Samantha: ಸಮಂತಾ ಮುಖದಲ್ಲಿ ಮತ್ತೆ ಅರಳಿತು ನಗು; 4 ವಿಶೇಷ ಕಾರಣಕ್ಕೆ ಸಂಭ್ರಮಿಸಿದ ‘ಖುಷಿ’ ಚಿತ್ರತಂಡ
Samantha Ruth Prabhu | Vijay Deverakonda: ಸಮಂತಾ ಅವರ ಅನಾರೋಗ್ಯದಿಂದ ಶೂಟಿಂಗ್ ನಿಂತಿದ್ದಕ್ಕಾಗಿ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಆಗಿತ್ತು. ಈಗ ಸಮಂತಾ ಮರಳಿ ಬಂದಿರುವುದರಿಂದ ಮತ್ತೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ.
ಜನಪ್ರಿಯ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರ ಜೀವನದಲ್ಲಿ ಹೊಸ ಬೆಳಕು ಮೂಡುತ್ತಿದೆ. Myositis ಕಾಯಿಲೆಯಿಂದ ಬಳಲುತ್ತಿದ್ದ ಅವರು ಈಗ ಚೇತರಿಸಿಕೊಂಡಿದ್ದಾರೆ. ಮೊದಲಿನಂತೆ ಸ್ಟ್ರಾಂಗ್ ಆಗಿ ಸಿನಿಮಾದ ಕೆಲಸಗಳಿಗೆ ಮರಳಿದ್ದಾರೆ. ಚಿಕಿತ್ಸೆ ಮತ್ತು ವಿಶ್ರಾಂತಿ ಸಲುವಾಗಿ ಬ್ರೇಕ್ ತೆಗೆದುಕೊಂಡಿದ್ದ ಅವರು ಈಗ ‘ಖುಷಿ’ ಚಿತ್ರದ (Kushi Movie) ಶೂಟಿಂಗ್ಗೆ ಮರಳಿದ್ದಾರೆ. ಅವರು ಸೆಟ್ಗೆ ಕಾಲಿಡುತ್ತಿದ್ದಂತೆಯೇ ಇಡೀ ಸಿನಿಮಾ ತಂಡದವರು ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಸಮಂತಾ (Samantha) ಅವರು ಶೂಟಿಂಗ್ಗೆ ಮರಳಿರುವುದು ಮಾತ್ರವೇ ಈ ಖುಷಿಗೆ ಕಾರಣವಲ್ಲ. ಇನ್ನೂ ಮೂರು ಸ್ಪೆಷಲ್ ಕಾರಣಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಸಮಂತಾ ಅವರು ‘ಸಿಟಾಡೆಲ್’ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅದರ ಶೂಟಿಂಗ್ ಭರದಿಂದ ಸಾಗುತ್ತಿದೆ. ಅನಾರೋಗ್ಯದ ಸಮಸ್ಯೆ ಏನೇ ಇದ್ದರೂ ಕೂಡ ಸಾಕಷ್ಟು ಕಷ್ಟಪಟ್ಟು ಅವರು ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದಾರೆ. ಸಮಂತಾ ಅಭಿಮಾನಿಗಳ ಖುಷಿಗೆ ಇದು ಸಹ ಒಂದು ಕಾರಣ. ಇನ್ನು, ಸಮಂತಾ ಅವರು ಚಿತ್ರರಂಗಕ್ಕೆ ಕಾಲಿಟ್ಟು 13 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಆ ಕಾರಣದಿಂದಲೂ ‘ಖುಷಿ’ ತಂಡದವರು ಕೇಕ್ ಕಟ್ ಮಾಡಿದ್ದಾರೆ. ‘ಮಹಿಳಾ ದಿನಾಚರಣೆ’ ಸಂದರ್ಭದಲ್ಲೇ ಅವರು ‘ಖುಷಿ’ ಸಿನಿಮಾದ ಶೂಟಿಂಗ್ಗೆ ಬಂದಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಚಿತ್ರತಂಡದವರು ಸಮಂತಾ ಜೊತೆ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: Samantha: ನಾಗ ಚೈತನ್ಯಗೆ ಮತ್ತೆ ಕಾಡಿತು ಮಾಜಿ ಪತ್ನಿ ಸಮಂತಾ ನೆನಪು; ಹಳೇ ಫೋಟೋ ಹಂಚಿಕೊಂಡ ನಟ
ಸಮಂತಾ ರುತ್ ಪ್ರಭು ಅವರು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದಾರೆ. ‘ಪುಷ್ಪ’ ಸಿನಿಮಾದ ‘ಹೂ ಅಂತಿಯಾ ಮಾವ..’ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ನಲ್ಲಿ ನಟಿಸಿದ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್ ಹೆಚ್ಚಾಗಿತ್ತು. ಆದರೆ ಅದೇ ಸಮಯಕ್ಕೆ ಅವರಿಗೆ Myositis ಕಾಯಿಲೆ ಬಂದಿದ್ದರಿಂದ ಹೊಸ ಅವಕಾಶಗಳನ್ನು ಒಪ್ಪಿಕೊಳ್ಳುವುದು ಕಷ್ಟ ಆಯಿತು. ಈಗಾಗಲೇ ಒಪ್ಪಿಕೊಂಡಿದ್ದ ಪ್ರಾಜೆಕ್ಟ್ಗಳನ್ನು ಮುಗಿಸುದು ಕೂಡ ಕಷ್ಟವಾಯಿತು. ಹಾಗಾಗಿ ಅವರು ‘ಖುಷಿ’ ಚಿತ್ರದ ಶೂಟಿಂಗ್ಗೆ ಬ್ರೇಕ್ ನೀಡಬೇಕಾಯಿತು.
The Fighter @Samanthaprabhu2 is back to #Kushi sets@TheDeverakonda @MythriOfficial @HeshamAWMusic musical Everything is going to be beautiful ❤️ pic.twitter.com/TL1VSapWDU
— Shiva Nirvana (@ShivaNirvana) March 8, 2023
‘ಖುಷಿ’ ಸಿನಿಮಾಗೆ ವಿಜಯ್ ದೇವರಕೊಂಡ ಹೀರೋ. ಸಮಂತಾ ಅವರ ಡೇಟ್ಸ್ ಇಲ್ಲದ ಕಾರಣ ವಿಜಯ್ ಕೂಡ ಶೂಟಿಂಗ್ ಮಾಡದೇ ಸುಮ್ಮನೆ ಕೂರುವುದು ಅನಿವಾರ್ಯ ಆಯಿತು. ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡುತ್ತಿದೆ. ಶೂಟಿಂಗ್ ನಿಂತಿದ್ದರಿಂದ ಸಾಕಷ್ಟು ನಷ್ಟ ಕೂಡ ಆಗಿದೆ. ಆದರೆ ಈಗ ಸಮಂತಾ ಅವರು ಮರಳಿ ಬಂದಿರುವುದರಿಂದ ಆದಷ್ಟು ಬೇಗ ಚಿತ್ರೀಕರಣ ಮುಗಿಸಲು ಚಿತ್ರತಂಡ ಶ್ರಮಿಸುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:59 pm, Thu, 9 March 23