Tanya Hope: ಸುಡು ಬೇಸಿಗೆಯಲ್ಲೂ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ..’ ಹಾಡಿಗೆ ಉಪೇಂದ್ರ ಅಭಿಮಾನಿಗಳು ಫಿದಾ
Kabzaa Movie Songs: ‘ಕಬ್ಜ’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಗೀತೆಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.
Updated on: Feb 27, 2023 | 9:59 PM

ಆರ್. ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈ ಸಿನಿಮಾದ ಹಾಡುಗಳು ಧೂಳೆಬ್ಬಿಸುತ್ತಿವೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಚುಂ ಚುಂ ಚಳಿ ಚಳಿ..’ ಹಾಡು ಬಿಡುಗಡೆ ಮಾಡಲಾಯಿತು.

‘ಚುಂ ಚುಂ ಚಳಿ ಚಳಿ..’ ಹಾಡಿನಲ್ಲಿ ಉಪೇಂದ್ರ ಮತ್ತು ತಾನ್ಯಾ ಹೋಪ್ ಅವರು ಹೆಜ್ಜೆ ಹಾಕಿದ್ದಾರೆ. ಇದರ ಲಿರಿಕಲ್ ವಿಡಿಯೋಗೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದು ದಿನದಲ್ಲಿ ಈ ಹಾಡು 16 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

‘ಕಬ್ಜ’ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿದ್ದ ಶೀರ್ಷಿಕೆ ಗೀತೆ ಮತ್ತು ‘ನಮಾಮಿ..’ ಹಾಡುಗಳು ಸೂಪರ್ ಹಿಟ್ ಆಗಿವೆ. ಅದೇ ಹಾದಿಯಲ್ಲಿ ‘ಚುಂ ಚುಂ ಚಳಿ ಚಳಿ..’ ಸಾಂಗ್ ಕೂಡ ಸಾಗುತ್ತಿದೆ.

ಈ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿರುವ ತಾನ್ಯಾ ಹೋಪ್ ಅವರು ಬಿಂದಾಸ್ ಆಗಿ ಕುಣಿದಿದ್ದಾರೆ. ಜಾನಿ ಮಾಸ್ಟರ್ ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ದೊಡ್ಡ ಪರದೆಯಲ್ಲಿ ‘ಚುಂ ಚುಂ ಚಳಿ ಚಳಿ..’ ಸಾಂಗ್ ನೋಡಲು ಫ್ಯಾನ್ಸ್ ಕಾದಿದ್ದಾರೆ.

‘ಚುಂ ಚುಂ ಚಳಿ ಚಳಿ..’ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಐರಾ ಉಡುಪಿ, ಮನಿಶಾ ದಿನಕರ್, ಸಂತೋಷ್ ವೆಂಕಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಮಾರ್ಚ್ 17ರಂದು ‘ಕಬ್ಜ’ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಕಲ ತಯಾರಿ ನಡೆದಿದೆ.




