ಕಳಪೆ ಕಾಮಗಾರಿ: ಉದ್ಘಾಟನೆ ವೇಳೆಯೇ ಬಿರುಕು ಬಿಟ್ಟ ಹೊಸ ರಸ್ತೆ

| Updated By: shivaprasad.hs

Updated on: Dec 05, 2021 | 6:26 PM

ಕಳಪೆ ಕಾಮಗಾರಿಯಿಂದ ತೆಂಗಿನಕಾಯಿಯ ಬದಲಾಗಿ ರಸ್ತೆಯೇ ಬಿರುಕುಬಿಟ್ಟ ರೀತಿಯಲ್ಲಿ ಕಲ್ಲು ಎದ್ದಿದೆ.  ಘಟನೆಯಿಂದ ಅಸಮಧಾನಗೊಂಡ ಉದ್ಘಾಟನೆಗೆ ಬಂದಿದ್ದ ಬಿಜೆಪಿ ಶಾಸಕಿ ಶುಚಿ ಚೌದರಿ ಕಳಪೆ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕಳಪೆ ಕಾಮಗಾರಿ: ಉದ್ಘಾಟನೆ ವೇಳೆಯೇ ಬಿರುಕು ಬಿಟ್ಟ ಹೊಸ ರಸ್ತೆ
ರಸ್ತೆ ಅಗೆಯುತ್ತಿರುವುದು
Follow us on

ಉತ್ತರಪ್ರದೇಶ:  ಹೊಸದಾಗಿ ನಿರ್ಮಿಸಿದ ರಸ್ತೆ ಉದ್ಘಾಟನೆ ವೇಳೆ ತೆಂಗಿನ ಕಾಯಿ ಒಡೆದಾಗ, ತೆಂಗಿನ ಕಾಯಿಯ ಬದಲು ರಸ್ತೆಯೇ ಬಿರುಕುಬಿಟ್ಟ ಘಟನೆ ನಡೆದಿದೆಉತ್ತರಪ್ರದೇಶದ (Uttar Pradesh) ಬಿಜ್ನೋರ್ (Bijnor) ಜಿಲ್ಲೆಯಲ್ಲಿ ಬಿಜೆಪಿ ಶಾಕರೊಬ್ಬರು ಹೊಸದಾಗಿ ನಿರ್ಮಿಸಿದ ರಸ್ತೆಯ ಉದ್ಘಾಟನೆಗೆ ತೆರಳಿದ್ದರು. ಈ ವೇಳೆ ರಸ್ತೆಯ ಪೂಜೆಗೆಂದು ತೆಂಗಿನಕಾಯಿಯನ್ನು ಒಡೆಯಲು ಯತ್ನಿಸಿದರು. ಆದರೆ ಅಲ್ಲಿ ಮಾಡಿದ್ದ ಕಳಪೆ ಕಾಮಗಾರಿಯಿಂದ ತೆಂಗಿನಕಾಯಿಯ ಬದಲಾಗಿ ರಸ್ತೆಯೇ ಬಿರುಕುಬಿಟ್ಟ ರೀತಿಯಲ್ಲಿ ಕಲ್ಲು ಎದ್ದಿದೆಘಟನೆಯಿಂದ ಅಸಮಧಾನಗೊಂಡ ಉದ್ಘಾಟನೆಗೆ ಬಂದಿದ್ದ ಬಿಜೆಪಿ ಶಾಸಕಿ ಶುಚಿ ಚೌದರಿ (Suchi Choudhary) ಕಳಪೆ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ ಬಿರುಕುಬಿಟ್ಟ ಹೊಸ ರಸ್ತೆಯ ಮೇಲೆಯೇ ಧರಣಿ ಕುಳಿತ ಘಟನೆಯೂ ನಡೆಯಿತು.

1.16ಕೋಟಿ ರೂ. ವೆಚ್ಚದಲ್ಲಿ ಬಿಜ್ನೋರ್ ಜಿಲ್ಲೆಯಲ್ಲಿ 7 ಕಿಮೀ ನಷ್ಟು ದೂರ ಹೊಸ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯ ಉದ್ಘಾಟನೆಯ ವೇಳೆ ರಸ್ತೆಗೆ ಹೊಡೆದ ತೆಂಗಿನಕಾಯಿ ಒಡೆಯಲಿಲ್ಲ. ಬದಲಾಗಿ ರಸ್ತೆಗೆ ಹಾಕಿದ್ದ ಡಾಂಬರ್ ರಸ್ತೆ ಬಿಟ್ಟು ಎದ್ದಿತ್ತು. ಇದರಿಂದ ಮುಜುಗರಕ್ಕೊಳಗಾದ ಶಾಸಕರು ರಸ್ತೆಯನ್ನು ಅಗೆದಿದ್ದಾರೆ. ಆ ವೇಳೆ ಸುಲಭವಾಗಿ ಕಿತ್ತು ಬಂದ ಡಾಂಬರ್ ನೋಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಶಾಸಕಿ ಶುಚಿ ಚೌದರಿ ಅವರು ಸ್ತಳದಲ್ಲಿಯೇ ಧರಣಿ ಕುಳಿತಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ತಂಡವು ಪರಿಶೀಲನೆಗೆಂದು ರಸ್ತೆ ಕಾಮಗಾರಿಗೆ ಬಳಸಿದ್ದ ಜಲ್ಲಿಕಲ್ಲು, ಮರಳಿನ ಮಾದರಿಯನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ.

ಇದೇ ವೇಳೆ ಶಾಸಕರು ಕಳಪೆ ಕಾಮಗಾರಿ ನಡೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಉತ್ತರಪ್ರದೇಶ ರಾಜ್ಯ ಚುನಾವಣೆಗೆ ಕೇವಲ ಮೂರು ತಿಂಗಳು ಮಾತ್ರ ಉಳಿದಿದೆ. ಈ ನಡುವೆ ಉತ್ತರಪ್ರದೇಶ ಸರ್ಕಾರಕ್ಕೆ ಈ ರೀತಿಯ ಕಳಪೆ ಕಾಮಗಾರಿಗಳು ದೊಡ್ಡಆಘಾತವುಂಟು ಮಾಡಿದೆ.

ಇದನ್ನೂ ಓದಿ:

IND vs NZ: 89 ವರ್ಷಗಳ ಭಾರತ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಟೀಂ ಇಂಡಿಯಾ ಆರಂಭಿಕರು!

Sansad TV ಸಂಸದ್ ಟಿವಿ ಶೋ ನಿರೂಪಕಿ ಸ್ಥಾನ ತೊರೆದ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ

Published On - 5:14 pm, Sun, 5 December 21