ಹಾಲಿವುಡ್​ ಅವಾರ್ಡ್​ ಫಂಕ್ಷನ್​ಗೆ ಜೂ.ಎನ್​ಟಿಆರ್​ಗೆ ಇರಲಿಲ್ಲ ಆಹ್ವಾನ? ಸ್ಪಷ್ಟನೆ ನೀಡಿದ ಆಯೋಜಕರು

ರಾಜಮೌಳಿ, ರಾಮ್ ಚರಣ್, ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಜೂ.ಎನ್​ಟಿಆರ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಹಾಲಿವುಡ್​ ಅವಾರ್ಡ್​ ಫಂಕ್ಷನ್​ಗೆ ಜೂ.ಎನ್​ಟಿಆರ್​ಗೆ ಇರಲಿಲ್ಲ ಆಹ್ವಾನ? ಸ್ಪಷ್ಟನೆ ನೀಡಿದ ಆಯೋಜಕರು
ಜೂನಿಯರ್​ ಎನ್​ಟಿಆರ್​
Follow us
ರಾಜೇಶ್ ದುಗ್ಗುಮನೆ
|

Updated on:Feb 28, 2023 | 3:29 PM

‘ಆರ್​ಆರ್​ಆರ್​’ ಸಿನಿಮಾ (RRR Movie) ಸದ್ಯ ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಹಾಲಿವುಡ್​ ಅಂಗಳದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಿರುವ ಭಾರತದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘ಆರ್​ಆರ್​ಆರ್​’ ಭಾಗಿ ಆಗಿದೆ. ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ಇಡೀ ತಂಡ ಭಾಗಿ ಆಗುತ್ತಿದೆ. ಇತ್ತೀಚೆಗೆ ‘ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್​’ ಕಾರ್ಯಕ್ರಮ ನಡೆದಿದೆ. ‘ಆರ್​ಆರ್​ಆರ್​’ ಸಿನಿಮಾ ಇದರಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಬೇಸರದ ವಿಚಾರ ಎಂದರೆ ರಾಮ್ ಚರಣ್ ಹಾಗೂ ಎಸ್.ಎಸ್​. ರಾಜಮೌಳಿ (SS Rajamouli) ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ಜೂ.ಎನ್​ಟಿಆರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅವರಿಗೆ ಆಹ್ವಾನವೇ ಇರಲಿಲ್ಲ ಎಂದೆಲ್ಲ ಸುದ್ದಿ ಹಬ್ಬಿಸಲಾಗಿತ್ತು. ಇದಕ್ಕೆ ಹಾಲಿವುಡ್​ ಕ್ರಿಟಿಕ್ಸ್ ಅವಾರ್ಡ್​​ನ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ. ‘ಜೂ.ಎನ್​ಟಿಆರ್​ಗೆ ನಾವು ಆಹ್ವಾನ ನೀಡಿದ್ದೆವು’ ಎಂಬುದನ್ನು ಹೇಳಿದ್ದಾರೆ.

ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ಸ್ ಫಿಲ್ಮ್​ ಅವಾರ್ಡ್ಸ್​ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇಲ್ಲಿ, ಅತ್ಯುತ್ತಮ ಆ್ಯಕ್ಷನ್ ಸಿನಿಮಾ, ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ, ಅತ್ಯುತ್ತಮ ಒರಿಜಿನಲ್ ಹಾಡು ಹಾಗೂ ಅತ್ಯುತ್ತಮ ಸ್ಟಂಟ್ಸ್​ ವಿಭಾಗದಲ್ಲಿ ‘ಆರ್​ಆರ್​ಆರ್​’ ಚಿತ್ರ ಗೆಲುವು ಕಂಡಿತ್ತು. ರಾಜಮೌಳಿ, ರಾಮ್ ಚರಣ್, ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಜೂ.ಎನ್​ಟಿಆರ್ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಈ ಬಗ್ಗೆ ಹಾಲಿವುಡ್​ ಕ್ರಿಟಿಕ್ಸ್ ಅವಾರ್ಡ್ ಅಧಿಕೃತ ಟ್ವಿಟರ್ ಖಾತೆ ಮೂಲಕ ಸ್ಪಷ್ಟನೆ ನೀಡಲಾಗಿದೆ. ‘ಆರ್​ಆರ್​ಆರ್ ಫ್ಯಾನ್ಸ್ ಹಾಗೂ ಬೆಂಬಲಿಗರೇ, ನಾವು ಜೂ.ಎನ್​ಟಿಆರ್​ಗೆ ಆಹ್ವಾನ ನೀಡಿದ್ದೆವು. ಆದರೆ, ಅವರು ಭಾರತದಲ್ಲಿ ತಮ್ಮ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅವರು ಶೀಘ್ರವೇ ಈ ಅವಾರ್ಡ್ ಸ್ವೀಕರಿಸಲಿದ್ದಾರೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ’ ಎಂದು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: RRR New Trailer: ಆರ್​ಆರ್​ಆರ್ ಹೊಸ ಟ್ರೈಲರ್ ಬಿಡುಗಡೆ, ಸಿನಿಮಾದಲ್ಲಿಲ್ಲದ ಕೆಲ ದೃಶ್ಯಗಳ ಸೇರ್ಪಡೆ

ಈ ಟ್ವೀಟ್​ಗೆ ಉತ್ತರಿಸಿರುವ ಅಭಿಮಾನಿ, ‘ಅವರು ಬರದೇ ಇರೋದು ವೈಯಕ್ತಿಕ ಕಾರಣದಿಂದ. ಅವರು ಸಹೋದರನನ್ನು ಕಳೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಬಂದಿಲ್ಲ’ ಎಂದು ಬರೆದುಕೊಂಡಿದ್ದ. ಇದಕ್ಕೂ ಹಾಲಿವುಡ್​ ಕ್ರಿಟಿಕ್ಸ್ ಅವಾರ್ಡ್ ಕಡೆಯಿಂದ ಉತ್ತರ ಸಿಕ್ಕಿದೆ. ‘ಅವರು ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದರು. ನಂತರ ಅವರ ಸಹೋದರ ತೀರಿ ಹೋದರು. ಹೀಗಾಗಿ, ಸಿನಿಮಾ ಕೆಲಸದಿಂದ ಬ್ರೇಕ್ ಪಡೆದರು. ಪ್ರಚಾರಕರು ನಮಗೆ ಹೇಳಿದ್ದು ಇಷ್ಟು’ ಎಂದು ಅವರು ಉತ್ತರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:29 pm, Tue, 28 February 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್