AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ನಾಗ ಚೈತನ್ಯಗೆ ಮತ್ತೆ ಕಾಡಿತು ಮಾಜಿ ಪತ್ನಿ ಸಮಂತಾ ನೆನಪು; ಹಳೇ ಫೋಟೋ ಹಂಚಿಕೊಂಡ ನಟ

Samantha | Ye Maaya Chesave: ನಾಗ ಚೈತನ್ಯ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ‘ಏ ಮಾಯಾ ಚೇಸಾವೆ’ ಸಿನಿಮಾದ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾಜಿ ಪತ್ನಿ ಸಮಂತಾ ಫೋಟೋ ಇದೆ.

Samantha: ನಾಗ ಚೈತನ್ಯಗೆ ಮತ್ತೆ ಕಾಡಿತು ಮಾಜಿ ಪತ್ನಿ ಸಮಂತಾ ನೆನಪು; ಹಳೇ ಫೋಟೋ ಹಂಚಿಕೊಂಡ ನಟ
ನಾಗ ಚೈತನ್ಯ, ಸಮಂತಾ ರುತ್ ಪ್ರಭು
ಮದನ್​ ಕುಮಾರ್​
|

Updated on: Feb 26, 2023 | 5:50 PM

Share

ಟಾಲಿವುಡ್ ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್​ ಪ್ರಭು ಅವರನ್ನು ಜೋಡಿಯಾಗಿ ನೋಡಲು ಅಭಿಮಾನಿಗಳು ಸಖತ್​ ಇಷ್ಟಪಡುತ್ತಾರೆ. ಆದರೆ ಅವರಿಬ್ಬರು ವಿಚ್ಛೇದನ ಪಡೆದುಕೊಂಡಿರುವುದರಿಂದ ಮತ್ತೆ ಜೋಡಿಯಾಗಿ ನಟಿಸುವುದಾಗಲಿ, ಒಟ್ಟಿಗೆ ಕಾಣಿಸಿಕೊಳ್ಳುವುದಾಗಲಿ ಅಸಾಧ್ಯ. ಡಿವೋರ್ಸ್​ ಪಡೆದ ಬಳಿಕ ಸಮಂತಾ (Samantha Ruth Prabhu) ಮತ್ತು ನಾಗ ಚೈತನ್ಯ ಅವರು ಬೇರೆ ಬೇರೆ ಹಾದಿಯಲ್ಲಿ ಸಾಗುತ್ತಿದ್ದಾರೆ. ಒಬ್ಬರಿಬೊಬ್ಬರು ಸಂಬಂಧವೇ ಇಲ್ಲ ಎಂಬಂತೆ ಬದುಕುತ್ತಿದ್ದಾರೆ. ಆದರೆ ನೆನಪುಗಳು ಕೆಲವೊಮ್ಮೆ ಅವರನ್ನು ಕಾಡುತ್ತವೆ. ಹೌದು, ನಾಗ ಚೈತನ್ಯ ಅವರಿಗೆ ಈಗ ಮಾಜಿ ಪತ್ನಿ ಸಮಂತಾ ಅವರ ನೆನಪಾಗಿದೆ. ಅದಕ್ಕೆ ಕಾರಣವೂ ಇದೆ. ಇಬ್ಬರೂ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ‘ಏ ಮಾಯಾ ಚೇಸಾವೆ’ (Ye Maaya Chesave) ತೆರೆಕಂಡು 13 ವರ್ಷ ಪೂರ್ಣಗೊಂಡಿದೆ.

ಸಮಂತಾ ರುತ್​ ಪ್ರಭು ಮತ್ತು ಅಕ್ಕಿನೇನಿ ನಾಗ ಚೈತನ್ಯ ಅವರು ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ‘ಏ ಮಾಯಾ ಚೇಸಾವೆ’ ತೆರೆಕಂಡಿದ್ದು 2010ರ ಫೆಬ್ರವರಿ 26ರಂದು. ಅದಾಗಿ 13 ವರ್ಷ ಪೂರ್ಣಗೊಂಡಿದೆ. ಇಬ್ಬರ ವೃತ್ತಿಬದುಕಿಗೂ ಆ ಸಿನಿಮಾ ದೊಡ್ಡ ಬೂಸ್ಟ್​ ನೀಡಿತ್ತು. ಇಂದಿಗೂ ಅಭಿಮಾನಿಗಳ ಫೇವರಿಟ್​ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಜಾಗವಿದೆ. ಅದರ ಪ್ರತಿ ದೃಶ್ಯಗಳನ್ನು ಅಭಿಮಾನಿಗಳು ಈಗ ಮೆಲುಕು ಹಾಕುತ್ತಿದ್ದಾರೆ. ನಾಗ ಚೈತನ್ಯ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ‘ಏ ಮಾಯಾ ಚೇಸಾವೆ’ ಸಿನಿಮಾದ ಪೋಸ್ಟರ್​ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾಜಿ ಪತ್ನಿ ಸಮಂತಾ ಫೋಟೋ ಇದೆ.

ಇದನ್ನೂ ಓದಿ: Samantha: ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ರಿಸ್ಕ್​ ತೆಗೆದುಕೊಳ್ತಾರಾ ಸಮಂತಾ ರುತ್​ ಪ್ರಭು?

ಇದನ್ನೂ ಓದಿ
Image
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Image
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Image
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
Image
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಅಭಿಮಾನಿಗಳಿಗೆ ಮಾತ್ರವಲ್ಲದೇ ಸಮಂತಾ ರುತ್​ ಪ್ರಭು ಅವರಿಗೂ ‘ಏ ಮಾಯಾ ಚೇಸಾವೆ’ ಚಿತ್ರ ವಿಶೇಷವಾದದ್ದು. ಯಾಕೆಂದರೆ ಅದು ಅವರ ಚೊಚ್ಚಲ ಸಿನಿಮಾ. ಆ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ‘ಫಿಲ್ಮ್​ ಫೇರ್​ ಅವಾರ್ಡ್​’ ಸಿಕ್ಕಿತ್ತು. ಮೊದಲ ಚಿತ್ರವೇ ಸೂಪರ್​ ಹಿಟ್​ ಆಗಿದ್ದರಿಂದ ಟಾಲಿವುಡ್​ನಲ್ಲಿ ಅವರು ಭದ್ರವಾಗಿ ನೆಲೆ ಕಂಡುಕೊಳ್ಳಲು ಸಾಧ್ಯವಾಯ್ತು.

ಇದನ್ನೂ ಓದಿ: Samantha: ಸಮಂತಾ ಆರೋಗ್ಯ ಇಷ್ಟೊಂದು ಸುಧಾರಿಸಿತಾ? ನಟಿಯ ವರ್ಕೌಟ್​ ವಿಡಿಯೋ ನೋಡಿದವರಿಗೆ ಅಚ್ಚರಿ

‘ಏ ಮಾಯಾ ಚೇಸಾವೆ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಮಂತಾ ಅವರು ಇಂದು ಚಿತ್ರರಂಗದಲ್ಲಿ 13 ವರ್ಷಗಳನ್ನು ಪೂರೈಸಿದ್ದಾರೆ. ಅದಕ್ಕಾಗಿ ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಟಾಲಿವುಡ್​ನಿಂದ ವೃತ್ತಿ ಜೀವನ ಆರಂಭಿಸಿದ ಅವರು ಬಳಿಕ ತಮಿಳಿನಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.

ಇದನ್ನೂ ಓದಿ: Shaakuntalam: ಏಪ್ರಿಲ್​ 14ರಂದು ರಿಲೀಸ್​ ಆಗಲಿದೆ ‘ಶಾಕುಂತಲಂ’; ಗೆಲುವಿಗಾಗಿ ಕಾದಿರುವ ನಟಿ ಸಮಂತಾ

ಇಂದು ಸಮಂತಾ ಕೈಯಲ್ಲಿ ಹಲವು ಆಫರ್​ಗಳಿವೆ. ಪೌರಾಣಿಕ ಕಥಾಹಂದರ ಹೊಂದಿರುವ ‘ಶಾಕುಂತಲಂ’ ಸಿನಿಮಾ ಏಪ್ರಿಲ್​ 14ರಂದು ಬಿಡುಗಡೆ ಆಗಲಿದೆ. ವಿಜಯ್​ ದೇವರಕೊಂಡ ಜೊತೆಗಿನ ‘ಖುಷಿ’ ಸಿನಿಮಾದ ಶೂಟಿಂಗ್​ ಸದ್ಯದಲ್ಲೇ ಪುನಾರಂಭ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More