AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suriya: ‘ಆಸ್ಕರ್​ 2023’ ಸ್ಪರ್ಧೆಗೆ ಮತ ಚಲಾಯಿಸಿದ ಸೂರ್ಯ; ಅಕಾಡೆಮಿ ಸದಸ್ಯತ್ವ ಹೊಂದಿರುವ ದಕ್ಷಿಣದ ಏಕೈಕ ನಟ

Oscar Awards | 95th Academy Awards: ಆಸ್ಕರ್​ ಸ್ಪರ್ಧೆಗೆ ವೋಟ್​ ಮಾಡಿರುವ ವಿಷಯವನ್ನು ​ಟ್ವಿಟರ್​ ಮೂಲಕ ಸೂರ್ಯ ಅವರು ಖಚಿತಪಡಿಸಿದ್ದಾರೆ. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Suriya: ‘ಆಸ್ಕರ್​ 2023’ ಸ್ಪರ್ಧೆಗೆ ಮತ ಚಲಾಯಿಸಿದ ಸೂರ್ಯ; ಅಕಾಡೆಮಿ ಸದಸ್ಯತ್ವ ಹೊಂದಿರುವ ದಕ್ಷಿಣದ ಏಕೈಕ ನಟ
ಸೂರ್ಯ
ಮದನ್​ ಕುಮಾರ್​
|

Updated on: Mar 09, 2023 | 4:00 PM

Share

ವಿಶ್ವಾದ್ಯಂತ ಇರುವ ಸಿನಿಪ್ರಿಯರ ಗಮನವೆಲ್ಲ ಈಗ ‘ಆಸ್ಕರ್​’ ಪ್ರಶಸ್ತಿ (Oscar Award) ಮೇಲಿದೆ. ಮಾರ್ಚ್​ 13ರ ಮುಂಜಾನೆ ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ 95ನೇ ಸಾಲಿನ ಆಸ್ಕರ್​ ಅವಾರ್ಡ್ಸ್​ (95th Academy Awards) ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಭಾರತದ ಸಿನಿಮಾಗಳು 3 ವಿಭಾಗದಲ್ಲಿ ನಾಮಿನೇಟ್​ ಆಗಿರುವುದರಿಂದ ಯಾರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿಯಲಿದೆ ಎಂಬುದುನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಈ ನಡುವೆ ತಮಿಳಿನ ಖ್ಯಾತ ನಟ ಸೂರ್ಯ (Suriya) ಅವರು ಆಸ್ಕರ್​ ಸ್ಪರ್ಧೆಗೆ ತಮ್ಮ ಮತ ಚಲಾಯಿಸಿದ್ದಾರೆ. ಆಸ್ಕರ್​ ಪ್ರಶಸ್ತಿಯ ಕಮಿಟಿಯಲ್ಲಿ ಸದಸ್ಯತ್ವ ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.

ತಾವು ಆಸ್ಕರ್​ ಸ್ಪರ್ಧೆಗೆ ವೋಟ್​ ಮಾಡಿರುವ ವಿಷಯವನ್ನು ​ಟ್ವಿಟರ್​ ಮೂಲಕ ಸೂರ್ಯ ಅವರು ಖಚಿತಪಡಿಸಿದ್ದಾರೆ. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಸೂರ್ಯ ಅವರು ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ‘ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​’ ಸದಸ್ಯತ್ವ ನೀಡಲಾಗಿದೆ. ಈ ಬಾರಿ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಸ್ಪರ್ಧೆಯಲ್ಲಿದೆ. ಆ ಕಾರಣದಿಂದ ಹೆಚ್ಚು ನಿರೀಕ್ಷೆ ಮೂಡಿದೆ.

ಇದನ್ನೂ ಓದಿ
Image
‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
Image
Aamir Khan: ವಿರೋಧದ ನಡುವೆಯೂ ‘ಆಸ್ಕರ್​’ ಗಮನ ಸೆಳೆದ ‘ಲಾಲ್​ ಸಿಂಗ್​ ಚಡ್ಡಾ’; ಆಮಿರ್​ ಖಾನ್​ ಫ್ಯಾನ್ಸ್​ ಖುಷ್​
Image
ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ
Image
ಆಸ್ಕರ್​ ವೇದಿಕೆಯಲ್ಲಿ ನಟ ಕ್ರಿಸ್​ ರಾಕ್​ ಕೆನ್ನೆಗೆ ಹೊಡೆದ ವಿಲ್​ ಸ್ಮಿತ್​ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?

Oscar 2023: ‘ಆಸ್ಕರ್​ ಪ್ರಶಸ್ತಿ ನನಗೆ ಮುಟ್ಟಲು ಕೊಡಿ ಪ್ಲೀಸ್’: ರಾಮ್​ ಚರಣ್​ ಬಳಿ ಶಾರುಖ್​ ಖಾನ್​ ಮನವಿ​

ವೃತ್ತಿಜೀವನದಲ್ಲಿ ಸೂರ್ಯ ಅವರು ಗೆಲುವಿನ ಓಟ ಮುಂದುವರಿಸಿದ್ದಾರೆ. ಅವರು ನಟಿಸಿದ ‘ಸೂರರೈ ಪೋಟ್ರು’ ಹಾಗೂ ‘ಜೈ ಭೀಮ್​’ ಸಿನಿಮಾಗಳಿಗೆ ಅಪಾರ ಜನಮೆಚ್ಚುಗೆ ಸಿಕ್ಕಿದೆ. ಕಳೆದ ವರ್ಷ ತೆರೆಕಂಡ ‘ವಿಕ್ರಮ್​’ ಸಿನಿಮಾದಲ್ಲಿ ರೋಲೆಕ್ಸ್​ ಪಾತ್ರದ ಮೂಲಕ ಸೂರ್ಯ ಮಿಂಚು ಹರಿಸಿದ್ದಾರೆ. ಹಲವು ಆಫರ್​ಗಳನ್ನು ಕೈಯಲ್ಲಿ ಇಟ್ಟುಕೊಂಡು ಅವರು ಮುನ್ನುಗ್ಗುತ್ತಿದ್ದಾರೆ. ಆಗ ಆಸ್ಕರ್​ ಸ್ಪರ್ಧೆಗೆ ಮತ ಚಲಾಯಿಸುವ ಮೂಲಕ ಸುದ್ದಿ ಆಗಿದ್ದಾರೆ.

ಆಸ್ಕರ್​ ಟ್ರೋಫಿ ನೀಡಲಿರುವ ದೀಪಿಕಾ ಪಡುಕೋಣೆ:

95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಆಸ್ಕರ್​ ಪ್ರಶಸ್ತಿ ಗೆದ್ದವರಿಗೆ ನಟಿ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ. ಹಲವು ಹಾಲಿವುಡ್​ ಸೆಲೆಬ್ರಿಟಿಗಳ ಜೊತೆ ಇಂಥ ಅವಕಾಶ ಪಡೆದ ಭಾರತದ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ. ಈ ಸುದ್ದಿ ಕೇಳಿ ದೀಪಿಕಾ ಪಡುಕೋಣೆ ಫ್ಯಾನ್ಸ್​ ಖುಷಿ ಆಗಿದ್ದಾರೆ. ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಆ ಅವಕಾಶ ಸಿಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More