- Kannada News Photo gallery Samantha Ruth Prabhu starrer Shaakuntalam movie will be released on 14th April
Shaakuntalam: ಏಪ್ರಿಲ್ 14ರಂದು ರಿಲೀಸ್ ಆಗಲಿದೆ ‘ಶಾಕುಂತಲಂ’; ಗೆಲುವಿಗಾಗಿ ಕಾದಿರುವ ನಟಿ ಸಮಂತಾ
Shaakuntalam New Release Date: ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಶಾಕುಂತಲಂ’ ಕೂಡ ಇದೆ. ಈ ಚಿತ್ರದಲ್ಲಿ ಸಮಂತಾ ಅವರು ಶಕುಂತಲೆ ಪಾತ್ರ ಮಾಡಿದ್ದಾರೆ.
Updated on:Feb 10, 2023 | 9:04 PM

ನಟಿ ಸಮಂತಾ ರುತ್ ಪ್ರಭು ಅವರ ‘ಶಾಕುಂತಲಂ’ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಈಗ ಹೊಸ ಬಿಡುಗಡೆ ದಿನಾಂಕ ತಿಳಿಸಲಾಗಿದೆ.

ಶೀರ್ಷಿಕೆಯೇ ಸೂಚಿಸುವಂತೆ ಇದು ಪೌರಾಣಿಕ ಕಥಾಹಂದರದ ಸಿನಿಮಾ. ಈ ಚಿತ್ರದಲ್ಲಿ ಸಮಂತಾ ಅವರು ಶಕುಂತಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಅಭಿಮಾನಿಗಳು ಈ ಚಿತ್ರವನ್ನು ನೋಡಲು ಕಾದಿದ್ದಾರೆ.

ಏಪ್ರಿಲ್ 14ರಂದು ‘ಶಾಕುಂತಲಂ’ ಸಿನಿಮಾ ಬಿಡುಗಡೆ ಆಗಲಿದೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ತಯಾರಾಗಿದೆ. ಬೃಹತ್ ಸೆಟ್ಗಳನ್ನು ಹಾಕಿ ಶೂಟಿಂಗ್ ಮಾಡಲಾಗಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ಹಾಗಾಗಿ ಹೈಪ್ ಹೆಚ್ಚಿದೆ.

ಸಮಂತಾ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ. ಅನಾರೋಗ್ಯದ ಕಾರಣದಿಂದ ಅವರು ಸಿನಿಮಾ ಕೆಲಸಗಳನ್ನು ಮುಗಿಸುವುದು ಕಷ್ಟ ಆಗುತ್ತಿದೆ. ಅದರ ನಡುವೆಯೂ ಅವರು ಕಷ್ಟಪಟ್ಟು ‘ಶಾಕುಂತಲಂ’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ.

‘ಶಾಕುಂತಲಂ’ ಸಿನಿಮಾ ಗೆದ್ದರೆ ಸಮಂತಾ ರುತ್ ಪ್ರಭು ಅವರ ವೃತ್ತಿಜೀವನಕ್ಕೆ ಮೈಲೇಜ್ ಸಿಗಲಿದೆ. ಈ ಚಿತ್ರಕ್ಕೆ ಗುಣಶೇಖರ್ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಕೂಡ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾಳೆ.
Published On - 9:04 pm, Fri, 10 February 23




