Wedding: ಇಷ್ಟವಿಲ್ಲದಿದ್ದರೂ ಎರಡು ಮದುವೆ ಆಗಲೇಬೇಕು; ಈ ದೇಶದಲ್ಲಿ ಹೀಗೊಂದು ಕಾನೂನು

| Updated By: Rakesh Nayak Manchi

Updated on: Aug 16, 2022 | 6:47 PM

ಇಷ್ಟ ಇಲ್ಲದಿರಲಿ, ಸುಖ ಇಲ್ಲದಿರಲಿ, ಆದರೆ ಈ ದೇಶದಲ್ಲಿ ಮಾತ್ರ ಪುರುಷರು ಎರಡು ಮದುವೆ ಆಗಲೇಬೇಕು. ಮಹಿಳೆಯರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ಏನು ವಿಚಿತ್ರ ಅಲ್ವಾ?

Wedding: ಇಷ್ಟವಿಲ್ಲದಿದ್ದರೂ ಎರಡು ಮದುವೆ ಆಗಲೇಬೇಕು; ಈ ದೇಶದಲ್ಲಿ ಹೀಗೊಂದು ಕಾನೂನು
ಸಾಂಕೇತಿಕ ಚಿತ್ರ
Image Credit source: Shutterstock
Follow us on

ಕೆಲವರು ಒಂದಲ್ಲ ಎರಡು ಮದುವೆಯಾಗಲೂ ಸಿದ್ಧರಿರುತ್ತಾರೆ. ಆದರೆ ಕೆಲವರು ಇದಕ್ಕೆ ವಿರುದ್ಧ ಅಂದರೆ ಒಂದೇ ಮದುವೆಯಾಗುತ್ತಾರೆ. ಆದರೆ ಈ ದೇಶದ ಸಂಪ್ರದಾಯವನ್ನು ನೀವು ಕೇಳಿದರೆ ಆಶ್ಚರ್ಯಗೊಳ್ಳುವುದು ಖಂಡಿತ. ಪ್ರತಿಯೊಂದು ದೇಶದಲ್ಲಿ ಮದುವೆಗೆ ಸಂಬಂಧಿಸಿದ ವಿಭಿನ್ನ ಕಾನೂನುಗಳಿವೆ. ಆದರೆ ಈ ದೇಶದಲ್ಲಿ ಮಾತ್ರ ಪುರುಷರು ಎರಡು ಮದುವೆಯಾಗುವುದು ಕಡ್ಡಾಯ. ಇದು ಕಾನೂನು ಕೂಡ ಹೌದು. ಇದಕ್ಕೆ ಒಪ್ಪದಿದ್ದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಂತಹ ವಿಚಿತ್ರ ಕಾನೂನು ಇರುವುದು ಆಫ್ರಿಕಾ ಖಂಡದ ಎರಿಟ್ರಿಯಾ ಎಂಬ ದೇಶದಲ್ಲಿ.

ಎರಿಟ್ರಿಯಾದಲ್ಲಿ ಗಂಡಸರು ಎರಡು ಮದುವೆ ಮಾಡಿಕೊಳ್ಳುವುದು ಕಡ್ಡಾಯ. ನಿರಾಕರಿಸಿದರೆ ಅವರೆಲ್ಲ ಜೈಲಿಗೆ ಹೋಗಬೇಕಾಗುತ್ತದೆ. ಜೀವಾವಧಿ ಶಿಕ್ಷೆಯೂ ಅನುಭವಿಸಬೇಕಾಗುತ್ತದೆ. ಯಾಕೆ? ಇದೇನು ನಿಯಮ ಅಂತ ಯೋಚಿಸುತ್ತಿದ್ದೀರಾ? ಇವೆಲ್ಲದಕ್ಕೂ ಉತ್ತರ, ಆ ದೇಶದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿರುವುದು.

ಇಷ್ಟವಿರಲಿ, ಇಲ್ಲದಿರಲಿ, ಸುಖವಾಗಿರಲಿ, ಇಲ್ಲದಿರಲಿ ಎರಿಟ್ರಿಯಾದಲ್ಲಿ ಮಾತ್ರ ಎರಡು ಮದುವೆಯಾಗಲೇಬೇಕು. ಆಗ ಮಾತ್ರ ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತದೆ. ತನ್ನ ಗಂಡನನ್ನು ಇನ್ನೊಬ್ಬ ಮಹಿಳೆಯೊಂದಿಗೆ ಹಂಚಿಕೊಳ್ಳಲು ಮೊದಲ ಪತ್ನಿಯೂ ಒಪ್ಪಬೇಕು. ಒಬ್ಬ ಪುರುಷನಿಗೆ ಒಬ್ಬಳೇ ಪತ್ನಿ ಇದ್ದರೆ ಅಲ್ಲಿನ ಕಾನೂನು ಅವನನ್ನು ಅಪರಾಧಿ ಎಂದು ಪರಿಗಣಿಸುತ್ತದೆ.

ಇಂತಹ ವಿಚಿತ್ರ ಸಂಪ್ರದಾಯ ಆಚರಣೆಯ ಹಿಂದಿನ ಬಲವಾದ ಕಾರಣವೆಂದರೆ ಮಹಿಳೆಯರ ಜನಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿರುವುದು. ಅದಾಗ್ಯೂ ಈ ಕಾನೂನನ್ನು ಜಾರಿಗೊಳಿಸಿರುವುದಕ್ಕೆ ಎರಿಟ್ರಿಯಾವನ್ನು ಹಲವು ದೇಶಗಳು ಟೀಕಿಸಿದ್ದವು. ಆದರೆ ಎರಿಟ್ರಿಯಾ ದೇಶ ಇವ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಆದಾಗ್ಯೂ, ಎರಿಟ್ರಿಯಾದಲ್ಲಿ ಎರಡು ಮದುವೆಗಳ ಅಗತ್ಯವಿಲ್ಲ ಎಂದು ಕೆಲವರು ವಾದಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ನಿಯಮವನ್ನು ಅಲ್ಲಿನ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎಂದು ತಿಳಿದಿಲ್ಲ, ಆದರೆ ಈ ಸುದ್ದಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ