India In Oscars: ಈವರೆಗೆ ಆಸ್ಕರ್ ಪಡೆದ ಭಾರತೀಯರಿವರು
ಭಾರತದ ಕೆಲವು ಸಿನಿಮಾಗಳು ಆಸ್ಕರ್ಗೆ (Oscar) ನಾಮಿನೇಟ್ ಆಗಿವೆಯಾದರೂ ಈ ವರೆಗೆ ಆಸ್ಕರ್ ಗೆದ್ದ ಭಾರತೀಯರು ಕಡಿಮೆ. ಈ ವರೆಗೆ ಆಸ್ಕರ್ ಗೌರವಕ್ಕೆ ಭಾಜನರಾದ ಭಾರತೀಯರ ಬಗ್ಗೆ ಮಾಹಿತಿ ಇಲ್ಲಿದೆ.
Updated on:Mar 13, 2023 | 6:14 AM

ಆಸ್ಕರ್ ಪಡೆದ ಮೊದಲ ಭಾರತೀಯರು ಹಾಗೂ ಭಾರತದ ಏಕೈಕ ಮಹಿಳೆ ಭಾನು ಅಥಾಯ. ಡೇವಿಡ್ ಅಟೆನ್ಬರೋ ನಿರ್ದೇಶನದ ಗಾಂಧಿ ಸಿನಿಮಾದ ವಸ್ತ್ರ ವಿನ್ಯಾಸಕ್ಕೆ ಅವರಿಗೆ 1983 ರಲ್ಲಿ ಆಸ್ಕರ್ ನೀಡಲಾಯಿತು.

ಭಾರತದ ಹೊಸ ಅಲೆ ಸಿನಿಮಾಗಳ ಜನಕ, ಭಾರತದ ಕಂಡ ಅತ್ಯದ್ಭುತ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಜೀವಮಾನ ಸಾಧನೆಗೆ 1992 ರಲ್ಲಿ ಆಸ್ಕರ್ ನೀಡಲಾಯಿತು.

2009 ರಲ್ಲಿ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದ ಸಂಗೀತಕ್ಕಾಗಿ ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ ಎ.ಆರ್.ರೆಹಮಾನ್ಗೆ ಆಸ್ಕರ್ ನೀಡಲಾಯ್ತು.

ಸ್ಮಂ ಡಾಗ್ ಮಿಲೇನಿಯರ್ ಸಿನಿಮಾಕ್ಕಾಗಿ ಅತ್ಯುತ್ತಮ ಹಾಡು ವಿಭಾಗದಲ್ಲಿ ಎ.ಆರ್.ರೆಹಮಾನ್ ಹಾಗೂ ಗುಲ್ಜಾರ್ ಇಬ್ಬರಿಗೂ ಪ್ರಶಸ್ತಿ ನೀಡಲಾಯ್ತು.

ಅದೇ ವರ್ಷ ಸ್ಲಂ ಡಾಗ್ ಮಿಲೇನಿಯರ್ ಸಿನಿಮಾದ ಅದ್ಭುತ ಸೌಂಡ್ ಮಿಕ್ಸಿಂಗ್ಗಾಗಿ ಕೇರಳದ ರಸೂಲ್ ಪೂಕಟ್ಟಿಗೆ ಆಸ್ಕರ್ ನೀಡಲಾಯ್ತು.
Published On - 6:12 am, Mon, 13 March 23

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



