AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oscar 2023: ಆಸ್ಕರ್ ಕಾರ್ಯಕ್ರಮದಲ್ಲಿ ‘ಆರ್​ಆರ್​ಆರ್​’ ಟೀಂ; ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು

2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ (ಅಮೆರಿಕದ ಕಾಲಮಾನ ರಾತ್ರಿ 8 ಗಂಟೆ)ಆರಂಭ ಆಗಿದೆ.

Oscar 2023: ಆಸ್ಕರ್ ಕಾರ್ಯಕ್ರಮದಲ್ಲಿ ‘ಆರ್​ಆರ್​ಆರ್​’ ಟೀಂ; ರೆಡ್ ಕಾರ್ಪೆಟ್ ಮೇಲೆ ನಡೆದ ಸೆಲೆಬ್ರಿಟಿಗಳು
ಜೂ.ಎನ್​​ಟಿಆರ್​, ರಾಜಮೌಳಿ, ರಾಮ್ ಚರಣ್
ರಾಜೇಶ್ ದುಗ್ಗುಮನೆ
|

Updated on: Mar 13, 2023 | 5:52 AM

Share

‘ಆಸ್ಕರ್​ 2023’ (Oscar 2023) ಕಾರ್ಯಕ್ರಮ ಆರಂಭ ಆಗಿದೆ. ‘ಆರ್​ಆರ್​ಆರ್​’ ಆ್ಯಂಡ್ ಟೀಂ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದೆ. ಚಿತ್ರದ ನಿರ್ದೇಶಕ ಎಸ್​.ಎಸ್​.ರಾಜಮೌಳಿ, ನಟ ಜೂ.ಎನ್​ಟಿಆರ್, ರಾಮ್ ಚರಣ್​, ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ (MM Kiravani) ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಲಾಸ್ ಏಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ (ಅಮೆರಿಕದ ಕಾಲಮಾನ ರಾತ್ರಿ 8 ಗಂಟೆ)ಆರಂಭ ಆಗಿದೆ. ಕೆಲವು ಗಂಟೆಗಳ ಕಾಲ ಈ ಕಾರ್ಯಮ ನಡೆಯಲಿದೆ.

ಆಸ್ಕರ್​ ಕಾರ್ಯಕ್ರಮವನ್ನು ವಿವಿಧ ಕಡೆಗಳಲ್ಲಿ ನೋಡಲು ಅವಕಾಶ ಇದೆ. ಹುಲು ಲೈವ್ ಟಿವಿನಲ್ಲಿ ಇದನ್ನು ವೀಕ್ಷಿಸಬಹುದು. ಯೂಟ್ಯೂಬ್ ಟಿವಿಯಲ್ಲೂ ನೀವು ಇದನ್ನು ಉಚಿತವಾಗಿ ವೀಕ್ಷಿಸಬಹುದು. ಎಟಿ ಆ್ಯಂಡ್ ಟಿ ಟಿವಿ ಹಾಗೂ ಫುಬೋ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಇದೆ. ಎಬಿಸಿ ವೆಬ್​ಸೈಟ್​ನಲ್ಲಿ ಆಸ್ಕರ್ ಕಾರ್ಯಕ್ರಮ ಉಚಿತವಾಗಿ ವೀಕ್ಷಿಸಬಹುದು.

ಭಾರತದ ಯಾವೆಲ್ಲ ಸಿನಿಮಾಗಳಿವೆ?

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ನಾಮಿನೇಟ್​ ಆಗಿದೆ. ಭಾರತದ ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಗಳು ಕೂಡ ನಾಮಿನೇಟ್​ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್​ ಗೆಲ್ಲುವ ಚಾನ್ಸ್​ ದಟ್ಟವಾಗಿದೆ. ಅಲಿಸನ್​ ವಿಲಿಯಮ್ಸ್​ ಮತ್ತು ರಿಝ್​ ಅಹ್ಮದ್​ ಅವರು ಈ ಬಾರಿಯ ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More