ಚುನಾವಣೆ ನಮ್ಮ ಹಕ್ಕು ಆದರೆ ಅದಕ್ಕಾಗಿ ಬೇಡುವುದಿಲ್ಲ: ಒಮರ್ ಅಬ್ದುಲ್ಲಾ
ಈ ವರ್ಷ ಚುನಾವಣೆ ನಡೆಯದಿದ್ದರೆ ಆಗಲಿ! ನಾವು ಭಿಕ್ಷುಕರಲ್ಲ. ಕಾಶ್ಮೀರಿಗಳು ಭಿಕ್ಷುಕರಲ್ಲ ಎಂದು ನಾನು ಮತ್ತೆ ಮತ್ತೆ ಹೇಳಿದ್ದೇನೆ. ಚುನಾವಣೆ ನಮ್ಮ ಹಕ್ಕು ಆದರೆ ಈ ಹಕ್ಕನ್ನು ನಾವು ಅವರ ಮುಂದೆ ಬೇಡುವುದಿಲ್ಲ.
ಶ್ರೀನಗರ: ಚುನಾವಣೆ (Election) ಜನರ ಹಕ್ಕು ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir)ಚುನಾವಣೆ ನಡೆಸಲು ಕಾಶ್ಮೀರಿಗಳು ಕೇಂದ್ರದ ಮುಂದೆ ಬೇಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ (Omar Abdullah) ಮಂಗಳವಾರ ಹೇಳಿದ್ದಾರೆ. “ಈ ವರ್ಷ ಚುನಾವಣೆ ನಡೆಯದಿದ್ದರೆ ಆಗಲಿ! ನಾವು ಭಿಕ್ಷುಕರಲ್ಲ. ಕಾಶ್ಮೀರಿಗಳು ಭಿಕ್ಷುಕರಲ್ಲ ಎಂದು ನಾನು ಮತ್ತೆ ಮತ್ತೆ ಹೇಳಿದ್ದೇನೆ. ಚುನಾವಣೆ ನಮ್ಮ ಹಕ್ಕು ಆದರೆ ಈ ಹಕ್ಕನ್ನು ನಾವು ಅವರ ಮುಂದೆ ಬೇಡುವುದಿಲ್ಲ. ಅವರು ಅದನ್ನು ಪುನಃಸ್ಥಾಪಿಸಲು ಬಯಸುತ್ತಾರೆ. ನಮಗೆ ಚುನಾವಣೆಗಳು ಬೇಕು, ಆದರೆ ಅವರು ಅದನ್ನು ಮಾಡಲು ಬಯಸದಿದ್ದರೆ, ಹಾಗೆಯೇ ಆಗಲಿ, ”ಎಂದು ಅನಂತನಾಗ್ ಜಿಲ್ಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಒಮರ್ ಹೇಳಿದ್ದಾರೆ.
ಆಸ್ತಿಗಳು ಮತ್ತು ಸರ್ಕಾರಿ ಭೂಮಿಯಿಂದ ಜನರನ್ನು ಹೊರಹಾಕುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯದಿರಲು ಇದು ಒಂದು ಕಾರಣ.ಅದಕ್ಕಾಗಿಯೇ ಅವರು ಚುನಾವಣೆ ನಡೆಸುತ್ತಿಲ್ಲ. ಜನರಿಗೆ ಕಿರುಕುಳ ನೀಡಲು ಅವರು ಬಯಸುತ್ತಾರೆ, ಜನರ ಗಾಯಗಳಿಗೆ ಮುಲಾಮು ಹಚ್ಚುವ ಬದಲು, ಅವರು ನೋವನ್ನು ಹೆಚ್ಚಿಸುವ ಪ್ರವೃತ್ತಿಯನ್ನು ತೋರುತ್ತಿದ್ದಾರೆ ಎಂದು ಒಮರ್ ಹೇಳಿದ್ದಾರೆ. ಚುನಾಯಿತ ಸರ್ಕಾರವು ಜನರ ಗಾಯಗಳನ್ನು ವಾಸಿಮಾಡಲು ಪ್ರಯತ್ನಿಸುತ್ತದೆ ಎಂದು ಬಿಜೆಪಿ ಸರ್ಕಾರಕ್ಕೆ ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು vs ತಮಿಳು ಅಸ್ಮಿತೆ: ಸರ್ಕಾರದ ವಿರುದ್ಧ ಸಿಡಿದೆದ್ದ ರಾಜ್ಯಪಾಲ, ವಾಗ್ದಾಳಿ-ಪ್ರತಿದಾಳಿ ಹೀಗಿತ್ತು
ರಜೌರಿ ದಾಳಿಯ ನಂತರ ಗ್ರಾಮ ರಕ್ಷಣಾ ಸಿಬ್ಬಂದಿಯನ್ನು ಶಸ್ತ್ರಸಜ್ಜಿತಗೊಳಿಸುವ ಸರ್ಕಾರದ ನಿರ್ಧಾರದ ಬಗ್ಗೆ ಕೇಳಿದಾಗ, 2019 ರಲ್ಲಿ ಆರ್ಟಿಕಲ್ 370 ರದ್ದತಿ ಸಮಯದಲ್ಲಿ ರಾಷ್ಟ್ರಕ್ಕೆ ಅದರ ಹಕ್ಕುಗಳು ನೆಲಸಮವಾಗಿವೆ ಎಂದು ಸರ್ಕಾರವು ಒಪ್ಪಿಕೊಂಡಿದೆ ಎಂದಿದ್ದಾರೆ ಒಮರ್. “5 ಆಗಸ್ಟ್ 2019 ರಂದು, ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದರೊಂದಿಗೆ, ಬಂದೂಕು ಸಂಸ್ಕೃತಿಯು ಕಡಿಮೆಯಾಗಲು ಪ್ರಾರಂಭಿಸುತ್ತದೆ ಎಂದು ರಾಷ್ಟ್ರಕ್ಕೆ ತಿಳಿಸಲಾಯಿತು. ರಜೌರಿಯಲ್ಲಿ ನಾವು ನೋಡಿದ ರೀತಿಯ ದಾಳಿ ಮತ್ತು ಕಾಶ್ಮೀರದ ಪರಿಸ್ಥಿತಿ, ಭದ್ರತಾ ಪಡೆಗಳ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಇದೆಲ್ಲವೂ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಎಂಬ ಅಂಶವನ್ನು ಸೂಚಿಸುತ್ತದೆ. ಸರ್ಕಾರವು ಈಗ ಈ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲ್ಪಟ್ಟಿದೆ ಎಂದು ಅವರು ಹೇಳಿದರು.
ರಜೌರಿ ಜಿಲ್ಲೆಯ ಧಂಗ್ರಿ ಗ್ರಾಮದಲ್ಲಿ ಜನವರಿ 1 ರಂದು ನಡೆದ ಭಯೋತ್ಪಾದಕರ ದಾಳಿಯಲ್ಲಿ ಏಳು ಜನರು ಸಾವಿಗೀಡಾಗಿದ್ದು14 ಮಂದಿ ಗಾಯಗೊಂಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Tue, 10 January 23