ಅಬ್ಬರದ ಸಂಗೀತ ಪ್ಲೇ ಮಾಡಬೇಡಿ ಎಂದ ಸೇನಾಧಿಕಾರಿಯ ಕಾರಿಗೆ ಬೆಂಕಿ, ಲಕ್ನೋದ ಹೋಟೆಲ್ಗೆ ಬೀಗಮುದ್ರೆ
ಗೋಮ್ತಿನಗರದಲ್ಲಿರುವ ಮೇಜರ್ ಅಭಿಜಿತ್ ಸಿಂಗ್ ಅವರ ಮನೆಯ ಸಮೀಪ ಈ ಹೋಟೆಲ್ ಇದೆ. ಭಾನುವಾರ ರಾತ್ರಿ ಅವರು ಹೋಟೆಲ್ ಸಿಬ್ಬಂದಿಗೆ ಸಂಗೀತ ನಿಲ್ಲಿಸುವಂತೆ ಕೇಳಿದರು. ಆದರೆ ಅವರು ನಿರಾಕರಿಸಿದರು
ಲಖನೌ: ಉತ್ತರ ಪ್ರದೇಶದ (Uttar Pradesh) ರಾಜಧಾನಿ ಲಕ್ನೋದಲ್ಲಿ (Lucknow) ತಡರಾತ್ರಿಯಲ್ಲಿ ಜೋರಾಗಿ ಸಂಗೀತ ಪ್ಲೇ ಮಾಡಿದ್ದನ್ನು ವಿರೋಧಿಸಿದ ಸೇನಾ ಮೇಜರ್ ಕಾರಿಗೆ ಬೆಂಕಿ ಹಚ್ಚಿದ ನಂತರ ಹೋಟೆಲ್ನ್ನು ಮಂಗಳವಾರ ಸೀಲ್ ಮಾಡಲಾಗಿದೆ. ಹೋಟೆಲ್ ಮಿಲಾನೊ ಮತ್ತು ಕೆಫೆಯನ್ನು ಅಕ್ರಮವಾಗಿ ನಡೆಸಲಾಗುತ್ತಿದ್ದು, ನಿರ್ವಾಹಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ಐದು ಜನರನ್ನು ಬಂಧಿಸಲಾಗಿದೆ ಮತ್ತು ಪೊಲೀಸರು ಪ್ರಮುಖ ಆರೋಪಿ ಹೋಟೆಲ್‌ನ ಮ್ಯಾನೇಜರ್‌ಗಾಗಿ ಹುಡುಕುತ್ತಿದ್ದಾರೆ.
ಗೋಮ್ತಿನಗರದಲ್ಲಿರುವ ಮೇಜರ್ ಅಭಿಜಿತ್ ಸಿಂಗ್ ಅವರ ಮನೆಯ ಸಮೀಪ ಈ ಹೋಟೆಲ್ ಇದೆ. ಭಾನುವಾರ ರಾತ್ರಿ ಅವರು ಹೋಟೆಲ್ ಸಿಬ್ಬಂದಿಗೆ ಸಂಗೀತ ನಿಲ್ಲಿಸುವಂತೆ ಕೇಳಿದರು. ಆದರೆ ಅವರು ನಿರಾಕರಿಸಿದರು, ಇದು ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸರ ಮಧ್ಯಪ್ರವೇಶದ ನಂತರ ಸಂಗೀತವನ್ನು ನಿಲ್ಲಿಸಲಾಯಿತು.
ಇದನ್ನೂ ಓದಿ: ಚುನಾವಣೆ ನಮ್ಮ ಹಕ್ಕು ಆದರೆ ಅದಕ್ಕಾಗಿ ಬೇಡುವುದಿಲ್ಲ: ಒಮರ್ ಅಬ್ದುಲ್ಲಾ
ಸಂಗೀತವನ್ನು ನಿಲ್ಲಿಸಿದ ನಂತರ ಅವರು ಮಲಗಿದ್ದರು. ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ತಮ್ಮ ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ