Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಹೊಸ ಅತಿಥಿ; ರಾಹುಲ್ ಗಾಂಧಿ ಜತೆ ಯಾರಿದ್ದಾರೆ ನೋಡಿ

ಗೋಲ್ಡನ್ ರಿಟ್ರೈವರ್ ನಾಯಿಯೊಂದರ ಜತೆ ರಾಹುಲ್ ಹೆಜ್ಜೆ ಹಾಕುತ್ತಿರುವ ಚಿತ್ರವೀಗ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದೆ.

Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಹೊಸ ಅತಿಥಿ; ರಾಹುಲ್ ಗಾಂಧಿ ಜತೆ ಯಾರಿದ್ದಾರೆ ನೋಡಿ
ಗೋಲ್ಡನ್ ರಿಟ್ರೈವರ್ ನಾಯಿಯೊಂದರ ಜತೆ ರಾಹುಲ್ ಹೆಜ್ಜೆ ಹಾಕುತ್ತಿರುವುದು (ಎಎನ್​ಐ ಚಿತ್ರ)Image Credit source: ANI
Follow us
TV9 Web
| Updated By: Ganapathi Sharma

Updated on: Jan 07, 2023 | 1:34 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ಯಾತ್ರೆ (Bharat Jodo Yatra) ಹರಿಯಾಣದ ಕರ್ನಾಲ್ (Karnal) ಪ್ರವೇಶಿಸಿದೆ. ಪ್ರತಿ ಬಾರಿಯೂ ಪಕ್ಷದ ಅನೇಕ ನಾಯಕರು, ಕಾರ್ಯಕರ್ತರು ಹಾಗೂ ಗಣ್ಯರ ಜತೆ ಕಾಣಿಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಈ ಬಾರಿ ಹೊಸ ಅತಿಥಿ ಜತೆ ಕಾಣಿಸಿಕೊಂಡಿದ್ದಾರೆ. ಹೌದು, ಗೋಲ್ಡನ್ ರಿಟ್ರೈವರ್ ನಾಯಿಯೊಂದರ ಜತೆ ರಾಹುಲ್ ಹೆಜ್ಜೆ ಹಾಕುತ್ತಿರುವ ಚಿತ್ರವೀಗ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದೆ. ಮಾಮೂಲಿಯಂತೆ ಬಿಳಿ ಟಿ-ಶರ್ಟ್ ಧರಿಸಿರುವ ರಾಹುಲ್ ಗಾಂಧಿ, ನಸು ನಗುತ್ತಾ ನಾಯಿಯ ಕೊರಳಿಗೆ ಹಾಕಿರುವ ಹಗ್ಗ ಹಿಡಿದು ಮುನ್ನಡೆಯುತ್ತಿರುವುದು ಚಿತ್ರದಲ್ಲಿದೆ.

ನಿಗದಿಯಂತೆ ಯಾತ್ರೆಯು ಘರೋಂಡ, ಮಧುಬನ್ ಮೂಲಕ ಹಾದುಹೋಗಲಿದೆ. ಸಂಜೆ ವೇಳೆಗೆ ಉಚ್ಚಾನಾದಲ್ಲಿ ದಿನದ ಯಾತ್ರೆ ಮುಕ್ತಾಯಗೊಳ್ಳಲಿದ್ದು, ನಾಳೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಭಾರತ್​ ಜೋಡೋ ಯಾತ್ರೆ ಶುಕ್ರವಾರ ಹರಿಯಾಣದ ಪಾಣಿಪತ್‌ ಜಿಲ್ಲೆಗೆ ಪ್ರವೇಶಿಸಿತ್ತು. ಯಾತ್ರೆಯಲ್ಲಿ ಈ ಹಿಂದೆಯೂ ಹಲವು ಬಾರಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ರಾಹುಲ್ ಗಾಂಧಿ ಗಮನ ಸೆಳೆದಿದ್ದರು. ದೆಹಲಿಯ ಕೊರೆಯುವ ಚಳಿಯಲ್ಲಿ ರಾಹುಲ್ ಗಾಂಧಿ ಟೀ ಶರ್ಟ್ ಮಾತ್ರ ಧರಿಸಿ ಜಾಕೆಟ್, ಸ್ವೆಟರ್ ಹಾಕದೆ ಹೆಜ್ಜೆ ಹಾಕುವ ಮೂಲಕ ಇತ್ತೀಚೆಗೆ ಗಮನ ಸೆಳೆದಿದ್ದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ