Samantha: ಹಳೆಯ ವಿಷಯಗಳು ಕಾಡುತ್ತಿದ್ದವು, ಇನ್ನು ಮುಂದೆ ಹಾಗಾಗುವುದಿಲ್ಲ: ಸಮಂತಾ

ಕೆಲವು ಹಳೆಯ ವಿಷಯಗಳು ಸಮಂತಾಗೆ ಸಮಸ್ಯೆ ನೀಡುತ್ತಿದ್ದವಂತೆ ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ ಎಂದಿದ್ದಾರೆ ನಟಿ ಸಮಂತಾ.

Samantha: ಹಳೆಯ ವಿಷಯಗಳು ಕಾಡುತ್ತಿದ್ದವು, ಇನ್ನು ಮುಂದೆ ಹಾಗಾಗುವುದಿಲ್ಲ: ಸಮಂತಾ
ಸಮಂತಾ
Follow us
ಮಂಜುನಾಥ ಸಿ.
|

Updated on: Feb 27, 2023 | 6:31 PM

ನಟಿ ಸಮಂತಾಗೆ (Samantha) ಸಾಲು-ಸಾಲು ಸಮಸ್ಯೆಗಳು ಎದುರಾಗುತ್ತಲೇ ಇವೆ. ಮೊದಲಿಗೆ ವಿಚ್ಛೇದನ (Divorce), ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಎದುರಿಸಿದ ಸತತ ಟ್ರೋಲಿಂಗ್, ಬೈಗುಳ, ಸುಳ್ಳು ಸುದ್ದಿಗಳ ದಾಳಿ ಎಲ್ಲವನ್ನೂ ತಡೆದುಕೊಂಡು ಎದ್ದು ನಿಲ್ಲುವ ವೇಳೆಗೆ ಕಾಡಿದ ಆರೋಗ್ಯ ಸಮಸ್ಯೆ ಹೀಗೆ ಒಂದರಮೇಲೊಂದು ಸಮಸ್ಯೆಗಳಿಗೆ ನಟಿ ಗುರಿಯಾಗುತ್ತಲೇ ಇದ್ದಾರೆ ಆದರೆ ಎಲ್ಲವನ್ನೂ ಕೆಚ್ಚೆದೆಯಿಂದ ಎದುರಿಸಿ ನಿಂತಿದ್ದಾರೆ. ಗಟ್ಟಿ ಮಹಿಳೆಯಾಗಿ ರೂಪುಗೊಳ್ಳುತ್ತಿರುವ ಸಮಂತಾ, ಹಳೆಯ ಕೆಟ್ಟ ನೆನಪುಗಳಿಂದ ಹೊರಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ (Social Media) ಸಕ್ರಿಯರಾಗಿರುವ ನಟಿ ಸಮಂತಾ, ತಮ್ಮ ವರ್ಕೌಟ್ ವಿಡಿಯೋಗಳು, ಗೆಳೆಯರ ಚಿತ್ರಗಳು, ಸಿನಿಮಾ ಪೋಸ್ಟರ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ತಮ್ಮ ಮನದ ಭಾವನೆಗಳ ಬಗ್ಗೆಯೂ ಬರೆಯುತ್ತಾರೆ. ಇದೀಗ ಇಂಥಹುದೇ ಒಂದು ಇನ್​ಸ್ಟಾಗ್ರಾಂ ಪೋಸ್ಟ್ ಅನ್ನು ಸಮಂತಾ ಹಂಚಿಕೊಂಡಿದ್ದಾರೆ.

ವಯಸ್ಸು ಮಾಗಿದಷ್ಟು, ನಾನು ಮಾಗುತ್ತಾ ಸಾಗುತ್ತೇನೆ. ಜನ ತೋರಿಸುತ್ತಿರುವ ಎಲ್ಲ ಪ್ರೀತಿ, ಅನುರಾಗಕ್ಕೆ ನಾನು ಧನ್ಯಳಾಗಿದ್ದೇನೆ. ಪ್ರತಿ ಹೊಸ ದಿನಕ್ಕೆ, ಆ ಹೊಸ ದಿನ ತರುವ ಹಲವು ಹೊಸ ವಿಷಯ, ಹೊಸ ಸಂತಸಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಹಲವು ವಿಷಯಗಳು ನನ್ನ ಮೇಲೆ ಪ್ರಭಾವ ಬೀರುತ್ತಿದ್ದವು ಆದರೆ ಇನ್ನು ಮುಂದೆ ಅವು ನನ್ನನ್ನು ಘಾಸಿಗೊಳಿಸುವುದಿಲ್ಲ. ಪ್ರತಿದಿನವೂ ಪ್ರೀತಿ ಹಾಗೂ ಕೃತಜ್ಞತೆಯ ಅಲೆಗಳು ಮಾತ್ರವೇ ಎಂದು ಬರೆದುಕೊಂಡಿದ್ದಾರೆ.

Samantha: ನಟಿ ಸಮಂತಾ ಹೆಸರು ಕೆಡಿಸಲು ಸಂಚು; ಇದರ ಹಿಂದೆ ಇರೋರು ಯಾರು?

ನಟಿ ಸಮಂತಾ ಚಿತ್ರರಂಗಕ್ಕೆ ಕಾಲಿಟ್ಟು ನಿನ್ನೆಗೆ (ಫೆಬ್ರವರಿ 26)ಕ್ಕೆ ಹದಿಮೂರು ವರ್ಷವಾಗಿದೆ. ಸಮಂತಾ ಮೊದಲ ಬಾರಿಗೆ ನಟಿಸಿದ್ದ ಏ ಮಾಯ ಚೇಸಾವೆ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ನಾಯಕ ಸಮಂತಾರ ಮಾಜಿ ಪತಿ ನಾಗ ಚೈತನ್ಯ. ಆ ಸಿನಿಮಾದಿಂದಲೇ ಇಬ್ಬರ ಪ್ರೀತಿ ಶುರುವಾಗಿತ್ತು.

ಯೇ ಮಾಯ ಚೇಸಾವೆ ಸಿನಿಮಾದಲ್ಲಿ ಮಾಡಿದ್ದ ಜೆಸ್ಸಿ ಪಾತ್ರದ ಚಿತ್ರಗಳನ್ನು ಸಮಂತಾ ನಿನ್ನೆ ಹಂಚಿಕೊಂಡಿದ್ದರು. ಅಂತೆಯೇ ಚಿತ್ರರಂಗದ ಹಲವರು ಸಮಂತಾ, ಚಿತ್ರರಂಗದಲ್ಲಿ ಹದಿಮೂರು ವರ್ಷ ಪೂರೈಸಿದ್ದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು.

ಆರೋಗ್ಯ ಸಮಸ್ಯೆಯ ನಡುವೆಯೂ ಸಮಂತಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಶಾಕುಂತಲಂ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ವಿಜಯ್ ದೇವರಕೊಂಡ ಜೊತೆಗೆ ಖುಷಿ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಸಿಟಾಡೆಲ್ ಹೆಸರಿನ ವೆಬ್ ಸರಣಿಯಲ್ಲಿ ರಫ್ ಆಂಡ್ ಟಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೀಷ್ ಸಿನಿಮಾ ಅರೇಂಜ್​ಮೆಂಟ್ ಆಫ್ ಲವ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಒಟ್ಟಾರೆ ಸಮಂತಾ ಈಗ ಬಹಳ ಬ್ಯುಸಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ