MM Keeravani’s Best Songs: ಆಸ್ಕರ್ ಗೆದ್ದ ಎಂಎಂ ಕೀರವಾಣಿಯ ಬೆಸ್ಟ್ ಹಾಡುಗಳು ಇವೇ ನೋಡಿ
ಈ ಹಾಡಿಗೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. 90ರ ದಶಕದಿಂದ ಕೀರವಾಣಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ರಾಜಮೌಳಿ ನಿರ್ದೇಶಿಸಿದ ಸಿನಿಮಾ ನಿರ್ದೇಶನದ ‘ಆರ್ಆರ್ಆರ್’ ಚಿತ್ರ ಆಸ್ಕರ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ‘ನಾಟು ನಾಟು..’ ಹಾಡು (Naatu Naatu Song) ಅಕಾಡೆಮಿ ಪ್ರಶಸ್ತಿ ಬಾಚಿಕೊಂಡಿದೆ. ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ‘ನಾಟು ನಾಟು..’ ಹಾಡನ್ನು ಉಕ್ರೇನ್ನಲ್ಲಿ 40 ದಿನಗಳ ಕಾಲ ಶೂಟ್ ಮಾಡಲಾಗಿತ್ತು. ರಾಜಮೌಳಿ (SS Rajamouli) ಪರಿಶ್ರಮ ಈಗ ಫಲ ನೀಡಿದೆ. ಈ ಹಾಡಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಅನೇಕರಿಂದ ಶುಭಾಶಯ ಬರುತ್ತಿದೆ.
ಈ ಹಾಡಿಗೆ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. 90ರ ದಶಕದಿಂದ ಕೀರವಾಣಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಈ ಅವಾರ್ಡ್ ಗೆದ್ದ ನಂತರದಲ್ಲಿ ಕೀರವಾಣಿ ಖ್ಯಾತಿ ಹೆಚ್ಚಿದೆ. ಅವರ ಬತ್ತಳಿಕೆಯಲ್ಲಿ ಮೂಡಿ ಬಂದ ಹಾಡುಗಳ ವಿವರ ಇಲ್ಲಿದೆ. ಅವುಗಳನ್ನು ನೀವು ಕೇಳಿ.
ಇದನ್ನೂ ಓದಿ: Oscar 2023: ಆಸ್ಕರ್ ಕಾರ್ಯಕ್ರಮದಲ್ಲಿ ‘ಆರ್ಆರ್ಆರ್’ ಟೀಂ; ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು
And we did it… #Oscars95 #NaatuNaatu #RRRMovie
Congratulations @mmkeeravaani Sir ji, Jakkanna @ssrajamouli , @boselyricist garu, the entire team and the nation ?? pic.twitter.com/LCGRUN4iSs
— Jr NTR (@tarak9999) March 13, 2023
ಆ ಭಿ ಜಾ ಆ ಭಿ ಜಾ
‘ಸುರ್: ದಿ ಮೆಲೋಡಿ ಆಫ್ ಲೈಫ್’ ಚಿತ್ರದ ‘ಆ ಭಿ ಜಾ ಆ ಭಿ ಜಾ..’ ಹಾಡು ಸೂಪರ್ ಹಿಟ್ ಆಯಿತು. ಲಕ್ಕಿ ಅಲಿ, ಸುನಿಧಿ ಚೌಹಾಣ್ ಈ ಹಾಡನ್ನು ಹಾಡಿದರು. ಈ ಸಾಂಗ್ಗೆ ಎಂ.ಎಂ. ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದರು.
‘ದಿಲ್ ಮೈ ಜಗಿ ಧಡ್ಕನ್ ಐಸೆ..
ಸುನಿಧಿ ಚೌಹಾಣ್ ಹಾಡಿದ ‘ದಿಲ್ ಮೈ ಜಗಿ ಧಡ್ಕನ್ ಐಸೆ..’ ಹಾಡು ಕೇಳುಗರಿಂದ ಹೆಚ್ಚು ಮಾರ್ಕ್ಸ್ ಪಡೆಯಿತು. ಈ ಹಾಡು ಗೆದ್ದಿದೆ. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಕೀರವಾಣಿ.
ಜಾನೆ ಕ್ಯಾ ಡೂಂಡ್ತಾ ಹೈ
ಈ ಹಾಡಿಗೆ ಲಕ್ಕಿ ಅಲಿ ಅವರು ಧ್ವನಿ ನೀಡಿದ್ದಾರೆ. ಹಾಡಿನ ತೂಕ ಹೆಚ್ಚಿಸಿದ್ದು ನೈಡಾ ಫಜ್ಲಿ. ಈ ಹಾಡಿನ ಮೆಲೋಡಿ ಹೆಚ್ಚಿಸಿದ್ದು ಕೀರವಾಣಿ ಸಂಗೀತ ಸಂಯೋಜನೆ.
ತು ದಿಲ್ ಕಿ ಖುಷಿ
ಲಕ್ಕಿ ಅಲಿ ಹಾಗೂ ಸುನಿಧಿ ಚೌಹಾಣ್ ಅವರು ಹಾಡಿದ ತು ದಿಲ್ ಕಿ ಖುಷಿ ಹಾಡು ಸೂಪರ್ ಹಿಟ್ ಆಯಿತು. ಕೀರವಾಣಿ ಸಂಗೀತ ಸಂಯೋಜನೆ ಅನೇಕರಿಗೆ ಇಷ್ಟವಾಯಿತು.
ಧೀವರ
‘ಬಾಹುಬಲಿ’ ಚಿತ್ರದ ‘ಧೀವರ..’ ಹಾಡು ಸಾಕಷ್ಟು ಸದ್ದು ಮಾಡಿತ್ತು. ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಕೀರವಾಣಿ. ಈ ಹಾಡನ್ನು ಕೇಳಿ ಅನೇಕರು ತಲೆದೂಗಿದ್ದರು.
ಸಾಹೋರೆ ಬಾಹುಬಲಿ
‘ಬಾಹುಬಲಿ 2’ ಚಿತ್ರದ ‘ಸಾಹೋರೆ ಬಾಹುಬಲಿ’ ಹಾಡು ಜನಪ್ರಿಯತೆ ಪಡೆಯಿತು. ಕೀರವಾಣಿ ಸಂಗೀತ ಸಂಯೋಜನೆಯಿಂದ ಈ ಹಾಡಿನ ತೂಕ ಹೆಚ್ಚಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ