Fact Check: ಚಿಕನ್, ಮದ್ಯದ ಗ್ಲಾಸ್ ಮುಂದೆ ರಾಹುಲ್ ಗಾಂಧಿ; ವೈರಲ್ ಚಿತ್ರ ಫೋಟೊಶಾಪ್ ಕೈಚಳಕ
ರಾಹುಲ್ ಗಾಂಧಿ ಎದುರಿರುವ ಮೇಜಿನ ಮೇಲೆ ಚಿಕನ್ ಮತ್ತು ಮದ್ಯದ ಲೋಟ ಇರುವ ಫೋಟೊ ಇದಾಗಿದ್ದು ಯಾತ್ರೆಯ ಸಮಯದಲ್ಲಿ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ಅನೇಕರು ತಪಸ್ವಿ, ತಪಸ್ಸಿನಲ್ಲಿ ಮುಳುಗಿದ್ದಾರೆ ಎಂದು ವ್ಯಂಗ್ಯವಾಗಿ ಕೆಣಕುವ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ(Rahul Gandhi) ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ (Bharat Jodo Yatra) ಕಾಶ್ಮೀರದತ್ತ ಸಾಗುತ್ತಿದ್ದು ಕೊನೆಯ ಹಂತವನ್ನು ತಲುಪುತ್ತಿದೆ. ಯಾತ್ರೆಯು ಹರಿಯಾಣದ ಮೂಲಕ ಸಾಗುತ್ತಿದ್ದಂತೆ, ಕಾಂಗ್ರೆಸ್ (Congress) ಪಕ್ಷದ ಮಾಜಿ ಅಧ್ಯಕ್ಷರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ರಾಹುಲ್ ಗಾಂಧಿ ಎದುರಿರುವ ಮೇಜಿನ ಮೇಲೆ ಚಿಕನ್ ಮತ್ತು ಮದ್ಯದ ಲೋಟ ಇರುವ ಫೋಟೊ ಇದಾಗಿದ್ದು ಯಾತ್ರೆಯ ಸಮಯದಲ್ಲಿ ಛಾಯಾಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಚಿತ್ರವನ್ನು ಅನೇಕರು ತಪಸ್ವಿ, ತಪಸ್ಸಿನಲ್ಲಿ ಮುಳುಗಿದ್ದಾರೆ ಎಂದು ವ್ಯಂಗ್ಯವಾಗಿ ಕೆಣಕುವ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ವೈರಲ್ ಚಿತ್ರದ ಫ್ಯಾಕ್ಟ್ ಚೆಕ್ ಮಾಡಿದ ಇಂಡಿಯಾ ಟುಡೇ ತಂಡ, ಈ ಫೋಟೋ ತಿರುಚಿದ ಫೋಟೊ ಎಂದು ವರದಿ ಮಾಡಿದೆ.
ಫ್ಯಾಕ್ಟ್ ಚೆಕ್
ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವು ಗುರುಪ್ರೀತ್ ಗ್ಯಾರಿ ವಾಲಿಯಾ ಎಂಬ ದೃಢೀಕೃತ ಟ್ವಿಟರ್ ಬಳಕೆದಾರರ ಟ್ವೀಟ್‌ಗೆ ಕರೆದೊಯ್ಯಿತು, ಇವರು ಪತ್ರಕರ್ತರಾಗಿದ್ದಾರೆ. ಈ ಚಿತ್ರವು ಗಾಂಧಿಯವರ ಮುಂದೆ ಗಾಜಿನ ಲೋಟದಲ್ಲಿ ಚಹಾ ಅಥವಾ ಕಾಫಿ, ಡ್ರೈ ಫ್ರೂಟ್ಸ್ ತಟ್ಟೆಗಳನ್ನು ತೋರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಭಕ್ತರು ಚಿತ್ರದಲ್ಲಿ ಯಾವುದಾದರೂ ಹುಳುಕು ಕಂಡುಕೊಳ್ಳಬಹುದೇ ಎಂದು ಪರಿಶೀಲಿಸಲು ಅದನ್ನು ಝೂಮ್ ಮಾಡುತ್ತಿರಬೇಕು ಎಂದು ವಾಲಿಯಾ ಟ್ವೀಟ್ ಮಾಡಿದ್ದಾರೆ. ವಾಲಿಯಾ ಟ್ವೀಟ್ ಮಾಡಿದ ಮತ್ತು ವೈರಲ್ ಆಗಿರವ ಚಿತ್ರಗಳನ್ನು ಹೋಲಿಸಿದಾಗ ಒಂದು ಲೋಟ ಆಲ್ಕೋಹಾಲ್ ಮತ್ತು ಚಿಕನ್ ಪ್ಲೇಟ್ ಅನ್ನು ಮೂಲ ಚಿತ್ರಕ್ಕೆ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
खाने की तस्वीर को ज़ूम करके देख रहे होंगे अंधभक्त की कोई गलती मिल जाए , सहमत हो मित्रो ? pic.twitter.com/c2HFkWAuuu
— Gurpreet Garry Walia (@_garrywalia) January 8, 2023
ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಜನವರಿ 9 ರಂದು ಟೈಮ್ಸ್ ನೌ ವರದಿಯು ಗಾಂಧಿಯವರ ಆಹಾರಕ್ರಮದ ಬಗ್ಗೆ ವರದಿ ಪ್ರಕಟಿಸಿದೆ . ಈ ವರದಿಯಲ್ಲಿ ಪತ್ರಕರ್ತ ಪರಂಜಾಯ್ ಗುಹಾ ಠಾಕುರ್ತಾ ಅವರು ಕೆಫೆಯೊಳಗೆ ಚಿತ್ರೀಕರಿಸಿದ ರಾಹುಲ್ ಗಾಂಧಿಯವರ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಜನವರಿ 7ರಂದು ಪರಂಜಾಯ್ ಗುಹಾ ಠಾಕುರ್ತಾ ಅವರ ಟ್ವೀಟ್ ಪ್ರಕಾರ ಯಾತ್ರೆಯು ಪಂಜಾಬ್ ಅನ್ನು ದಾಟಿದಾಗ ಅವರು ಗಾಂಧಿಯನ್ನು ಭೇಟಿಯಾದರು. ಹರಿಯಾಣದ ಕರ್ನಾಲ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಧಾಬಾದಲ್ಲಿ ಗಾಂಧಿ ಊಟ ಮಾಡುತ್ತಿದ್ದಾಗ ಅವರು ಭೇಟಿಯಾದರು ಎಂದು ಠಾಕುರ್ತಾ ಉಲ್ಲೇಖಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Tue, 10 January 23