ವಿಚಿತ್ರ ನಂಬಿಕೆ; ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗಲು ಯುವತಿಯರು ಇಲ್ಲಿ ಬ್ರಾ ನೇತು ಹಾಕಿ ಹೋಗುತ್ತಾರೆ!

ಇಲ್ಲಿಗೆ ಬರುವ ಬಹುತೇಕ ಮಹಿಳೆಯರು ಒಳಉಡುಪುಗಳನ್ನು ಇಲ್ಲಿ ನೇತು ಹಾಕಿ ಹೋಗುತ್ತಾರೆ. ಹೀಗೆ ಮಾಡುವುದರಿಂದ ಕಷ್ಟಗಳೆಲ್ಲಾ ದೂರವಾಗಿ ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗುತ್ತಾನೆ ಎಂಬ ನಂಬಿಕೆಯಿದೆ.

ವಿಚಿತ್ರ ನಂಬಿಕೆ; ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗಲು ಯುವತಿಯರು ಇಲ್ಲಿ ಬ್ರಾ ನೇತು ಹಾಕಿ ಹೋಗುತ್ತಾರೆ!
ಬೇಲಿಯ ಮೇಲೆ ನೇತಾಡುವ ಬ್ರಾಗಳು
Image Credit source: Facebook

Updated on: Apr 13, 2024 | 2:00 PM

ನ್ಯೂಜಿಲೆಂಡ್‌:  ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಹರಿದಾಡುತ್ತಿರುತ್ತವೆ. ಇದೀಗ ಅಂತದ್ದೇ ಒಂದು ವಿಚಿತ್ರ ನಂಬಿಕೆಯ ಫೋಟೋ ವೈರಲ್ ಆಗಿದೆ. ವಾಸ್ತವವಾಗಿ, ಈ ಚಿತ್ರದಲ್ಲಿ, ನೀವು ತಂತಿ ಅಥವಾ ಬೇಲಿಯ ಮೇಲೆ ನೇತಾಡುವ ಅನೇಕ ಬ್ರಾಗಳನ್ನು ಕಾಣಬಹುದು. ಒಂದಲ್ಲ ಎರಡಲ್ಲ ಸಾವಿರಾರು ಬ್ರಾಗಳು ಈ ಬೇಲಿಯಲ್ಲಿ ನೇತಾಡುತ್ತಿವೆ. ವಾಸ್ತವವಾಗಿ, ಇಲ್ಲಿ ಬ್ರಾಗಳನ್ನು ಏಕೆ ನೇತುಹಾಕುತ್ತಾರೆ? ಈ ಸ್ಥಳ ಎಲ್ಲಿದೆ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನ್ಯೂಜಿಲೆಂಡ್‌ನ ಕಾರ್ಡೋನಾದಲ್ಲಿ ಈ ವಿಚಿತ್ರ ಸಂಪ್ರದಾಯ ಈಗಲೂ ಇದೆ. ಈ ಸ್ಥಳವು ಮಹಿಳೆಯರ ಒಳಉಡುಪುಗಳಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈಗ ಇದು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಇಲ್ಲಿಗೆ ಬರುವ ಬಹುತೇಕ ಮಹಿಳೆಯರು ಒಳಉಡುಪುಗಳನ್ನು ಇಲ್ಲಿ ನೇತು ಹಾಕಿ ಹೋಗುತ್ತಾರೆ. ಹೀಗೆ ಮಾಡುವುದರಿಂದ ಕಷ್ಟಗಳೆಲ್ಲಾ ದೂರವಾಗಿ ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗುತ್ತಾನೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ; ಬಟ್ಟೆ ಅಂಗಡಿಯ ಪುರುಷ ಸಿಬ್ಬಂದಿಯ ಮುಂದೆಯೇ ಬಟ್ಟೆ ಬಿಚ್ಚಿ ಟ್ರಯಲ್​​ ನೋಡಿದ ಯುವತಿ

ನ್ಯೂಜಿಲೆಂಡ್ ವೆಬ್‌ಸೈಟ್‌ನ ಪ್ರಕಾರ, ಕ್ರಿಸ್ಮಸ್ 1998 ಮತ್ತು ಹೊಸ ವರ್ಷದ 1999 ರ ನಡುವೆ ಇಲ್ಲಿ ನಾಲ್ಕು ಬ್ರಾಗಳು ಕಾಣಿಸಿಕೊಂಡವು. ಇದರ ನಂತರ, ಸಾಕಷ್ಟು ಚರ್ಚೆಗಳು ನಡೆದವು ಮತ್ತು ನಂತರ ಫೆಬ್ರವರಿಯಲ್ಲಿ, ಇಲ್ಲಿ ಬ್ರಾಗಳ ಸಂಖ್ಯೆಯು ಹೆಚ್ಚಾಯಿತು. ಇದೀಗಾ ದಿನಕ್ಕೆ ಲಕ್ಷಾಂತರ ಜನರು ಬರುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:11 pm, Sat, 13 April 24