‘ಪ್ರಾಜೆಕ್ಟ್​ ಕೆ’ ಕಥೆ ರಿವೀಲ್ ಮಾಡಿದ ನಿರ್ಮಾಪಕ; ವಿಷ್ಣುವಿನ ಆಧುನಿಕ ಅವತಾರದಲ್ಲಿ ಬರಲಿದ್ದಾರೆ ಪ್ರಭಾಸ್

Project K Movie: ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಅಮಿತಾಭ್​ ಬಚ್ಚನ್, ದಿಶಾ ಪಟಾಣಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಪ್ರಾಜೆಕ್ಟ್​ ಕೆ’ ಕಥೆ ರಿವೀಲ್ ಮಾಡಿದ ನಿರ್ಮಾಪಕ; ವಿಷ್ಣುವಿನ ಆಧುನಿಕ ಅವತಾರದಲ್ಲಿ ಬರಲಿದ್ದಾರೆ ಪ್ರಭಾಸ್
ಪ್ರಭಾಸ್
Follow us
ರಾಜೇಶ್ ದುಗ್ಗುಮನೆ
|

Updated on:Mar 01, 2023 | 12:57 PM

ಪ್ರಭಾಸ್ (Prabhas) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್​ ಕೆ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ನಾಗ್ ಅಶ್ವಿನ್ (Nag Ashwin) ನಿರ್ದೇಶನದ ಈ ಸಿನಿಮಾ 2024ರಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಸಾಕಷ್ಟು ವಿಎಫ್​ಎಕ್ಸ್​ ಬಳಕೆ ಆಗಿದೆ. ಇತ್ತೀಚೆಗೆ ಚಿತ್ರದ ಸಿನಿಮಾ ರಿಲೀಸ್ ದಿನಾಂಕ ರಿವೀಲ್ ಆಗಿತ್ತು. ಜನವರಿ 12ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾದ ಕಥೆ ಬಗ್ಗೆ ಈಗ ನಿರ್ಮಾಪಕ ಅಶ್ವಿನಿ ದತ್ ಅವರು ಮಾಹಿತಿ ರಿವೀಲ್ ಮಾಡಿದ್ದಾರೆ. ‘ವೈಜಯಂತಿ ಮೂವೀಸ್​’ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ‘ವಿಷ್ಣುವಿನ ಆಧುನಿಕ ಅವತಾರದಲ್ಲಿ ಚಿತ್ರದ ಕಥೆ ಸಾಗಲಿದೆ’ ಎಂದು ಅಶ್ವಿನಿ ಹೇಳಿದ್ದಾರೆ.

‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಅಮಿತಾಭ್​ ಬಚ್ಚನ್, ದಿಶಾ ಪಟಾಣಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಥೆ ಏನು, ಸಿನಿಮಾದಲ್ಲಿ ಪ್ರಭಾಸ್ ಲುಕ್ ಹೇಗಿದೆ ಎಂಬಿತ್ಯಾದಿ ವಿಚಾರಗಳು ಗುಟ್ಟಾಗೇ ಇದ್ದವು. ಈಗ ‘ಪ್ರಾಜೆಕ್ಟ್​ ಕೆ’ ಚಿತ್ರದ ಕಥೆ ಏನು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ.

‘ಈ ಚಿತ್ರದಲ್ಲಿ ಗ್ರಾಫಿಕ್ಸ್ ಹೈಲೈಟ್ ಆಗಲಿದೆ. ನಾವು ಗ್ರಾಫಿಕ್ಸ್‌ನ ಕೆಲಸವನ್ನು ಪ್ರಾರಂಭಿಸಿ ಐದು ತಿಂಗಳಾಗಿದೆ. ಸಿನಿಮಾದ ಶೇ. 70 ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಿನಿಮಾ ಫ್ಯಾಂಟಸಿ ಮತ್ತು ವೈಜ್ಞಾನಿಕ- ಅಂಶಗಳನ್ನು ಹೊಂದಿದೆ. ಇದು ವಿಷ್ಣುವಿನ ಆಧುನಿಕ ಅವತಾರ. ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಕಂಪೋಸ್ ಮಾಡಲು ನಾಲ್ಕೈದು ಅಂತರಾಷ್ಟ್ರೀಯ ಸ್ಟಂಟ್ ಕೊರಿಯೋಗ್ರಾಫರ್‌ಗಳನ್ನು ನೇಮಿಸಿಕೊಂಡಿದ್ದೇವೆ. ಚಿತ್ರದ ದೃಶ್ಯಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ’ ಎಂದಿದ್ದಾರೆ ಅಶ್ವಿನಿ ದತ್​.

ಇತ್ತೀಚೆಗೆ ಸಿನಿಮಾಗಳು ಎರಡು ಪಾರ್ಟ್​ನಲ್ಲಿ ರಿಲೀಸ್ ಮಾಡುವ ಟ್ರೆಂಡ್ ಜೋರಾಗಿದೆ. ‘ಪ್ರಾಜೆಕ್ಟ್​ ಕೆ’ ಸಿನಿಮಾ ಕೂಡ ಎರಡು ಪಾರ್ಟ್​ನಲ್ಲಿ ಬರುತ್ತಿದೆ. ಚಿತ್ರದ ಕಥೆ ಬಹಳ ದೊಡ್ಡದಾಗಿದೆ. ಹೀಗಾಗಿ ಅದನ್ನು ಎರಡು ಪಾರ್ಟ್​ಗಳಲ್ಲಿ ತರಲು ನಾಗ್ ಅಶ್ವಿನ್ ನಿರ್ಧರಿಸಿದ್ದಾರೆ.

ಸಲಾರ್-ಆದಿ ಪುರುಷ್ ಚಿತ್ರದ ಬಗ್ಗೆ ನಿರೀಕ್ಷೆ:

ಪ್ರಭಾಸ್​ ಅವರು ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ‘ಕೆಜಿಎಫ್’ ಯಶಸ್ಸಿನ ಬಳಿಕ ಪ್ರಶಾಂತ್​ ನೀಲ್​ ಕೈಗೆತ್ತಿಕೊಂಡ ಚಿತ್ರವಾದ್ದರಿಂದ ಹೈಪ್​ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಶ್ರುತಿ ಹಾಸನ್​ ನಟಿಸುತ್ತಿದ್ದಾರೆ.

‘ಸಲಾರ್​’ ಚಿತ್ರಕ್ಕಿಂತಲೂ ಮುನ್ನ ‘ಆದಿ ಪುರುಷ್​’ ಸಿನಿಮಾ ಬಿಡುಗಡೆ ಆಗಲಿದೆ. ರಾಮಾಯಣದ ಕಥೆಯನ್ನು ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರ ಮಾಡುತ್ತಿದ್ದಾರೆ. ಜೂನ್ 16ರಂದು ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:16 am, Tue, 28 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ