Ram Charan: ‘ಭಾರತೀಯರಿಗೆ ಆಸ್ಕರ್ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್ ಗೋಲ್ಡ್ ಮೆಡಲ್ ಇದ್ದಂಗೆ’: ರಾಮ್ ಚರಣ್
RRR Movie | Oscar Awards: ರಾಮ್ ಚರಣ್ ಅವರು ಲಾಸ್ ಏಂಜಲಿಸ್ನಲ್ಲಿ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಆಸ್ಕರ್ ಪ್ರಶಸ್ತಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನಟ ರಾಮ್ ಚರಣ್ (Ram Charan) ಅವರು ಈಗ ಅಮೆರಿಕದಲ್ಲಿದ್ದಾರೆ. ಅವರ ಜೊತೆ ಎಸ್.ಎಸ್. ರಾಜಮೌಳಿ, ಜೂನಿಯರ್ ಎನ್ಟಿಆರ್, ಎಂಎಂ ಕೀರವಾಣಿ ಮುಂತಾದವರು ಕೂಡ ಅಲ್ಲಿಗೆ ತೆರಳಿದ್ದಾರೆ. 95ನೇ ಸಾಲಿನ ಆಸ್ಕರ್ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ‘ಆರ್ಆರ್ಆರ್’ (RRR Movie) ಸಿನಿಮಾದ ‘ನಾಟು ನಾಟು..’ ಹಾಡು ಈ ಬಾರಿ ನಾಮಿನೇಟ್ ಆಗಿರುವುದರಿಂದ ನಿರೀಕ್ಷೇ ಜೋರಾಗಿದೆ. ಭಾರತೀಯರ ಪಾಲಿಗೆ ಆಸ್ಕರ್ ಎಂದರೆ ಹೆಮ್ಮೆಯ ಸಂಗತಿ. ಅದನ್ನು ರಾಮ್ ಚರಣ್ ಅವರು ತಮ್ಮದೇ ಮಾತುಗಳಲ್ಲಿ ವಿವರಿಸಿದ್ದಾರೆ. ‘ನಮಗೆ ಆಸ್ಕರ್ ಎಂದರೆ ಒಲಂಪಿಕ್ಸ್ ಬಂಗಾರದ ಪದಕಕ್ಕೆ ಸಮ’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಸಿನಿಮಾಗಳು ತಯಾರಾಗುತ್ತವೆ. ಆದರೆ ಆಸ್ಕರ್ ಅಂಗಳದವರೆಗೆ ಹೋಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾವೊಂದು ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಇದು ಎಲ್ಲರಿಗೂ ಹೆಮ್ಮೆ ತಂದಿದೆ. ರಾಮ್ ಚರಣ್ ಅವರು ಲಾಸ್ ಏಂಜಲಿಸ್ನಲ್ಲಿ ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಮೊದಲ ಮಗುವಿಗೆ ಜನ್ಮ ನೀಡ್ತಾರಾ ರಾಮ್ ಚರಣ್ ಪತ್ನಿ ಉಪಾಸನಾ? ಇಲ್ಲಿದೆ ಸ್ಪಷ್ಟನೆ..
‘ಬರೀ ನಟರು ಮಾತ್ರವಲ್ಲ, ಈ ಪ್ರಶಸ್ತಿಗಾಗಿ ಭಾರತದಲ್ಲಿ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಒಲಂಪಿಕ್ಸ್ನಲ್ಲಿ ನಾನು ಓಡದೇ ಇರಬಹುದು. ಆದರೆ ನಮ್ಮ ದೇಶದ ಆಟಗಾರರು ಆ ಮೆಡಲ್ ಹಿಡಿದುಕೊಂಡಾಗ ನಾವೇ ಹಿಡಿದಿರುವಂತೆ ಫೀಲ್ ಆಗುತ್ತದೆ. ಅದೇ ರೀತಿ ನಮಗೆ ಆಸ್ಕರ್ ಎಂಬುದು ಒಲಂಪಿಕ್ಸ್ ಗೋಲ್ಡ್ ಮೆಡಲ್ಗೆ ಸರಿಸಮನಾಗಿ ಇರುವಂಥದ್ದು’ ಎಂದು ರಾಮ್ ಚರಣ್ ಹೇಳಿದ್ದಾರೆ.
ಇದನ್ನೂ ಓದಿ: Oscar 2023: ‘ಆಸ್ಕರ್ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್ ಚರಣ್ ಬಳಿ ಶಾರುಖ್ ಖಾನ್ ಮನವಿ
‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡಿಗೆ ಧ್ವನಿ ನೀಡಿರುವ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲ ಭೈರವ ಅವರು ಆಸ್ಕರ್ ವೇದಿಕೆಯಲ್ಲಿ ಈ ಗೀತೆ ಹಾಡಲಿದ್ದಾರೆ. ಅದೇ ವೇಳೆ ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅವರು ವೇದಿಕೆಯಲ್ಲಿ ಡ್ಯಾನ್ಸ್ ಮಾಡುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದಾಗಿ ಭಾರತೀಯರಿಗೆ ಈ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭ ಬಹಳ ಸ್ಪೆಷಲ್ ಎನಿಸಿಕೊಳ್ಳಲಿದೆ.
ಇದನ್ನೂ ಓದಿ: Suriya: ‘ಆಸ್ಕರ್ 2023’ ಸ್ಪರ್ಧೆಗೆ ಮತ ಚಲಾಯಿಸಿದ ಸೂರ್ಯ; ಅಕಾಡೆಮಿ ಸದಸ್ಯತ್ವ ಹೊಂದಿರುವ ದಕ್ಷಿಣದ ಏಕೈಕ ನಟ
ನಟಿ ದೀಪಿಕಾ ಪಡುಕೋಣೆ ಅವರು 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟ್ರೋಫಿ ನೀಡಲಿದ್ದಾರೆ. ಇದಕ್ಕಾಗಿ ಅವರು ಈಗಾಗಲೇ ಲಾಸ್ ಏಂಜಲಿಸ್ಗೆ ತೆರಳಿದ್ದಾರೆ. ಅವರನ್ನು ಆಸ್ಕರ್ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಅವರಿಗೆ ಈ ಅವಕಾಶ ಸಿಕ್ಕಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:52 am, Fri, 10 March 23