AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಚಾರ್ಯ’ ಸಿನಿಮಾ ರಿಲೀಸ್ ಆಗಿ 10 ತಿಂಗಳ ಬಳಿಕ ಸೆಟ್​​ಗೆ ಬಿತ್ತು ಬೆಂಕಿ; ಸಿಗರೇಟ್​ನಿಂದ ಸಂಭವಿಸಿತು ದುರಂತ

ಸಿನಿಮಾದಲ್ಲಿ ಬರುವ ಧರ್ಮಸ್ಥಲಿ ದೇವಸ್ಥಾನ, ಸುತ್ತಲೂ ಹಳ್ಳಿಯಂತಹ ಬೃಹತ್ ಸೆಟ್​​ನ ಇಲ್ಲಿ ನಿರ್ಮಿಸಲಾಗಿತ್ತು. ಈ ಸೆಟ್‌ಗೆ 20 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗಿತ್ತು.

‘ಆಚಾರ್ಯ’ ಸಿನಿಮಾ ರಿಲೀಸ್ ಆಗಿ 10 ತಿಂಗಳ ಬಳಿಕ ಸೆಟ್​​ಗೆ ಬಿತ್ತು ಬೆಂಕಿ; ಸಿಗರೇಟ್​ನಿಂದ ಸಂಭವಿಸಿತು ದುರಂತ
ಆಚಾರ್ಯ ಸಿನಿಮಾ ಸೆಟ್
TV9 Web
| Edited By: |

Updated on: Feb 28, 2023 | 12:39 PM

Share

ಮೆಗಾಸ್ಟಾರ್ ಚಿರಂಜೀವಿ (Chiranjeevi) ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡಿದ್ದರು. ಈ ಚಿತ್ರ ಕಳೆದ ಏಪ್ರಿಲ್ 29 ರಂದು ಬಿಡುಗಡೆಯಾಯಿತು. ಈ ಸಿನಿಮಾ ರಿಲೀಸ್​ಗೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ, ಈ ಸಿನಿಮಾ ಫ್ಲಾಪ್ ಆಯಿತು. ಈ ಚಿತ್ರದಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಉಂಟಾಯಿತು. ಈ ಸಿನಿಮಾಗಾಗಿ ಹೈದರಾಬಾದ್​​ನ ಕೋಕಾಪೇಟ್​​ನ (Kokapet) 20 ಎಕರೆಯಲ್ಲಿ ವಿಶೇಷ ಸೆಟ್ ನಿರ್ಮಿಸಲಾಗಿತ್ತು. ಈಗ ಸಿನಿಮಾ ರಿಲೀಸ್ ಆಗಿ 10 ತಿಂಗಳ ಬಳಿಕ ಸೆಟ್​ಗೆ ಬೆಂಕಿ ಬಿದ್ದಿದೆ.

ಸಿನಿಮಾದಲ್ಲಿ ಬರುವ ಧರ್ಮಸ್ಥಲಿ ದೇವಸ್ಥಾನ, ಸುತ್ತಲೂ ಹಳ್ಳಿಯಂತಹ ಬೃಹತ್ ಸೆಟ್​​ನ ಇಲ್ಲಿ ನಿರ್ಮಿಸಲಾಗಿತ್ತು. ಈ ಸೆಟ್‌ಗೆ 20 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗಿತ್ತು. ಖ್ಯಾತ ಕಲಾ ನಿರ್ದೇಶಕ ಸುರೇಶ್ ಈ ಸೆಟ್ ವಿನ್ಯಾಸಗೊಳಿಸಿದ್ದರು. ಸಿನಿಮಾ ಫ್ಲಾಪ್ ಆದರೂ ಚಿತ್ರದ ಸೆಟ್​​ಗಳು ಗಮನ ಸೆಳೆದಿದ್ದವು.  ಸಿನಿಮಾ ಮುಗಿದ ಬಳಿಕವೂ ಈ ಸೆಟ್‌ಗಳನ್ನು ಹಾಗೆಯೇ ಇಡಲಾಗಿತ್ತು. ಸೆಟ್​ನ ಒಂದಷ್ಟು ಭಾಗ ಬೆಂಕಿಗೆ ಆಹುತಿ ಆಗಿದೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ.

ಸೋಮವಾರ (ಫೆ.27) ರಾತ್ರಿ ಈ ಘಟನೆ ನಡೆದಿದೆ. ಸೆಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ ದೊಡ್ಡದಾಗಿದೆ. ಸ್ಥಳೀಯರು ಸಮೀಪದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಧರ್ಮಸ್ಥಲಿ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಬಹುತೇಕ ಸೆಟ್​​ಗಳು ಸುಟ್ಟು ಭಸ್ಮವಾಗಿವೆ. ಇದರಿಂದ ಕೋಟ್ಯಂತರ ಮೌಲ್ಯದ ಸೆಟ್ ಕ್ಷಣಾರ್ಧದಲ್ಲಿ ಸುಟ್ಟು ಬೂದಿ ಆಗಿದೆ.

ಇದನ್ನೂ ಓದಿ
Image
Acharya Box Office: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ‘ಆಚಾರ್ಯ’; ಇದುವರೆಗೆ ಆದ ಕಲೆಕ್ಷನ್ ಎಷ್ಟು?
Image
ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್
Image
Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೋತಿದ್ದು ಹಾಗೀಗಲ್ಲ
Image
‘ಕೆಜಿಎಫ್​ 2’ ಎದುರು 3ನೇ ವಾರವೂ ಮಂಕಾದ ಸ್ಟಾರ್​ ಸಿನಿಮಾಗಳು; ಇನ್ನೂ ನಿಂತಿಲ್ಲ ರಾಕಿ ಭಾಯ್​ ಹವಾ

ಇದನ್ನೂ ಓದಿ: ‘ಆಚಾರ್ಯ’ ಸಿನಿಮಾ ವಿತರಕರ ನಷ್ಟ ಭರಿಸಲು ಸಂಭಾವನೆಯನ್ನೇ ಹಿಂದಿರುಗಿಸಿದ ನಟ ಚಿರಂಜೀವಿ

ಸೆಟ್​​ನ ಬಳಿ ಕುಳಿತಿದ್ದ ವ್ಯಕ್ತಿ ಸಿಗರೇಟು ಹತ್ತಿಸಿದ್ದ. ಅದನ್ನು ಎಸೆದಾಗ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ‘ಆಚಾರ್ಯ’ ತಂಡದಿಂದ ಯಾರೂ ಪ್ರತಿಕ್ರಿಯೆ ಕೊಟ್ಟಿಲ್ಲ. ‘ಆಚಾರ್ಯ’ ಚಿತ್ರವನ್ನು ರಾಮ್ ಚರಣ್ ಅವರೇ ನಿರ್ಮಿಸಿದ್ದರು. ಈ ಚಿತ್ರದ ಬಜೆಟ್ 140 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಈ ಸಿನಿಮಾಗೆ 50 ಕೋಟಿ ರೂಪಾಯಿ ಬಿಸ್ನೆಸ್ ಮಾಡಲೂ ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ