Viral News: 4ವರ್ಷ ಪ್ರೀತಿಸಿ ಹಸೆಮಣೆ ಏರಿದ ವಿಶ್ವದ ಅತ್ಯಂತ ಕುಳ್ಳ ಬಾಡಿಬಿಲ್ಡರ್ ಪ್ರತೀಕ್ ವಿಠ್ಠಲ್
ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿರುವ ವಿಶ್ವದ ಅತ್ಯಂತ ಕುಳ್ಳ ದೇಹದಾರ್ಢ್ಯ ಪಟು ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ(28), ವಿವಾಹವಾಗಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿರುವ ವಿಶ್ವದ ಅತ್ಯಂತ ಕುಳ್ಳ ದೇಹದಾರ್ಢ್ಯ ಪಟು ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ(28), ವಿವಾಹವಾಗಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. 2021ರಲ್ಲಿ ವಿಶ್ವದ ಅತ್ಯಂತ ಕುಳ್ಳ(3 ಅಡಿ 4 ಇಂಚು ಎತ್ತರ) ಬಾಡಿಬಿಲ್ಡರ್ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದ್ದರು. ಇದೀಗಾ 4 ಅಡಿ 2 ಇಂಚು ಎತ್ತರದ ಜಯಾರವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
ಡೈಲಿ ಮೇಲ್ ವರದಿಯ ಪ್ರಕಾರ , ಪ್ರತೀಕ್ ನಾಲ್ಕು ವರ್ಷಗಳ ಹಿಂದೆ ತನ್ನ ಸಂಗಾತಿ ಜಯಾ ಅವರನ್ನು ಭೇಟಿಯಾಗಿದ್ದರು. ಜಯಾನನ್ನು ನೋಡಿದ ಕ್ಷಣದಲ್ಲೇ ಇಷ್ಟಪಟ್ಟು, ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಇನ್ಸ್ಟಾಗ್ರಾಮ್ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ರ್ಗಳನ್ನು ಹೊಂದಿರುವ ಬಾಡಿಬಿಲ್ಡರ್ ಪ್ರತೀಕ್, ಇದೀಗಾ ತನ್ನ ಮದುವೆಯ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇಲ್ಲಿದೆ ನೋಡಿ.
View this post on Instagram
ಇದನ್ನೂ ಓದಿ: ರಸ್ತೆಯಲ್ಲಿ ಕತ್ತು ಸೀಳಿ, ಪಿಸ್ತೂಲಿನಿಂದ ಫಯರ್ ಮಾಡಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್
ಬಾಡಿಬಿಲ್ಡರ್ ಹಂಚಿಕೊಂಡ ವೀಡಿಯೊದಲ್ಲಿ, ವರನ ಮೆರವಣಿಗೆಯಲ್ಲಿ ಪ್ರತೀಕ್ ಮಧುಮಗನ ಬಟ್ಟೆಯನ್ನು ಧರಿಸಿ, ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಇನ್ನೊಂದು ಫೋಟೋದಲ್ಲಿ ಪತ್ನಿ ಜಯಾ ಜೊತೆಗೆ ಕುಟುಂಬದವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಪ್ರತೀಕ್ 2012 ರಲ್ಲಿ ತಮ್ಮ ದೇಹದಾರ್ಢ್ಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 2016 ರಲ್ಲಿ, ಮೊದಲ ಬಾರೀ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ತನ್ನ ಕುಟುಂಬ ಹಾಗೂ ಸ್ನೇಹಿತರು ತನಗೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ ಎಂದು ಪ್ರತೀಕ್ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:47 am, Sun, 19 March 23