RRR ಚಿತ್ರಕ್ಕೂ ಟಾಮ್​ ಆ್ಯಂಡ್​ ಜೆರ್ರಿಗೂ ಏನು ಸಂಬಂಧ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​​​​​​ ಕಹಾನಿ

Akshatha Vorkady

|

Updated on:Mar 18, 2023 | 4:37 PM

ರಾಜಮೌಳಿಯವರು ಟಾಮ್ ಅಂಡ್ ಜೆರ್ರಿಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತ್ರಿಬಲ್​ ಆರ್​​ ಸಿನಿಮಾ ಮಾಡಿದರೇ? ಎಂಬ ಪ್ರಶ್ನೆ ಇದೀಗಾ ಹುಟ್ಟಿಕೊಂಡಿದೆ.

RRR ಚಿತ್ರಕ್ಕೂ ಟಾಮ್​ ಆ್ಯಂಡ್​ ಜೆರ್ರಿಗೂ ಏನು ಸಂಬಂಧ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್​​​​​​ ಕಹಾನಿ
RRR vs Tom and Jerry

ಇತ್ತೀಚೆಗಷ್ಟೇ ಆಸ್ಕರ್​ ಪ್ರಶಸ್ತಿಯನ್ನು ಪಡೆದುಕೊಂಡ ನಾಟು ನಾಟು ಹಾಡಿನಿಂದಲೇ ಆರ್​ಆರ್​ಆರ್ ಸಿನಿಮಾವನ್ನು ವಿಶ್ವದಾದ್ಯಂತ ಜನರು ವೀಕ್ಷಿಸಿದ್ದಾರೆ. ಆದರೆ ಇದೀಗಾ RRR ಸಿನಿಮಾದ ಬಹಳಷ್ಟು ಸೀನ್​​​​ಗಳು ಟಾಮ್ ಅಂಡ್ ಜೆರ್ರಿಗೆ ಸಾಕಷ್ಟು ಹೋಲಿಕೆಯಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ನಿರ್ದೇಶಕ ರಾಜಮೌಳಿಯವರು ಟಾಮ್ ಅಂಡ್ ಜೆರ್ರಿಯನ್ನೇ ಸ್ಪೂರ್ತಿಯಾಗಿಟ್ಟುಕೊಂಡು ತ್ರಿಬಲ್​ ಆರ್​​ ಸಿನಿಮಾ ಮಾಡಿದರೇ? ಎಂಬ ಪ್ರಶ್ನೆ ಇದೀಗಾ ಹುಟ್ಟಿಕೊಂಡಿದೆ. ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿರುವುದು ಕೇವಲ ಒಂದು ಎಡಿಟೆಡ್​​​ ವಿಡಿಯೋ. ಹೌದು ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಟಾಮ್ ಅಂಡ್ ಜೆರ್ರಿ ಹಾಗೂ ತ್ರಿಬಲ್​ ಆರ್ ಸಿನಿಮಾದ ಕೆಲವೊಂದು ಸೀನ್​​​ಗಳು ಹೋಲಿಕೆಯಾಗುವಂತೆ ಎಡಿಟ್​​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ ಸಾಕಷ್ಟು ಹಾಸ್ಯಸ್ಪದವಾಗಿದೆ. ಇಲ್ಲಿದೆ ನೋಡಿ ವಿಡಿಯೋ.

ಇದನ್ನೂ ಓದಿ: 3ಸಾವಿರ ಅಡಿ ಎತ್ತರದಲ್ಲಿ ಬೆಟ್ಟಗಳ ಮಧ್ಯೆ ನೆಲೆಗೊಂಡ ಗಣೇಶನ ವಿಗ್ರಹ, ಇಲ್ಲಿದೆ ನೋಡಿ ವಿಡಿಯೋ

ಟ್ವಿಟರ್​​ ಬಳಕೆದಾರರಾದ @PhunnyRabia ಈ ವಿಡಿಯೋವನ್ನು ಹಂಚಿಕೊಂಡಿದ್ದು, ಆರ್​ಆರ್​​​​ಆರ್​​​ ಚಿತ್ರದ ನಿರ್ದೇಶಕರು ಟಾಮ್ ಅಂಡ್ ಜೆರ್ರಿ ಕಾರ್ಟೂನ್​​ನ್ನು ಕಾಫಿ ಮಾಡಿದ್ದರಾ? ಎಂದು ಕ್ಯಾಪ್ಷನ್​​ ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗಾ ಭಾರೀ ವೈರಲ್​​ ಆಗಿದ್ದು, ನೀವು ನೋಡಿದರಂತೂ ನಗುವುದಂತೂ ಖಂಡಿತಾ. ಅಷ್ಟೊಂದು ಹಾಸ್ಯಸ್ಪದವಾಗಿದೆ. ಮಾರ್ಚ್​ 12ರಂದು ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಪೋಸ್ಟ್​​​ ಮಾಡಲಾಗಿದ್ದು, ಮಿಲಿಯನ್​​ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಕಾಮೆಂಟ್​​ ಹಾಗೂ ಲೈಕ್​ಗಳನ್ನು ಪಡೆದುಕೊಂಡಿದೆ.

ಕೊನೆಗೂ ಟಾಮ್ ಅಂಡ್ ಜೆರ್ರಿ ಕಾರ್ಟೂನ್ ಆಸ್ಕರ್​​ ಪಡೆದುಕೊಂಡಿತು ಎಂದು ಟ್ವಿಟರ್​​ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಎಡಿಟ್​​ ಮಾಡಿದವರಿಗೆ ದೊಡ್ಡ ಸಲಾಂ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada