MM Keeravani Remuneration: ದುಬಾರಿ ಸಂಭಾವನೆ ಪಡೆಯುವ ಎಂಎಂ ಕೀರವಾಣಿ; ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಹೆಚ್ಚಿತು ಬೇಡಿಕೆ
Oscar Awards 2023 | MM Keeravani: ಆಸ್ಕರ್ ಪ್ರಶಸ್ತಿ ಪುರಸ್ಕೃತ ಎಂ.ಎಂ. ಕೀರವಾಣಿ ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಅದಕ್ಕೆ ತಕ್ಕಂತೆಯೇ ಸಂಭಾವನೆಯನ್ನೂ ಅವರು ಹೆಚ್ಚಿಸಿಕೊಳ್ಳಲಿದ್ದಾರೆ.
ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಅವರ ಹೆಸರು ಶೈನ್ ಆಗುತ್ತಿದೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ಪ್ರಶಸ್ತಿ ಪಡೆದಿದೆ. ಇದು ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಸಿನಿಮಾ ಸಂಗೀತ ಲೋಕದಲ್ಲಿ ಎಂಎಂ ಕೀರವಾಣಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಪ್ರತಿ ಸಿನಿಮಾಗೆ ಅವರು ದುಬಾರಿ ಸಂಭಾವನೆ (MM Keeravani Remuneration) ಪಡೆಯುತ್ತಾರೆ. ಈಗ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದಿರುವುದರಿಂದ ಅವರಿಗೆ ಇದ್ದ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.
ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಎಂ.ಎಂ. ಕೀರವಾಣಿ ಅವರದ್ದು ಹಿಟ್ ಕಾಂಬಿನೇಷನ್. ಈವರೆಗೂ ರಾಜಮೌಳಿ ನಿರ್ದೇಶಿಸಿದ ಎಲ್ಲ ಸಿನಿಮಾಗಳಿಗೆ ಸಂಗೀತ ನೀಡಿದ್ದು ಕೀರವಾಣಿ ಅವರು. ‘ಬಾಹುಬಲಿ’, ‘ಆರ್ಆರ್ಆರ್’ ಚಿತ್ರದ ಹಾಡುಗಳು ಸಖತ್ ಫೇಮಸ್. ಬಹುಭಾಷೆಯಲ್ಲಿ ಡಿಮ್ಯಾಂಡ್ ಸೃಷ್ಟಿಸಿಕೊಂಡಿರುವ ಕೀರವಾಣಿ ಅವರು ಪ್ರತಿ ಸಿನಿಮಾಗೆ 18 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿತ್ತು. ಈಗ ಅವರ ಸಂಬಳದಲ್ಲಿ ಗಣನೀಯವಾಗಿ ಏರಿಕೆ ಆಗಲಿದೆ.
ಆಸ್ಕರ್ ಪಡೆದವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತದೆ. ಅವರ ಕೆಲಸಗಳು ವಿಶ್ವಾದ್ಯಂತ ಗಮನ ಸೆಳೆಯುತ್ತವೆ. ಹಾಗಾಗಿ ಈ ಪ್ರತಿಷ್ಠಿತ ಅವಾರ್ಡ್ ಗಳಿಸಿದವರ ಮಾರುಕಟ್ಟೆ ಹಿರಿದಾಗುತ್ತದೆ. ಅವರಿಗೆ ವಿಶ್ವಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗುತ್ತದೆ. ಈಗ ಎಂಎಂ ಕೀರವಾಣಿ ಅವರಿಗೂ ಅದೇ ರೀತಿ ಜನಪ್ರಿಯತೆ ಸಿಕ್ಕಿದೆ. ಅದಕ್ಕೆ ತಕ್ಕಂತೆಯೇ ಸಂಭಾವನೆಯನ್ನೂ ಹೆಚ್ಚಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: MM Keeravani’s Best Songs: ಆಸ್ಕರ್ ಗೆದ್ದ ಎಂಎಂ ಕೀರವಾಣಿಯ ಬೆಸ್ಟ್ ಹಾಡುಗಳು ಇವೇ ನೋಡಿ
ರಾಜಮೌಳಿ ಅವರು ಮುಂಬರುವ ದಿನಗಳಲ್ಲಿ ಹಾಲಿವುಡ್ಗೆ ಲಗ್ಗೆ ಇಡುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಅವರು ಜಾಗತಿಕ ಮಟ್ಟದಲ್ಲಿ ಸಿನಿಮಾ ಮಾಡಿದರೆ ಆ ಚಿತ್ರಕ್ಕೂ ಕೂಡ ಎಂಎಂ ಕೀರವಾಣಿ ಅವರೇ ಸಂಗೀತ ನೀಡುತ್ತಾರೆ ಎಂಬುದು ಖಚಿತ. ಆಗ ಅವರ ವ್ಯಾಪ್ತಿ ಇನ್ನಷ್ಟು ಹಿರಿದಾಗುತ್ತದೆ. ಹಾಲಿವುಡ್ ಪ್ರೊಡಕ್ಷನ್ ಕಂಪನಿಗಳ ಜೊತೆ ಕೈ ಜೋಡಿಸಿದರೆ ನಿರೀಕ್ಷೆಗೂ ಮೀರಿದ ಸಂಭಾವನೆ ಎಂಎಂ ಕೀರವಾಣಿ ಅವರ ಕೈ ಸೇರಲಿದೆ.
ಇದನ್ನೂ ಓದಿ: MM Keeravani: ಕನ್ನಡ ಚಿತ್ರರಂಗಕ್ಕೂ ಇದೆ ಎಂಎಂ ಕೀರವಾಣಿ ಕೊಡುಗೆ; ಆಸ್ಕರ್ ಗೆದ್ದ ಸಂಗೀತ ನಿರ್ದೇಶಕನಿಗೆ ಕರುನಾಡ ನಂಟು
ಆಸ್ಕರ್ ಪ್ರಶಸ್ತಿ ಮಾತ್ರವಲ್ಲದೇ, ಒಮ್ಮೆ ರಾಷ್ಟ್ರ ಪ್ರಶಸ್ತಿ, 8 ಬಾರಿ ಫಿಲ್ಮ್ಫೇರ್ ಪ್ರಶಸ್ತಿ, 11 ಬಾರಿ ‘ನಂದಿ ಅವಾರ್ಡ್ಸ್’ ಪಡೆದುಕೊಂಡ ಖ್ಯಾತಿ ಎಂಎಂ ಕೀರವಾಣಿ ಅವರಿಗೆ ಸಲ್ಲುತ್ತದೆ. ಸಂಗೀತ ನಿರ್ದೇಶನದ ಜೊತೆಗೆ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ತಮಿಳು, ಹಿಂದಿ ಹಾಗೂ ಕನ್ನಡದ ಕೆಲವು ಸಿನಿಮಾಗಳಿಗೂ ಕೂಡ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:15 pm, Mon, 13 March 23