AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPS: ಚಂದಾದಾರರು ನಾಮ ನಿರ್ದೇಶನ ಮಾಡದೇ ಮೃತಪಟ್ಟಲ್ಲಿ ಯಾರಿಗೆ ಸಿಗಲಿದೆ ಎನ್​ಪಿಎಸ್ ಮೊತ್ತ?

ಒಂದು ವೇಳೆ ಎನ್​ಪಿಎಸ್​ ಚಂದಾದಾರರು ಯಾರನ್ನೂ ನಾಮ ನಿರ್ದೇಶನ ಮಾಡಿರದಿದ್ದಲ್ಲಿ ಅಥವಾ ಮಾಡಿರುವ ನಾಮ ನಿರ್ದೇಶನ ಕಾನೂನಿನ ಅನುಗುಣವಾಗಿ ಸಮರ್ಪಕವಾಗಿ ಇರದಿದ್ದಲ್ಲಿ ಮೊತ್ತ ಯಾರಿಗೆ ಸಿಗಬೇಕು? ಈ ಕುರಿತು ಕಾನೂನಿನಲ್ಲಿ ಏನಿದೆ? ಇಲ್ಲಿದೆ ವಿವರ.

NPS: ಚಂದಾದಾರರು ನಾಮ ನಿರ್ದೇಶನ ಮಾಡದೇ ಮೃತಪಟ್ಟಲ್ಲಿ ಯಾರಿಗೆ ಸಿಗಲಿದೆ ಎನ್​ಪಿಎಸ್ ಮೊತ್ತ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 10, 2023 | 4:21 PM

Share

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಜನರಲ್ಲಿ ನಿವೃತ್ತಿಗಾಗಿ ಉಳಿತಾಯ ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆ. ನಿವೃತ್ತಿಯ ನಂತರ ನಿಯಮಿತವಾಗಿ ಆದಾಯ ಪಡೆಯುವ ನಿಟ್ಟಿನಲ್ಲಿ ಈ ಯೋಜನೆ ಬಹಳ ಮಹತ್ವದ್ದಾಗಿದೆ. ಉದ್ಯೋಗದ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಹೂಡಿಕೆ ಮಾಡಬಹುದಾದ ಯೋಜನೆ ಇದಾಗಿದ್ದು, ಜನಪ್ರಿಯ ಪಿಂಚಣಿ ಯೋಜನೆಗಳಲ್ಲಿ (Pension) ಒಂದಾಗಿದೆ. ಎನ್​ಪಿಎಸ್ ಚಂದಾದಾರರು ಮೃತಪಟ್ಟರೆ ಅಂಥ ಸಂದರ್ಭದಲ್ಲಿ ಅವರು ಯಾರನ್ನು ನಾಮ ನಿರ್ದೇಶನ (Nominee) ಮಾಡಿದ್ದಾರೆಯೋ ಅಂಥವರಿಗೆ ಮೊತ್ತವನ್ನು ನೀಡಬೇಕು ಎಂದು 2015ರ ಪಿಎಫ್​ಆರ್​​ಡಿಎ ನಿಯಮದಲ್ಲಿ ಹೇಳಲಾಗಿದೆ.

ಒಂದು ವೇಳೆ ಎನ್​ಪಿಎಸ್​ ಚಂದಾದಾರರು ಯಾರನ್ನೂ ನಾಮ ನಿರ್ದೇಶನ ಮಾಡಿರದಿದ್ದಲ್ಲಿ ಅಥವಾ ಮಾಡಿರುವ ನಾಮ ನಿರ್ದೇಶನ ಕಾನೂನಿನ ಅನುಗುಣವಾಗಿ ಸಮರ್ಪಕವಾಗಿ ಇರದಿದ್ದಲ್ಲಿ ಮೊತ್ತ ಯಾರಿಗೆ ಸಿಗಬೇಕು? ಈ ಕುರಿತು ಕಾನೂನಿನಲ್ಲಿ ಏನಿದೆ? ಇಲ್ಲಿದೆ ವಿವರ.

ಇದನ್ನೂ ಓದಿ: OPS vs NPS: ಹಳೆ ಪಿಂಚಣಿ ಪರ ಕೂಗೆದ್ದಿರುವುದೇಕೆ? ಒಪಿಎಸ್, ಎನ್​ಪಿಎಸ್​ ವ್ಯತ್ಯಾಸದ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಎನ್​ಪಿಎಸ್ ಚಂದಾದಾರರು ನಾಮ ನಿರ್ದೇಶನ ಮಾಡದೇ ಇದ್ದು, ಅವರು ಮೃತಪಟ್ಟಲ್ಲಿ ಅವರಿಗೆ ಸಲ್ಲಬೇಕಾದ ಮೊತ್ತವನ್ನು ಅವರ ಕುಟುಂಬದವರಿಗೆ ನೀಡಬೇಕಾಗುತ್ತದೆ. ಆದರೆ, ಕುಟುಂಬದವರು ರಾಜ್ಯ ಸರ್ಕಾರದ ಕಂದಾಯ ಅಧಿಕಾರಿಗಳು ನೀಡಿದ ಉತ್ತರಾಧಿಕಾರಿ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ. ಒಂದು ವೇಳೆ ಕಂದಾಯ ಇಲಾಖೆ ನೀಡಿದ ಪ್ರಮಾಣ ಪತ್ರ ಇಲ್ಲದಿದ್ದಲ್ಲಿ ನ್ಯಾಯಾಲಯವು ನೀಡಿರುವ ಉತ್ತರಾಧಿಕಾರ ಪ್ರಮಾಣ ಪತ್ರಕ್ಕೆ ಅನುಗುಣವಾಗಿ ಎನ್​ಪಿಎಸ್ ಮೊತ್ತವನ್ನು ನೀಡಬೇಕಾಗುತ್ತದೆ.

ಒಂದು ವೇಳೆ ಕಾನೂನಾತ್ಮಕವಾಗಿ ನಾಮ ನಿರ್ದೇಶಿತರು ಇದ್ದಲ್ಲಿ ಅಂಥವರು ಡೆತ್ ವಿತ್​​ಡ್ರಾವಲ್ ಅರ್ಜಿಯೊಂದಿಗೆ ಸಂಬಂಧಪಟ್ಟ ಎಲ್ಲ ವಿವರಗಳನ್ನು ಸಲ್ಲಿಸಿ ಎನ್​ಪಿಎಸ್ ಮೊತ್ತವನ್ನು ಪಡೆಯಬಹುದಾಗಿದೆ. ಮರಣ ಪ್ರಮಾಣಪತ್ರ, ಕೆವೈಸಿ ದಾಖಲೆಗಳು, ಬ್ಯಾಂಕ್ ಖಾತೆ ಮಾಹಿತಿಗಳನ್ನೂ ಸಲ್ಲಿಸಬೇಕಾಗುತ್ತದೆ. ಏನೆಲ್ಲ ದಾಖಲೆಗಳು ಬೇಕೆಂಬ ವಿವರ ವಿತ್​ಡ್ರಾವಲ್ ಅರ್ಜಿಯಲ್ಲಿ ಇರುತ್ತದೆ.

ಇದನ್ನೂ ಓದಿ: NPS Partial Withdrawal: ಎನ್​ಪಿಎಸ್ ಭಾಗಶಃ ಮೊತ್ತ ಹಿಂಪಡೆಯಲು ಬಯಸಿದ್ದೀರಾ? ನಿಯಮ ಮತ್ತೆ ಬದಲಾಗಿದೆ ಗಮನಿಸಿ

ನಾಮ ನಿರ್ದೇಶಿತರು ಎನ್​ಪಿಎಸ್​ ಪಡೆಯಲು ಬಯಸದೇ ಇದ್ದಲ್ಲಿ ಅದನ್ನು ಬಿಟ್ಟುಕೊಡುವ ಬಗ್ಗೆ ದೃಢೀಕರಣ ಪತ್ರ (Relinquishment Deed) ನೀಡಬೇಕಾಗುತ್ತದೆ. ಎನ್​ಪಿಎಸ್ ಪ್ರಯೋಜನ ಪಡೆಯಲು ಬಯಸುವ ಇತರ ಅಭ್ಯರ್ಥಿಗಳು ನಷ್ಟ ಪರಿಹಾರಕ್ಕೆ ಸಂಬಂಧಿಸಿದ ಬಾಂಡ್​ (Indemnification Bond) ನೀಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Tue, 10 January 23

Follow Us
TV9 Web
TV9 Web

TV9 Kannada

Read More
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
‘ನಂಬಿ ಕೆಟ್ಟವರು’: ಗಾನವಿಯ ನಂಬಿ ಕುರಿಯಾದ ಆಸಿಯಾ
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ