತಾರೆ. ಇಂತಹ ಸೈಕಲ್​ಗಳಲ್ಲಿ ಹೆಡ್​ಲೈಟ್ ಇರುವುದಿಲ್ಲ. ರಸ್ತೆ ಬದಿಯಲ್ಲಿ ಖುಷಿ ಬೋರ್ಡ್ ಹಿಡಿದು ನಿಂತು ಇಂತವರಿಗೆ ಚಾರ್ಜ್ ಮಾಡಬಹುದಾದ ಹೆಡ್​ಲೈಟ್ ಅನ್ನು ನೀಡುತ್ತಿದ್ದಾರೆ. ಇವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಇವರಿಗೆ ಅಭಿನಂದನೆಯನ್ನು ವ್ಯಕ್ತ ಪಡಿಸಿದ್ದಾರೆ. ಖುಷಿ ಹೆಡ್ ಲೈಟ್ ವಿತರಿಸುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಕೈ ಇಲ್ಲದ ಅಂಗವಿಕಲನಿಗೆ ಎರಡೂ ತೋಳುಗಳ ಕಸಿ; ಏಷ್ಯಾದಲ್ಲೇ ಇದು ಮೊದಲು!

ಈಗಾಗಲೇ ಖುಷಿಯವರಿಗೆ ಸೈಕಲ್ ಅಗರಬತ್ತಿ ಸೇರಿ ಹಲವರು ಉಚಿತ ಹೆಡ್​ಲೈಟ್​ಗಳನ್ನು ನೀಡಲು ಮುಂದೆ ಬಂದಿದ್ದಾರೆ. ಸುಮಾರು 1500 ಕ್ಕೂ ಹೆಚ್ಚು ಸೈಕಲ್​ಗಳಿಗೆ ಖುಷಿ ಉಚಿತ ಹೆಡ್​ಲೈಟ್ ಅನ್ನು ಫಿಕ್ಸ್ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.