The Elephant Whisperers: ಭಾರತಕ್ಕೆ ಆಸ್ಕರ್: ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಅಕಾಡೆಮಿ ಪ್ರಶಸ್ತಿ
‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡಿದೆ. ಈ ಸಾಕ್ಷ್ಯಚಿತ್ರ ಸಾಕಷ್ಟು ಭಾವನಾತ್ಮಕವಾಗಿದೆ. ಇದಕ್ಕೆ ಈಗ ಆಸ್ಕರ್ ಸಿಕ್ಕಿದೆ.
ಭಾರತಕ್ಕೆ ಮೊದಲ ಆಸ್ಕರ್ ಅವಾರ್ಡ್ (Oscar Award) ಸಿಕ್ಕಿದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಇದರಿಂದ ಭಾರತದ ಜನಪ್ರಿಯತೆ ವಿಶ್ವಮಟ್ಟಕ್ಕೆ ಹಬ್ಬಿದೆ. ಮನುಷ್ಯ ಹಾಗೂ ಪ್ರಾಣಿಗಳ ಮಧ್ಯೆ ಬಂಧ ಬೆಳೆದರೆ ಅದು ಹಾಗೆಯೇ ಉಳಿಯುತ್ತದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಇದನ್ನೇ ಹೇಳುತ್ತಿದೆ. ಈಗ ಈ ಕಿರುಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರೋದು ಭಾರತದ ಪಾಲಿಗೆ ನಿಜಕ್ಕೂ ಹೆಮ್ಮೆ ತರುವ ವಿಚಾರ.
‘The Elephant Whisperers’ wins the Oscar for Best Documentary Short Film. Congratulations! #Oscars #Oscars95 pic.twitter.com/WeiVWd3yM6
— The Academy (@TheAcademy) March 13, 2023
ತಮಿಳುನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳು, ಅನಾಥ ಆನೆ ಮರಿಗಳಾದ ರಘು ಮತ್ತು ಅಮ್ಮು ಆರೈಕೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಇವರಿಂದ ಆನೆಗಳಿಗೆ ಒಂದು ಕುಟುಂಬ ಸಿಗುತ್ತದೆ. ಈ ಕಿರುಚಿತ್ರ ಸಾಕಷ್ಟು ಭಾವನಾತ್ಮಕವಾಗಿದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡಿದೆ. ಇದು ತಮಿಳು ಭಾಷೆಯಲ್ಲಿದೆ. ಈ ಕಿರುಚಿತ್ರದಲ್ಲಿ ಆನೆಗಳ ಸಂರಕ್ಷಣೆ ಹಾಗೂ ಪ್ರಾಣಿಗಳ ರಕ್ಷಣೆ ಕುರಿತ ಸಂದೇಶವೂ ಇದೆ.
‘ದಿ ಎಲಿಫೆಂಟ್ ವಿಸ್ಪರರ್ಸ್’ ಜೊತೆಗೆ ‘ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ‘ಹೌ ಡು ಯು ಮೆಷರ್ ಎ ಈಯರ್?’, ‘ಹಾಲ್ ಔಟ್’, ‘ದಿ ಮಾರ್ಥಾ ಮಿಚೆಲ್ ಎಫೆಕ್ಟ್’, ‘ಸ್ಟ್ರೇಂಜರ್ ಅಟ್ ದಿ ಗೇಟ್’ ಸಾಕ್ಷ್ಯಚಿತ್ರಗಳು ರೇಸ್ನಲ್ಲಿ ಇದ್ದವು.
Whispers turn to roars! THE ELEPHANT WHISPERERS JUST WON AN OSCAR ??? pic.twitter.com/ZeD0MhzbaL
— Netflix India (@NetflixIndia) March 13, 2023
ಕಾಡ್ಗಿಚ್ಚು ಉಂಟಾದಾಗ ಅನೇಕ ಪ್ರಾಣಿಗಳು ತಮ್ಮ ಮನೆ ಕಳೆದುಕೊಳ್ಳುತ್ತವೆ. ಆನೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಅವುಗಳಿಗೆ ಒಂದು ಮನೆಯ ಅವಶ್ಯಕತೆ ಇರುತ್ತದೆ. ಈ ರೀತಿಯ ವಿಚಾರಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಈ ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದಾರೆ.
2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ (ಅಮೆರಿಕದ ಕಾಲಮಾನ ರಾತ್ರಿ 8 ಗಂಟೆ)ಆರಂಭ ಆಯಿತು. ಕೆಲವು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:28 am, Mon, 13 March 23