Air India: ಏರ್ ಇಂಡಿಯಾ ಸಂಸ್ಥೆಯಿಂದ ಮತ್ತೊಂದು ಎಡವಟ್ಟು, ವಿಮಾನದಲ್ಲಿ ನೀಡಿದ ಊಟದಲ್ಲಿ ಕಲ್ಲು ಪತ್ತೆ
ಏರ್ ಇಂಡಿಯಾ ವಿಮಾನ ಮತ್ತೊಂದು ವಿವಾದಕ್ಕೆ ಸಿಲುಕಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿರುವ ಬಗ್ಗೆ ಮಹಿಳೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಏರ್ ಇಂಡಿಯಾ ವಿಮಾನ (Air India) ಇತ್ತೀಚೆಗೆ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿದೆ. ಇದೀಗ ಏರ್ ಇಂಡಿಯಾ ವಿಮಾನ ಮತ್ತೊಂದು ವಿವಾದಕ್ಕೆ ಸಿಲುಕಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿರುವ ಬಗ್ಗೆ ಮಹಿಳೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸರ್ವಪ್ರಿಯಾ ಸಾಂಗ್ವಾನ್ ಎಂಬುವವರಿಗೆ ನೀಡಿದ ಊಟದಲ್ಲಿ ಕಲ್ಲು ಪತ್ತೆಯಾಗಿದೆ. ಸರ್ವಪ್ರಿಯಾ ಸಾಂಗ್ವಾನ್ ಅವರು ತಮ್ಮ ಟ್ವಿಟರ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ, ತನಗೆ ನೀಡಿದ ಊಟದಲ್ಲಿ ಸಣ್ಣ ಕಲ್ಲಿನ ತುಂಡು ಸಿಕ್ಕಿದೆ ಎಂದು ಊಟದ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಟ್ವೀಟ್‌ನಲ್ಲಿ, ಅವರು ಏರ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ಕಲ್ಲು ಮುಕ್ತ ಆಹಾರವನ್ನು ನೀಡಲು ನಿಮಗೆ ಸಂಪನ್ಮೂಲಗಳು ಮತ್ತು ಹಣದ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ. AI 215 ವಿಮಾನದಲ್ಲಿ ನೀಡಿದ ಆಹಾರದಲ್ಲಿ ಕಲ್ಲು ಇದೆ ಎಂದು ನಾನು ವಿಮಾನ ಸಿಬ್ಬಂದಿ ಜೇಡನ್ ಅವರಿಗೆ ತಿಳಿಸಿದ್ದೇನೆ. ಈ ರೀತಿಯ ನಿರ್ಲಕ್ಷ್ಯ ಒಳ್ಳೆಯದಲ್ಲ ಎಂದು ಹೇಳಿದ್ದರು.
ಈ ಟ್ವೀಟ್ ಬಹಳಷ್ಟು ಟ್ವಿಟ್ಟರ್ ಬಳಕೆದಾರರನ್ನು ಕೆರಳಿಸಿತು, ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು ತೀವ್ರ ನಿರ್ಲಕ್ಷ್ಯದ ಬಗ್ಗೆ ಟೀಕಿಸಿದರು, ಒಬ್ಬ ಟ್ವಿಟರ್ ಬಳಕೆದಾರರೂ ಆತ್ಮೀಯ ಟಾಟಾ ಮುಖ್ಯಸ್ಥರೇ, ನಿಮ್ಮ ವಿಮಾನ ಸಂಸ್ಥೆಗೆ ಒಂದು ಮಾನದಂಡಗಳನ್ನು ನಿಗದಿಪಡಿಸಿ. ಈಗ ನೀವು ಜಾಗತಿಕವಾಗಿ ಗೌರವಾನ್ವಿತ ಬ್ರಾಂಡ್ ಆಗಿದ್ದೀರಾ, ಈ ರೀತಿಯ ಧೋರಣೆ ಸರಿಯಲ್ಲ, ನಿಮ್ಮ ವಿಮಾನ ಸಂಸ್ಥೆಯಲ್ಲಿ ಕಾರ್ಪೊರೇಟ್ ಮೇಲ್ವಿಚಾರಣೆ ಇಲ್ಲವೇ? ಎಂದು ಹೇಳಿದ್ದಾರೆ.
ಇದನ್ನು ಓದಿ:Air India ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮತ್ತೊಂದು ಘಟನೆ ಬೆಳಕಿಗೆ
ಮತ್ತೊಬ್ಬರು, ಬಳಕೆದಾರ ನಿಮ್ಮ ಮೇಲೆ ‘ದೇವರ ಆಶೀರ್ವಾದ ಇದೆ. ವಿಮಾನದಲ್ಲಿ ನೀಡಿದ ಊಟದಿಂದ ಹಲ್ಲು ಮುರಿದಿಲ್ಲ ಎಂದು ಹೇಳಿದ್ದಾರೆ. ಏರ್ ಇಂಡಿಯಾ ಇತ್ತೀಚೆಗೆ ಕೆಟ್ಟ ಸಿಬ್ಬಂದಿ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಸರ್ವಪ್ರಿಯಾ ಸಾಂಗ್ವಾನ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ”ಆತ್ಮೀಯ ಮೇಡಂ, ಖಂಡಿತ ಇದು ನಮಗೆ ಸಂಬಂಧಿಸಿದ್ದು, ಮತ್ತು ನಾವು ಈ ಬಗ್ಗೆ ನಮ್ಮ ಕ್ಯಾಟರಿಂಗ್ ತಂಡದೊಂದಿಗೆ ಮಾತನಾಡುತ್ತೇವೆ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆ ನೀಡಲು ನಮಗೆ ಸ್ವಲ್ಪ ಸಮಯ ನೀಡಿ. ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕೆ ನಾವು ಶ್ಲಾಘಿಸುತ್ತೇವೆ ಎಂದು ಹೇಳಿದರು.
You don’t need resources and money to ensure stone-free food Air India (@airindiain). This is what I received in my food served in the flight AI 215 today. Crew member Ms. Jadon was informed. This kind of negligence is unacceptable. #airIndia pic.twitter.com/L3lGxgrVbz
— Sarvapriya Sangwan (@DrSarvapriya) January 8, 2023
ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಕುಡಿದು ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಅವರನ್ನು ಶುಕ್ರವಾರ ತಡರಾತ್ರಿ ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮಿಶ್ರಾ ಅವರನ್ನು ಅವರ ಕಂಪನಿ ವೆಲ್ಸ್ ಫಾರ್ಗೋ ವಜಾಗೊಳಿಸಿದೆ. ಈ ಬಗ್ಗೆ ಏರ್‌ಲೈನ್ಸ್ ಜವಾಬ್ದಾರಿಯುತವಾಗಿ ನಿರ್ವಹಿಸಿದೆ ಎಂದು ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿದ್ದಾರೆ. ಇಂತಹ ಘಟನೆಗಳು ಇನ್ನೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Tue, 10 January 23