SS Rajamouli: ಆಸ್ಕರ್ ಪ್ರಶಸ್ತಿ ಪಡೆಯಲು ರಾಜಮೌಳಿ ಏಕೆ ವೇದಿಕೆ ಏರಿಲ್ಲ? ಇಲ್ಲಿದೆ ಉತ್ತರ
‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲುವುದಕ್ಕೂ ಮೊದಲು ಈ ವೇದಿಕೆ ಮೇಲೆ ಹಾಡಿನ ಪರ್ಫಾರ್ಮೆನ್ಸ್ ನಡೆಯಿತು. ದೀಪಿಕಾ ಪಡುಕೋಣೆ ಅವರು ‘ನಾಟು ನಾಟು..’ ಹಾಡಿನ ವಿಶೇಷತೆ ಏನು ಎಂಬುದನ್ನು ವಿವರಿಸಿದರು.
ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಪಡೆದಿದೆ. ರಾಜಮೌಳಿ ಅವರ ಕನಸು ಈ ಚಿತ್ರದಿಂದ ನನಸಾಗಿದೆ. ಅಮೆರಿಕದ ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದ ಅದ್ದೂರಿ ವೇದಿಕೆ ಏರಿ ಎಂಎಂ ಕೀರವಾಣಿ (MM Keeravani) ಹಾಗೂ ಹಾಡಿಗೆ ಸಾಹಿತ್ಯ ಬರೆದ ಚಂದ್ರಬೋಸ್ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜಮೌಳಿ ಅವರು ವೇದಿಕೆ ಹತ್ತಿಲ್ಲ.
‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲುವುದಕ್ಕೂ ಮೊದಲು ಈ ವೇದಿಕೆ ಮೇಲೆ ಹಾಡಿನ ಪರ್ಫಾರ್ಮೆನ್ಸ್ ನಡೆಯಿತು. ದೀಪಿಕಾ ಪಡುಕೋಣೆ ಅವರು ‘ನಾಟು ನಾಟು..’ ಹಾಡಿನ ವಿಶೇಷತೆ ಏನು ಎಂಬುದನ್ನು ವಿವರಿಸಿದರು. ಆಸ್ಕರ್ ಪಡೆದುಕೊಳ್ಳಲು ರಾಜಮೌಳಿ ವೇದಿಕೆ ಏಕೆ ಏರಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿದೆ.
ಆಸ್ಕರ್ ಇದು ಹಾಲಿವುಡ್ ಪ್ರಶಸ್ತಿ. ಇಲ್ಲಿ ಭಾರತದ ಸಿನಿಮಾಗಳು ರೇಸ್ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಹೀಗಿದ್ದರೂ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಸಿಕ್ಕಿದೆ. ‘ಫಾರ್ ಯುವರ್ ಕನ್ಸಿಡರೇಷನ್’ ಕ್ಯಾಂಪೇನ್ ಮಾಡಿ ರಾಜಮೌಳಿ ಅವರು ‘ನಾಟು ನಾಟು..’ ಹಾಡನ್ನು ಆಸ್ಕರ್ ಅವಾರ್ಡ್ಗೆ ತೆಗೆದುಕೊಂಡರು. ಇದಕ್ಕಾಗಿ ಅವರು ಬರೋಬ್ಬರಿ 83 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಮಾತಿದೆ. ಆದರೂ, ಅವರು ಪ್ರಶಸ್ತಿ ಪಡೆಯಲು ವೇದಿಕೆ ಏರಿಲ್ಲ. ಇದಕ್ಕೆ ಕಾರಣವೂ ಇದೆ.
‘ಆರ್ಆರ್ಆರ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ರಾಜಮೌಳಿ. ಆಸ್ಕರ್ ಗೆದ್ದ ‘ನಾಟು ನಾಟು..’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಎಂ.ಎಂ. ಕೀರವಾಣಿ. ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದೆ. ಅವಾರ್ಡ್ ಪಡೆದುಕೊಳ್ಳುವಾಗ ಅದಕ್ಕೆ ಸಂಬಂಧಿಸಿದ ಕೆಲವೇ ಕೆಲವರು ವೇದಿಕೆ ಏರಬೇಕು. ಈ ಕಾರಣಕ್ಕೆ ‘ನಾಟು ನಾಟು..’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ ಕೀರವಾಣಿ ಹಾಗೂ ಹಾಡಿಗೆ ಸಾಹಿತ್ಯ ಬರೆದ ಚಂದ್ರಬೋಸ್ ಮಾತ್ರ ಆಸ್ಕರ್ ವೇದಿಕೆ ಏರಿದ್ದಾರೆ. ಆಸ್ಕರ್ ಅವಾರ್ಡ್ ಕಾರ್ಯಕ್ರಮ ತುಂಬಾನೇ ಅಚ್ಚುಕಟ್ಟಾಗಿ ನಡೆಯುತ್ತದೆ. ಪ್ರಶಸ್ತಿ ಪಡೆದುಕೊಂಡವರು ದೀರ್ಘವಾಗಿ ಭಾಷಣ ಮಾಡುವಂತಿಲ್ಲ. ಹೀಗಾಗಿ, ಅಕಾಡೆಮಿ ಅವಾರ್ಡ್ ಪಡೆದ ನಂತರ ಕೆಲವೇ ನಿಮಿಷಗಳಲ್ಲಿ ತಮ್ಮ ಮಾತು ಮುಗಿಸುತ್ತಾರೆ.
ಇದನ್ನೂ ಓದಿ: Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
ವೇದಿಕೆ ಏರಿದ ಕೀರವಾಣಿ ಏನ್ ಅಂದ್ರು?
‘ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಆಸ್ಕರ್ ಪ್ರಶಸ್ತಿಯ ಗರಿ ಪ್ರತಿ ಭಾರತೀಯ ಹೆಮ್ಮೆಪಡುವ ವಿಷಯ. ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ಆರ್ಆರ್ಆರ್ ಚಿತ್ರ ಗೆಲ್ಲಬೇಕು, ಪ್ರತಿ ಭಾರತೀಯ ಹೆಮ್ಮೆ ಪಡಬೇಕು. ಈ ಆಸೆ ಈಡೇರಿದೆ’ ಎಂದಿದ್ದಾರೆ ಕೀರವಾಣಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ