RRR New Trailer: ಆರ್​ಆರ್​ಆರ್ ಹೊಸ ಟ್ರೈಲರ್ ಬಿಡುಗಡೆ, ಸಿನಿಮಾದಲ್ಲಿಲ್ಲದ ಕೆಲ ದೃಶ್ಯಗಳ ಸೇರ್ಪಡೆ

RRR ಸಿನಿಮಾದ ಹೊಸ ಟ್ರೈಲರ್ ಬಿಡುಗಡೆ ಆಗಿದೆ. ಈ ಹಿಂದಿನ ಟ್ರೈಲರ್​ನಲ್ಲಿ ಇಲ್ಲದ ಕೆಲವು ದೃಶ್ಯಗಳು ಮಾತ್ರವಲ್ಲದೆ ಸಿನಿಮಾದಲ್ಲಿಯೂ ಇಲ್ಲದ ಕೆಲವು ದೃಶ್ಯದ ತುಣುಕುಗಳನ್ನು ಸಹ ಹೊಸ ಟ್ರೈಲರ್​ನಲ್ಲಿ ಸೇರಿಸಲಾಗಿದೆ.

Follow us
ಮಂಜುನಾಥ ಸಿ.
|

Updated on:Feb 27, 2023 | 8:00 PM

ಕಳೆದ ವರ್ಷ ಬಿಡುಗಡೆ ಆಗಿ ಗಳಿಕೆಯಲ್ಲಿ ದಾಖಲೆಗಳನ್ನು ಬರೆದ ಜೊತೆಗೆ ವಿಶ್ವಮಟ್ಟದಲ್ಲಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡ, ಬಾಚಿಕೊಳ್ಳುತ್ತಿರುವ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ (RRR) ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದ್ದು ಇದಕ್ಕಾಗಿ ಎಂದೇ ಹೊಸ ಟ್ರೈಲರ್ (Trailer) ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಸಿನಿಮಾದ ನಿರ್ಮಾಣ ಸಂಸ್ಥೆ ಡಿವಿವಿ ಎಂಟರ್ಟೈನ್​ಮೆಂಟ್ ಯೂಟ್ಯೂಬ್ ಚಾನೆಲ್​ನಲ್ಲಿ ಇಂದು (ಫೆಬ್ರವರಿ 27) ಸಂಜೆ ವೇಳೆಗೆ ಹೊಸ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಈ ಹಿಂದಿನ ಟ್ರೈಲರ್​ನಲ್ಲಿ ಇಲ್ಲದ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಅಲ್ಲದೆ ಸಿನಿಮಾದಲ್ಲಿಯೂ ಇಲ್ಲದ ಕೆಲವು ದೃಶ್ಯದ ತುಣುಕುಗಳನ್ನು ಸಹ ಹೊಸ ಟ್ರೈಲರ್​ನಲ್ಲಿ ಸೇರಿಸಲಾಗಿದೆ.

2021ರ ಡಿಸೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆ ಆಗಿತ್ತು. ಆ ಟ್ರೈಲರ್ 3:15 ನಿಮಿಷಗಳಿತ್ತು. ಈಗ ಬಿಡುಗಡೆ ಆಗಿರುವ ಟ್ರೈಲರ್ 1:47 ನಿಮಿಷ ಮಾತ್ರವೇ ಇದೆ. ಮೂಲ ಟ್ರೈಲರ್​ನಲ್ಲಿ ಕೆಲವು ಸಂಭಾಷಣೆಗಳು ಇದ್ದವು, ಆದರೆ ಈಗ ಬಿಡುಗಡೆ ಆಗಿರುವ ಟ್ರೈಲರ್​ನಲ್ಲಿ ಕೇವಲ ಆಕ್ಷನ್ ದೃಶ್ಯಗಳು ಹಾಗೂ ನಾಯಕರಿಬ್ಬರ ಗೆಳೆತನ ಸಾರುವ ದೃಶ್ಯದ ತುಣುಕಗಳಷ್ಟೆ ಇವೆ.

ಅದರಲ್ಲಿಯೂ ಬಹುವಾಗಿ ಚರ್ಚೆಯಾದ ಸಿನಿಮಾದ ಇಂಟರ್ವೆಲ್ ಫೈಟ್​ನ ಕೆಲ ದೃಶ್ಯಗಳನ್ನು ರೀ ರಿಲೀಸ್ ಟ್ರೈಲರ್​ನಲ್ಲಿ ಸೇರಿಸಲಾಗಿದೆ. ಇದರ ಜೊತೆಗೆ ಹಾಲಿವುಡ್ ದಿಗ್ಗಜ ನಿರ್ದೇಶಕರಾದ ಸ್ಟಿಫನ್ ಸ್ಪೀಲ್​ಬರ್ಗ್, ಜೇಮ್ಸ್ ಕ್ಯಾಮರನ್, ಎಡ್ಗರ್ ವೈಟ್ ಅವರುಗಳು ಆರ್​ಆರ್​ಆರ್ ಸಿನಿಮಾ ಬಗ್ಗೆ ಹೇಳಿದ ಮಾತುಗಳನ್ನು ಟ್ರೈಲರ್​ನಲ್ಲಿ ಸೇರಿಸಲಾಗಿದೆ. ಒಟ್ಟಾರೆಯಾಗಿ ಅಮೆರಿಕ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡೆ ಟ್ರೈಲರ್ ಅನ್ನು ತಯಾರು ಮಾಡಲಾಗಿದ್ದು, ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಈ ರೀ ರಿಲೀಸ್ ಟ್ರೈಲರ್ ಅನ್ನು ವೀಕ್ಷಿಸಿದ್ದಾರೆ.

Narendra Modi: ಆರ್​ಆರ್​ಆರ್ ಹಾಡಿಗೆ ಕುಣಿದ ಕೊರಿಯನ್ನರು, ಭೇಷ್ ಎಂದ ಪ್ರಧಾನಿ ಮೋದಿ

ಆರ್​ಆರ್​ಆರ್ ಸಿನಿಮಾದ ನಾಟು-ನಾಟು ಹಾಡು ಆಸ್ಕರ್​ಗೆ ನಾಮಿನೇಟ್ ಆಗಿದ್ದು, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12 ರಂದು ಅಮೆರಿಕದ ಲಾಸ್ ಏಂಜಲ್ಸ್​ನಲ್ಲಿ ನಡೆಯಲಿದೆ. ಇದರ ನಡುವೆ ಆರ್​ಆರ್​ಆರ್ ಸಿನಿಮಾವನ್ನು ಅಮೆರಿಕದಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 03 ರಂದು ಸಿನಿಮಾ ಮರು ಬಿಡುಗಡೆ ಆಗಲಿದ್ದು, ನಟ ರಾಮ್ ಚರಣ್ ಅವರು ಅಮೆರಿಕದಲ್ಲಿ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Mon, 27 February 23