Rajasthan: ಕೈ ಇಲ್ಲದ ಅಂಗವಿಕಲನಿಗೆ ಎರಡೂ ತೋಳುಗಳ ಕಸಿ; ಏಷ್ಯಾದಲ್ಲೇ ಇದು ಮೊದಲು!
ರಾಜಸ್ಥಾನದ ಅಜ್ಮೀರ್‌ನ ವ್ಯಕ್ತಿಯೊಬ್ಬರು ಭುಜದ ಮಟ್ಟದಿಂದ ಒಟ್ಟು ತೋಳು ಕಸಿ ಮಾಡಿಸಿಕೊಂಡ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ 16 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಅಜ್ಮೇರ್: ರಾಜಸ್ಥಾನದ ಅಜ್ಮೇರ್ನ 33 ವರ್ಷದ ಪ್ರೇಮಾ ರಾಮ್ (Prema Ram) ಅವರು ಎರಡೂ ತೋಳುಗಳ (Hands) ಕಸಿ ಮಾಡಿಸಿಕೊಂಡ ಏಷ್ಯಾದ (Asia) ಮೊದಲ ವ್ಯಕ್ತಿಯಾಗಿದ್ದಾರೆ. ಭಾರತದ ವೈದ್ಯಕೀಯ ಮೈಲಿಗಲ್ಲಾಗಿರುವ ಈ ಸಾಧನೆಯನ್ನು ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡವು 16 ಗಂಟೆಗಳ ಕಠಿಣ ಶಸ್ತ್ರಚಿಕಿತ್ಸೆಯನ್ನು ಮಾಡಿದೆ. 10 ವರ್ಷಗಳ ಹಿಂದೆ ರಾಮ್ ವಿದ್ಯುತ್ ಅಪಘಾತದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಕಂಬದ ಸಂಪರ್ಕಕ್ಕೆಕ್ಕೆ ಸಿಲುಕಿ ಈ ಘಟನೆ ನಡೆದಿತ್ತು. ಅವರ ಕೈಗಳಿಗೆ ಅನೇಕ ಸುಟ್ಟ ಗಾಯಗಳಾಗಿದ್ದವು, ರಾಮ್ ಅವರ ಜೀವ ಉಳಿಸಲು ವೈದ್ಯರು ಅವರ ಎರಡೂ ಕೈಗಳನ್ನು ತೆಗೆಯುವ ಪರಿಸ್ಥಿತಿ ಬಂದಿತ್ತು.
ರಾಮ್ ಅವರ ಕುಟುಂಬವು ಕೃತಕ ಅಂಗಗಳನ್ನು ಪಡೆಯಲು ಪ್ರಯತ್ನಿಸಿದರು, ಆದರೆ ಅವರಿಗೆ ಕ್ರಿಯಾತ್ಮಕ ಕೈಗಳನ್ನು ನೀಡಲು ಸಾಧ್ಯವಾಗಲಿಲ್ಲ. ತೋಳುಗಳನ್ನು ಭುಜದ ಮಟ್ಟದಲ್ಲಿ ಕತ್ತರಿಸಿದ್ದರಿಂದ, ದೈನಂದಿನ ಚಟುವಟಿಕೆಗಳನ್ನು ಮಾಡಲು ಇತರರ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ವರ್ಷಗಳಲ್ಲಿ, ರಾಮ್ ಕಾಲಿನಿಂದ ಪೆನ್ನು ಹಿಡಿದು ಬರೆಯಲು ಕಲಿತರು.
“ನನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ನಾನು ಜರ್ಜರಿತನಾಗಿದ್ದೆ. ಕೈಗಳಿಲ್ಲದೆ ನಾನು ಖಿನ್ನತೆಗೆ ಒಳಗಾಗಿದ್ದೆ. ಆರಂಭದಲ್ಲಿ, ಇದು ಅತ್ಯಂತ ಸವಾಲಿನದ್ದಾಗಿತ್ತು ಮತ್ತು ನಾನು ಪ್ರತಿದಿನ, ಪ್ರತಿ ನಿಮಿಷ ಕಷ್ಟಪಡುತ್ತಿದ್ದೆ. ನನ್ನ ದಿನನಿತ್ಯದ ಕಾರ್ಯವನ್ನು ನಿರ್ವಹಿಸಲು ನಾನು ನನ್ನ ಸಹೋದರರು ಮತ್ತು ಕುಟುಂಬ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬೇಕಾಗಿತ್ತು.” ಎಂದು ಪ್ರೇಮಾ ರಾಮ್ ತಿಳಿಸಿದರು.
“ನನ್ನ ಅಂಗವಿಕಲತೆ ನನನ್ನು ತಡೆಯಲಿಲ್ಲ. ಈ ಸಮಸ್ಯೆಗೆ ಏನಾದರು ಪರಿಹಾರ ಸಿಗಬಹುದೆಂದು ನಾನು ಯಾವಾಗಲೂ ನಂಬಿದ್ದೆ. ನಾನು ಸಾಮಾನ್ಯ ವ್ಯಕ್ತಿಯಂತೆ ಎಲ್ಲವನ್ನೂ ಮಾಡಲು ಬಯಸುತ್ತೇನೆ. ಸಹಾಯವಿಲ್ಲದೆ ಕೆಲಸಗಳನ್ನು ಮಾಡಲು ನಾನು ವಿನೂತನ ದಾರಿಯನ್ನು ಕಂಡುಕೊಂಡೆ. ನಾನು ನನ್ನ ಕಾಲುಗಳಿಂದ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿದ್ದೇನೆ.” ಎಂದು ರಾಮ್ ಹೇಳಿದರು.
“ನಾನು ಜೀವನವನ್ನು ಪ್ರೀತಿಸುತ್ತಿದ್ದೆ ಮಾತು ಜೀವನವನ್ನು ಸಂಪೂರ್ಣವಾಗಿ ಜೀವಿಸಲು ಇಷ್ಟಪಡುತ್ತಿದ್ದೆ. ನಾನು ಇತ್ತೀಚೆಗೆ ನನ್ನ ಶಿಕ್ಷಣ ಮತ್ತು ಬಿ.ಎಡ್ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ನನಗೆ ಹೊಸ ಕೈಗಳನ್ನು ನೀಡಿದಕ್ಕಾಗಿ ನನ್ನ ಕುಟುಂಬ ಸದಸ್ಯರು, ವೈದ್ಯರು ಮತ್ತು ಗ್ಲೋಬಲ್ ಆಸ್ಪತ್ರೆ ಮುಂಬೈನ ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ ಎಂದು ನಾನು ನಂಬುತ್ತೇನೆ. ನಾನು ತುಂಬಾ ಸಂತೋಷವಾಗಿದ್ದೇನೆ . ಎಲ್ಲ ಕೆಲಸೇವನ್ನು ನಾನೇ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಪ್ರೇಮಾ ರಾಮ್ ತಿಳಿಸಿದರು.
ರಾಮ್ ಅವರು ಈಗಾಗಲೇ ತಮ್ಮ ಫಿಸಿಯೋಥೆರಪಿಯನ್ನು ಪ್ರಾರಂಭಿಸಿದ್ದಾರೆ, ಇದು ಮುಂದಿನ 18 ರಿಂದ 24 ತಿಂಗಳುಗಳವರೆಗೆ ಮುಂದುವರಿಯುತ್ತದೆ. ಅವರು 18 ತಿಂಗಳಲ್ಲಿ ಕೈಗಳನ್ನು ಉಪಯೋಗಿಸಲು ಸಾಧ್ಯವಾಗುತ್ತದೆ.
ಭಾರತಕ್ಕೆ ಮೈಲಿಗಲ್ಲು
ರಾಮ್ ಅವರ ಕನಸನ್ನು ನನಸಾಗಿಸಲು ಸಹಾಯ ಮಾಡಿದ ವೈದ್ಯರ ತಂಡವನ್ನು ಗ್ಲೋಬಲ್ ಆಸ್ಪತ್ರೆಗಳಲ್ಲಿ ಪ್ಲಾಸ್ಟಿಕ್, ಕೈ ಮತ್ತು ಪುನರ್ನಿರ್ಮಾಣ ಮೈಕ್ರೋಸರ್ಜರಿ ಮತ್ತು ಟ್ರಾನ್ಸ್‌ಪ್ಲಾಂಟ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ನಿಲೇಶ್ ಜಿ ಸತ್ಭಾಯ್ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: ಮಕ್ಕಳಿಗೆ ಮೂತ್ರಪಿಂಡ ಕಾಯಿಲೆ ಬರಬಹುದೇ? ಇಲ್ಲಿದೆ ಕೆಲವು ಚಿಕಿತ್ಸೆಗಳ ಮಾಹಿತಿ
ಡಾ ಸತ್ಭಾಯ್, “ಹಿಂದೆ, ಯುರೋಪ್ನಲ್ಲಿ ದ್ವಿಪಕ್ಷೀಯ ಎರಡೂ ತೋಳಿನ ಕಸಿ ಮಾಡಲಾಗಿತ್ತು, ಮತ್ತು ಇದು ಏಷ್ಯಾದಲ್ಲಿ ಮೊದಲ ದ್ವಿಪಕ್ಷೀಯ ಎರಡೂ ತೋಳಿನ ಕಸಿಯಾಗಿದೆ. ಕೈ ಕಸಿ ಮಾಡುವುದು ತುಂಬಾ ಸವಾಲಿನ ಸಂಗತಿಯಾಗಿದೆ. ಇದು ಸಮಯದ ವಿರುದ್ಧದ ಓಟ. ಕಾರ್ಯವಿಧಾನ, ಸಮಯ ಮತ್ತು ಸಮನ್ವಯವು ಮುಖ್ಯವಾಗಿದೆ ಆದ್ದರಿಂದ ಅಂಗಗಳನ್ನು ದೇಹಕ್ಕೆ ಸಾಧ್ಯವಾದಷ್ಟು ಬೇಗ ಜೋಡಿಸಲಾಗುತ್ತದೆ, ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಸ್ನಾಯುಗಳು ವರ್ಗಾವಣೆಯಾಗುವುದರಿಂದ ರಕ್ತ ಪರಿಚಲನೆ ತಕ್ಷಣವೇ ಪ್ರಾರಂಭವಾಗುತ್ತದೆ. ಎರಡೂ ಬದಿಗಳಲ್ಲಿ ಒಂದೇ ರೀತಿಯ ಶಸ್ತ್ರಚಿಕಿತ್ಸೆಯನ್ನು ಮಾಡುವುದರಿಂದ ತಾಂತ್ರಿಕ ಮತ್ತು ವ್ಯವಸ್ಥಾಪನಾ ಸವಾಲುಗಳನ್ನು ಸೇರಿಸುತ್ತದೆ ,” ಎಂದು ಹೇಳಿದರು.
ಭುಜದ ಮಟ್ಟದಲ್ಲಿ ಕೈ ಕಸಿ ಮಾಡುವುದನ್ನು ಭಾರತದಲ್ಲಿ ಕಠಿಣ ಅಥವಾ ಅಸಾಧ್ಯವೆಂದು ಪರಿಗಣಿಸುವುದರ ಜೊತೆಗೆ, ಅಮೆರಿಕ ಅಥವಾ ಯುರೋಪ್‌ನಲ್ಲಿ ಇರುವುದಕ್ಕಿಂತ 8 ರಿಂದ 10 ಪಟ್ಟು ಹೆಚ್ಚು ವೆಚ್ಚದಾಯಕವಾಗಿದೆ.
Published On - 5:56 pm, Sat, 18 March 23