AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯ; ಫೋಟೋ ನೋಡಿ ಭಯಗೊಂಡ ಫ್ಯಾನ್ಸ್

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಆ್ಯಕ್ಷನ್ ಮೆರೆದಿದ್ದಾರೆ. ಅವರ ನಟನೆಯ ‘ಯಶೋದ’ ಚಿತ್ರದಲ್ಲೂ ಆ್ಯಕ್ಷನ್ ಇತ್ತು. ‘ಸಿಟಾಡೆಲ್​’ ರಿಮೇಕ್​ನಲ್ಲಿ ಭರಪೂರ ಆ್ಯಕ್ಷನ್ ಇರಲಿದೆ.

Samantha: ಶೂಟಿಂಗ್ ವೇಳೆ ಸಮಂತಾ ಕೈಗೆ ಗಾಯ; ಫೋಟೋ ನೋಡಿ ಭಯಗೊಂಡ ಫ್ಯಾನ್ಸ್
ಸಮಂತಾ
ರಾಜೇಶ್ ದುಗ್ಗುಮನೆ
|

Updated on:Feb 28, 2023 | 2:43 PM

Share

ನಟಿ ಸಮಂತಾ (Samantha) ಅವರು ಮತ್ತೆ ಸೆಟ್​ಗೆ ಮರಳಿದ್ದಾರೆ. ಅವರು ಅಪರೂಪದ ಕಾಯಿಲೆ Myositisನಿಂದ ಬಳಲುತ್ತಿದ್ದಾರೆ. ಇದಕ್ಕೆ ಒಳಗಾದ ನಂತರದಲ್ಲಿ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದರು. ಈಗ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಸದ್ಯ ಅವರು ಮುಂಬೈನಲ್ಲಿದ್ದಾರೆ. ಇಂಗ್ಲಿಷ್​ನ ‘ಸಿಟಾಡೆಲ್​’ ಭಾರತೀಯ ವರ್ಷನ್​ನ ಶೂಟಿಂಗ್​ನಲ್ಲಿ ಸಮಂತಾ ಬ್ಯುಸಿ ಇದ್ದಾರೆ. ಈ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಈ ಫೋಟೋಗಳನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಹಾಗೂ ವರುಣ್ ಧವನ್ ಒಟ್ಟಾಗಿ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್​ನ ಜನಪ್ರಿಯ ಸೀರಿಸ್ ‘ಸಿಟಾಡೆಲ್’​​ನ ಸ್ಫೂರ್ತಿಯಾಗಿಟ್ಟುಕೊಂಡು, ಭಾರತಕ್ಕೆ ಹೊಂದುವಂತೆ ಕಥೆ ಮಾಡಿಕೊಳ್ಳಲಾಗಿದೆ. ‘ದಿ ಫ್ಯಾಮಿಲಿ ಮ್ಯಾನ್​’ ಖ್ಯಾತಿಯ ರಾಜ್ ಹಾಗೂ ಡಿಕೆ ಈ ಸೀರಿಸ್​ಗೆ ನಿರ್ದೇಶನ ಮಾಡುತ್ತಿದ್ದಾರೆ. ಇದರ ಶೂಟಿಂಗ್ ಈಗ ಆರಂಭ ಆಗಿದೆ. ಅಮೇಜಾನ್​ ಪ್ರೈಮ್ ವಿಡಿಯೋ ಮೂಲಕ ಈ ಸೀರಿಸ್ ರಿಲೀಸ್ ಆಗಲಿದೆ. ಈ ಸರಣಿಯ ಶೂಟಿಂಗ್​ ವೇಳೆ ಸಮಂತಾ ಕೈಗೆ ಗಾಯಗಳಾಗಿವೆ. ಸ್ವತಃ ಸಮಂತಾ ಅವರೇ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಆ್ಯಕ್ಷನ್ ಮೆರೆದಿದ್ದಾರೆ. ಅವರ ನಟನೆಯ ‘ಯಶೋದ’ ಚಿತ್ರದಲ್ಲೂ ಆ್ಯಕ್ಷನ್ ಇತ್ತು. ‘ಸಿಟಾಡೆಲ್​’ ರಿಮೇಕ್​ನಲ್ಲಿ ಭರಪೂರ ಆ್ಯಕ್ಷನ್ ಇರಲಿದೆ. ಸಮಂತಾ ಶೇರ್ ಮಾಡಿಕೊಂಡಿರುವ ಫೋಟೋಗಳು ಇದಕ್ಕೆ ಸಾಕ್ಷ್ಯ ನೀಡುತ್ತವೆ. ಸಮಂತಾ ಹೆಬ್ಬೆರಳು, ಕೈ ಭಾಗಕ್ಕೆ ಗಾಯಗಳಾಗಿವೆ. ಶೂಟಿಂಗ್ ವೇಳೆ ಆದ ಗಾಯಗಳು ಇವು ಎನ್ನಲಾಗುತ್ತಿದೆ. ಈ ಫೋಟೋ ನೋಡಿ ಫ್ಯಾನ್ಸ್​ಗೆ ಭಯ ಆಗಿದೆ.

ಇದನ್ನೂ ಓದಿ
Image
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Image
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Image
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
Image
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಸಮಂತಾ ಅವರಿಗೆ ಆ್ಯಕ್ಷನ್ ಎಂದರೆ ಇಷ್ಟ. ಇತ್ತೀಚೆಗೆ ಈ ರೀತಿಯ ಪಾತ್ರಗಳನ್ನು ಅವರು ಹೆಚ್ಚು ಒಪ್ಪಿಕೊಳ್ಳುತ್ತಿದ್ದಾರೆ. Myositis ಸಮಸ್ಯೆಯಿಂದ ಅವರಿಗೆ ವರ್ಕೌಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಸಮಸ್ಯೆ ಕಡಿಮೆ ಆಗುತ್ತಿರುವುದರಿಂದ ಅವರು ಮತ್ತೆ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ್ಯಕ್ಷನ್ ಸಿನಿಮಾಗಳನ್ನೂ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇದನ್ನೂ ಓದಿ: Samantha: ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ರಿಸ್ಕ್​ ತೆಗೆದುಕೊಳ್ತಾರಾ ಸಮಂತಾ ರುತ್​ ಪ್ರಭು?

ಸಮಂತಾಗೆ Myositis ಹೆಸರಿನ ಕಾಯಿಲೆ ಕಾಡಿತ್ತು. ಸ್ನಾಯುಗಳಲ್ಲಿ ಅತೀವವಾಗಿ ನೋವು ಕಾಣುವ ಸಮಸ್ಯೆ ಇದಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ಕಾರಣದಿಂದ ಹಲವು ತಿಂಗಳ ಕಾಲ ಅವರು ವಿಶ್ರಾಂತಿಯಲ್ಲಿದ್ದರು. ಇದರಿಂದ ಅವರ ಪ್ರಾಜೆಕ್ಟ್​​ಗಳ ಶೂಟಿಂಗ್​ ವಿಳಂಬ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Tue, 28 February 23

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More