AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanda Kochhar: ಮುಂಬೈ ಜೈಲಿನಿಂದ ಚಂದಾ ಕೊಚ್ಚರ್ ದಂಪತಿ ಬಿಡುಗಡೆ

ಚಂದಾ ಕೊಚ್ಚರ್ ಅವರನ್ನು ಮುಂಬೈಯ ಬೈಕುಲಾ ಮಹಿಳಾ ಕಾರಾಗೃಹದಿಂದ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಲಾಯಿತು. ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಆರ್ಥರ್ ರಸ್ತೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Chanda Kochhar: ಮುಂಬೈ ಜೈಲಿನಿಂದ ಚಂದಾ ಕೊಚ್ಚರ್ ದಂಪತಿ ಬಿಡುಗಡೆ
ಸಿಬಿಐ ವಶದಲ್ಲಿ ಚಂದಾ ಕೊಚ್ಚರ್ (ಸಂಗ್ರಹ ಚಿತ್ರ)
Follow us
TV9 Web
| Updated By: Ganapathi Sharma

Updated on: Jan 10, 2023 | 2:27 PM

ಮುಂಬೈ: ಐಸಿಐಸಿ ಬ್ಯಾಂಕ್​​ನ (ICICI Bank) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್ (Chanda Kochhar) ಹಾಗೂ ಅವರ ಪತಿ ದೀಪಕ್ ಕೊಚ್ಚರ್​ ಅವರನ್ನು ಮುಂಬೈ ಜೈಲಿನಿಂದ ಮಂಗಳವಾರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರೂ ಅಕ್ರಮ ಸಾಲ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದರು. ಇಬ್ಬರ ಬಂಧನವೂ ಕಾನೂನು ಪ್ರಕಾರ ನಡೆದಿಲ್ಲ. ಹೀಗಾಗಿ ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಬಾಂಬೆ ಹೈಕೋರ್ಟ್ (Bombay High Court) ಸೋಮವಾರ ಆದೇಶಿಸಿತ್ತು.

ಚಂದಾ ಕೊಚ್ಚರ್ ಅವರನ್ನು ಮುಂಬೈಯ ಬೈಕುಲಾ ಮಹಿಳಾ ಕಾರಾಗೃಹದಿಂದ ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಲಾಯಿತು. ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಆರ್ಥರ್ ರಸ್ತೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಡಿಯೊಕಾನ್-ಐಸಿಐಸಿಐ ಬ್ಯಾಂಕ್​ ಸಾಲ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚರ್ ದಂಪತಿಯನ್ನು ಸಿಬಿಐ 2022ರ ಡಿಸೆಂಬರ್ 23ರಂದು ಬಂಧಿಸಿತ್ತು. ತಮ್ಮ ಬಂಧನ ಅಕ್ರಮ ಮತ್ತು ಕಾನೂನು ಸಮ್ಮತವಾಗಿಲ್ಲ ಎಂದು ಆರೋಪಿಸಿದ್ದ ದಂಪತಿ ಬಾಂಬೆ ಹೈಕೋರ್ಟ್​​ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೊಚ್ಚರ್ ದಂಪತಿ ಬಂಧನ ಕಾನೂನು ಪ್ರಕಾರ ನಡೆದಿಲ್ಲ ಎಂದು ತೀರ್ಪು ನೀಡಿದ್ದಲ್ಲದೆ, ಅವರಿಬ್ಬರನ್ನೂ ಜೈಲಿನಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: Chanda Kochhar: ವಂಚನೆ ಪ್ರಕರಣ; ಚಂದಾ ಕೊಚ್ಚರ್‌ ದಂಪತಿ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಆದೇಶ

ವಿಡಿಯೊಕಾನ್ ಗ್ರೂಪ್​ಗೆ ಸಾಲ ಮಂಜೂರಾತಿಯಲ್ಲಿ ಅಕ್ರಮ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ತನಿಖೆ ಎದುರಿಸುತ್ತಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಕೊಚ್ಚರ್ ಅವರನ್ನು ಈ ಹಿಂದೆ 2021ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು. 2018ರಲ್ಲಿ ತನಿಖೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಚಂದಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಆಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. 2012 ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ರೂಪಾಯಿ ಸಾಲ ಪಡೆದು, ಕೆಲ ತಿಂಗಳ ನಂತರ ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ಅವರು ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಾಲಗಳನ್ನು ನಂತರ ಅನುತ್ಪಾದಕ ಆಸ್ತಿ (ಎನ್​ಪಿಎ) ಎಂದು ಘೋಷಿಸಲಾಗಿತ್ತು. ಇದರಿಂದ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಂದಾ ಕೊಚ್ಚರ್, ಅವರ ಪತಿ ಮತ್ತು ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ