ಆಸ್ಕರ್ ಪಡೆದ ಮೊದಲ ಭಾರತೀಯರು ಹಾಗೂ ಭಾರತದ ಏಕೈಕ ಮಹಿಳೆ ಭಾನು ಅಥಾಯ. ಡೇವಿಡ್ ಅಟೆನ್ಬರೋ ನಿರ್ದೇಶನದ ಗಾಂಧಿ ಸಿನಿಮಾದ ವಸ್ತ್ರ ವಿನ್ಯಾಸಕ್ಕೆ ಅವರಿಗೆ 1983 ರಲ್ಲಿ ಆಸ್ಕರ್ ನೀಡಲಾಯಿತು.
ಭಾರತದ ಹೊಸ ಅಲೆ ಸಿನಿಮಾಗಳ ಜನಕ, ಭಾರತದ ಕಂಡ ಅತ್ಯದ್ಭುತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಜೀವಮಾನ ಸಾಧನೆಗೆ 1992 ರಲ್ಲಿ ಆಸ್ಕರ್ ನೀಡಲಾಯಿತು.
2009 ರಲ್ಲಿ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದ ಸಂಗೀತಕ್ಕಾಗಿ ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ಎ.ಆರ್.ರೆಹಮಾನ್ಗೆ ಆಸ್ಕರ್ ನೀಡಲಾಯ್ತು.
ಸ್ಮಂ ಡಾಗ್ ಮಿಲೇನಿಯರ್ ಸಿನಿಮಾಕ್ಕಾಗಿ ಅತ್ಯುತ್ತಮ ಹಾಡು ವಿಭಾಗದಲ್ಲಿ ಎ.ಆರ್.ರೆಹಮಾನ್ ಹಾಗೂ ಗುಲ್ಜಾರ್ ಇಬ್ಬರಿಗೂ ಪ್ರಶಸ್ತಿ ನೀಡಲಾಯ್ತು.
ಅದೇ ವರ್ಷ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದ ಅದ್ಭುತ ಸೌಂಡ್ ಮಿಕ್ಸಿಂಗ್ಗಾಗಿ ಕೇರಳದ ರಸೂಲ್ ಪೂಕಟ್ಟಿಗೆ ಆಸ್ಕರ್ ನೀಡಲಾಯ್ತು.
Published On - 6:12 am, Mon, 13 March 23