ರಾಮ್ ಚರಣ್ 15ನೇ ಚಿತ್ರಕ್ಕೆ ‘CEO’ ಟೈಟಲ್ ಫಿಕ್ಸ್? ಇದರ ಅರ್ಥ ನೀವಂದುಕೊಂಡಿದ್ದಲ್ಲ
Ram Charan Movie: ‘RC15’ ಘೋಷಣೆ ಆಗಿದ್ದು 2021ರಲ್ಲಿ. ಎರಡು ವರ್ಷ ಕಳೆದರೂ ಚಿತ್ರದ ಶೂಟಿಂಗ್ ಮುಗಿದಿಲ್ಲ, ಟೈಟಲ್ ಕೂಡ ಅನೌನ್ಸ್ ಆಗಿಲ್ಲ. ಕೊನೆಗೂ ಈ ಚಿತ್ರಕ್ಕೆ ಶಂಕರ್ ಟೈಟಲ್ ಫೈನಲ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
‘ಆರ್ಆರ್ಆರ್’ (RRR Movie) ಯಶಸ್ಸಿನ ಬಳಿಕ ರಾಮ್ ಚರಣ್ ಅವರ ಖ್ಯಾತಿ ದುಪ್ಪಟ್ಟಾಗಿದೆ. ಅವರಿಗೆ ಬೇಡಿಕೆ ಹೆಚ್ಚಿದೆ. ಹಲವು ಆಫರ್ಗಳು ಅವರನ್ನು ಹುಡುಕಿ ಬಂದಿವೆ. ಹಾಗಂತ ಬಂದ ಆಫರ್ಗಳೆಲ್ಲವನ್ನೂ ಅವರು ಒಪ್ಪಿ ನಟಿಸಿಲ್ಲ. ಕುಟುಂಬಕ್ಕೆ ಸಮಯ ಕೊಡುತ್ತಾ, ಸಿನಿಮಾ ಶೂಟಿಂಗ್ನಲ್ಲೂ ಭಾಗಿ ಆಗುತ್ತಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ರಾಮ್ ಚರಣ್ (Ram Charan) ಅವರ 15ನೇ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಮೂಲಗಳ ಪ್ರಕಾರ ಈ ಚಿತ್ರಕ್ಕೆ ‘CEO’ ಎಂಬ ಟೈಟಲ್ ಫೈನಲ್ ಆಗಿದೆಯಂತೆ. ಸಿಇಒ ಎಂದಾಕ್ಷಣ ನೆನಪಾಗೋದು ಕಂಪನಿಯ ಮುಖ್ಯಸ್ಥ ಎನ್ನುವ ಪದ. ಆದರೆ, ಇಲ್ಲಿ ‘ಸಿಇಒ’ಗೆ ಬೇರೆಯದೇ ಅರ್ಥ ಇದೆ.
ರಾಮ್ ಚರಣ್ ಅವರು ‘RC15’ ಚಿತ್ರದಲ್ಲಿ ನಿರ್ದೇಶಕ ಶಂಕರ್ ಜೊತೆ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಶಂಕರ್ ಅವರದ್ದು ದೊಡ್ಡ ಹೆಸರು. ಅವರ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ‘RC15’ ಸಾಕಷ್ಟು ಹೈಪ್ ಪಡೆದುಕೊಂಡಿದೆ. ಈ ಚಿತ್ರ ಘೋಷಣೆ ಆಗಿದ್ದು 2021ರ ಫೆಬ್ರವರಿ ತಿಂಗಳಲ್ಲಿ. ಎರಡು ವರ್ಷ ಕಳೆದರೂ ಚಿತ್ರದ ಶೂಟಿಂಗ್ ಮುಗಿದಿಲ್ಲ, ಟೈಟಲ್ ಕೂಡ ಅನೌನ್ಸ್ ಆಗಿಲ್ಲ. ಕೊನೆಗೂ ಈ ಚಿತ್ರಕ್ಕೆ ಶಂಕರ್ ಟೈಟಲ್ ಫೈನಲ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
ಈ ಚಿತ್ರದ ಫಸ್ಟ್ಲುಕ್ ಗಮನ ಸೆಳೆದಿತ್ತು. ಇದರಲ್ಲಿ ರಾಮ್ ಚರಣ್ ಅವರು ವೈಟ್ ಶರ್ಟ್ ಮೇಲೆ ಕೋಟ್ ಹಾಕಿ, ಟೈ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಸರ್ಕಾರಿ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ‘ಸಿಇಒ’ ಟೈಟಲ್ ಇಡುವುದಕ್ಕೂ ರಾಮ್ ಚರಣ್ ಪಾತ್ರಕ್ಕೂ ಕನೆಕ್ಷನ್ ಇದೆ. ಮೂಲಗಳ ಪ್ರಕಾರ ರಾಮ್ ಚರಣ್ ಅವರು ಈ ಚಿತ್ರದಲ್ಲಿ ಮುಖ್ಯ ಚುನಾವಣಾ ಅಧಿಕಾರಿ (Chief Electoral Officer) ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾಗೆ ‘ಸಿಇಒ’ ಎಂದು ಶೀರ್ಷಿಕೆ ಇಡಲಾಗಿದೆ ಎನ್ನಲಾಗುತ್ತಿದೆ. ಮಾರ್ಚ್ 27ಕ್ಕೆ ರಾಮ್ ಚರಣ್ ಜನ್ಮದಿನ. ಅಂದು ಟೈಟಲ್ ರಿವೀಲ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಮೆರಿಕದಲ್ಲಿ ಪತ್ನಿ ಜೊತೆ ರಾಮ್ ಚರಣ್ ಸುತ್ತಾಟ; ಬೇಬಿಬಂಪ್ಗಾಗಿ ಹುಡುಕಾಡಿದ ಫ್ಯಾನ್ಸ್
ರಾಮ್ ಚರಣ್ ನಟಿಸುತ್ತಿರುವ ‘ಆರ್ಸಿ15’ ಚಿತ್ರಕ್ಕೆ ಕಿಯಾರಾ ನಾಯಕಿ. 170 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಶಂಕರ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತಮನ್ ಎಸ್. ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಹಾಲಿವುಡ್ ಚಿತ್ರದಲ್ಲಿ ರಾಮ್ ಚರಣ್?
ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ನಡೆಯಲಿದೆ. ಇದಕ್ಕಾಗಿ ‘ಆರ್ಆರ್ಆರ್’ ತಂಡ ಅಮೆರಿಕದಲ್ಲಿದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ರೇಸ್ನಲ್ಲಿದೆ. ರಾಮ್ ಚರಣ್ ಕೂಡ ಅಮೆರಿಕದಲ್ಲಿದ್ದು, ಅಲ್ಲಿನ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ‘ಹಾಲಿವುಡ್ ಸ್ಟುಡಿಯೋ ಜೊತೆ ಮಾತುಕತೆ ನಡೆಯಲಿದೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗಲಿದೆ’ ಎಂದು ಅವರು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ