ಸಿಂಪಲ್ ಸುನಿ (Simple Suni) ನಿರ್ದೇಶನದ ಮೊದಲ ಸಿನಿಮಾ ‘ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ’ ಚಿತ್ರ ರಿಲೀಸ್ ಆಗಿ ಮಾರ್ಚ್ 8ಕ್ಕೆ ಬರೋಬ್ಬರಿ 10 ವರ್ಷ ತುಂಬಿದೆ. ಈ ವಿಶೇಷ ದಿನದಂದು ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾ ಘೋಷಣೆ ಆಗಿದೆ. ಸುನಿ ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್, ಸ್ವಾತಿಷ್ಠ ಹಾಗೂ ಮಲ್ಲಿಕಾ ನಟಿಸುತ್ತಿದ್ದಾರೆ. ಸ್ವಾತಿಷ್ಠ ಅವರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಅವರು ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ