ಕಂಟ ಪೂರ್ತಿ ಕುಡಿದು ತನ್ನ ಮದುವೆ ಮರೆದು ಬಿಟ್ಟ ವರ, ವಧು ಮಾಡಿದೇನು ಗೊತ್ತಾ?
ವ್ಯಕ್ತಿಯೋರ್ವ ತನ್ನ ಮದುವೆಯ ಹಿಂದಿನ ದಿನ ಖುಷಿಯೋ, ದು:ಖನೋ , ಕಂಟ ಪೂರ್ತಿ ಕುಡಿದು ಬಿದ್ದಿದ್ದಾನೆ. ಜೊತೆಗೆ ಮರುದಿನ ತನ್ನ ಮದುವೆ ಎಂಬುದನ್ನೇ ಮರೆತು ಬಿಟ್ಟಿದ್ದಾನೆ. ಈ ಘಟನೆ ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ನಡೆದಿದೆ. ಇಂತಹ ಘಟನೆ ಇದೇ ಮೊದಲಲ್ಲ, ಇತ್ತಿಚೆಗಷ್ಟೇ ಅಸ್ಸಾಂನಲ್ಲಿ ಮದುವೆ ಮಂಟಪದಲ್ಲೇ ವರ ಟೈಟಾಗಿ ಬಿದ್ದದ್ದ ಘಟನೆ ವೈರಲ್ ಆಗಿತ್ತು.
ಮದುವೆ ಪ್ರತಿಯೊಬ್ಬರ ಜೀವನದ ಒಂದು ಸುಂದರವಾದ ಘಟ್ಟ. ಮದುವೆ ತಯಾರಿಗಳು ಕೂಡ ಹಾಗೆ ಒಂದು ತಿಂಗಳ ಹಿಂದೆಯೇ ಪ್ರಾರಂಭವಾಗುತ್ತದೆ. ಮದುವೆ ದಿನ ವಧು ವರನ ಮನೆಯಲ್ಲಿ ಸಂಭ್ರಮ ಸಡಗರಗಳು ಮನೆ ಮಾಡಿರುತ್ತದೆ. ಆದರೆ ಇಲ್ಲೊಂದು ಮದುವೆ ಕಾರ್ಯಕ್ರಮ ಜಗಳದಿಂದ ಕೊನೆಗೊಂಡಿದೆ. ಅಷ್ಟಕ್ಕೂ ಸಂಭ್ರಮದಿಂದಿರಬೇಕಾದ ಮದುವೆ ಮಂಟಪದಲ್ಲಿ ಜಗಳ ಯಾಕಾಯಿತು ಅಂತಾ ಅನ್ಕೊತ್ತಿದ್ದೀರಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ವ್ಯಕ್ತಿಯೋರ್ವ ತನ್ನ ಮದುವೆಯ ಹಿಂದಿನ ದಿನ ಖುಷಿಯೋ, ದು:ಖನೋ ಕಾರಣ ಇನ್ನೂ ತಿಳಿದಿಲ್ಲ, ಕಂಟ ಪೂರ್ತಿ ಕುಡಿದು ಬಿದ್ದಿದ್ದಾನೆ. ಜೊತೆಗೆ ಮರುದಿನ ತನ್ನ ಮದುವೆ ಎಂಬುದನ್ನೇ ಮರೆತು ಬಿಟ್ಟಿದ್ದಾನೆ. ಈ ಘಟನೆ ಬಿಹಾರದ ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ನಡೆದಿದೆ. ಮದುವೆಯ ದಿನದಂದು ವಧುವಿನ ಕುಟುಂಬ ಹಾಗೂ ಮದುವೆಗೆ ಬಂದ ಅತಿಥಿಗಳೆಲ್ಲರೂ ವರನ ಆಗಮನದ ಸ್ವಾಗತಕ್ಕಾಗಿ ಮಂಟಪದಲ್ಲಿ ಕಾದು ಕುಳಿತ್ತಿದ್ದಾರೆ. ಆದರೆ ಎಷ್ಟೇ ಹೊತ್ತಾದರೂ ವರನ ಕುಟುಂಬದವರು ಬರದೇ ಇರುವುದನ್ನು ಕಂಡು ವಧುವಿನ ಕುಟುಂಬದವರಲ್ಲಿ ಚಿಂತೆ ಉಂಟಾಗಿದೆ. ಕೆಲ ಹೊತ್ತಿನ ನಂತರ ವರನಿಗೆ ಪ್ರಜ್ಞೆ ಬಂದ ನಂತರ ಮಂಟಪಕ್ಕೆ ಕರೆ ತರಲಾಗಿದೆ. ಆದರೆ ಅಲ್ಲಿ ಮದುವೆ ನಡೆದಿಲ್ಲ, ಬದಲಾಗಿ ವಧು, ವರನ ವಿಪರೀತ ಕುಡಿತದ ಚಟದ ವಿಷಯ ತಿಳಿದು ಆತನನ್ನು ನಿರಾಕರಿಸಿದ್ದಾಳೆ. ಆಕೆ ನಿರಾಕರಿಸುತ್ತಿದ್ದಂತೆ ವಧುವಿನ ಕುಟುಂಬ ಮದುವೆಯನ್ನು ರದ್ದುಗೊಳಿಸಿ, ಮಂಟಪದಿಂದ ಹೊರ ನಡೆದ್ದಿದ್ದಾರೆ ಎಂದು ಈಟಿವಿ ಭಾರತ್ ವರದಿ ಮಾಡಿದೆ.
ಇದನ್ನೂ ಓದಿ: 4ವರ್ಷ ಪ್ರೀತಿಸಿ ಹಸೆಮಣೆ ಏರಿದ ವಿಶ್ವದ ಅತ್ಯಂತ ಕುಳ್ಳ ಬಾಡಿಬಿಲ್ಡರ್ ಪ್ರತೀಕ್ ವಿಠ್ಠಲ್
ಮದುವೆ ಮಂಟಪದಲ್ಲಿ ವಧು ಹಾಗೂ ವರನ ಮನೆಯವರ ನಡುವೆ ಮಾತಿನ ಚಕಾಮಕಿ ನಡೆದಿದೆ. ಜೊತೆಗೆ ಮದುವೆಯ ಸಿದ್ಧತೆಗಾಗಿ ಸಾಕಷ್ಟು ಹಣವನ್ನು ವಧು ಕುಟುಂಬ ಖರ್ಚು ಮಾಡಿದ್ದು, ಇವೆಲ್ಲವನ್ನು ಹಿಂದಿರುಗಿಸಿ ನೀಡುವಂತೆ ವರನ ಕುಟುಂಬಕ್ಕೆ ಹೇಳಿದ್ದಾರೆ. ಜೊತೆಗೆ ವಧುವಿನ ಕುಟುಂಬ ವರನ ಕುಟುಂಬದ ವಿರುದ್ಧ ಕೇಸು ದಾಖಲಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:58 am, Sun, 19 March 23