Viral Video: ಶ್ವಾನವಾಗಿ ಬದಲಾದ ವ್ಯಕ್ತಿ, ಬರೋಬ್ಬರಿ 12 ಲಕ್ಷ ರೂ. ಖರ್ಚು

ಮನುಷ್ಯನಾದ ಪ್ರತಿಯೊಬ್ಬನಿಗೂ ಆಸೆ ಅನ್ನೋದು ಇದ್ದೇ ಇರುತ್ತದೆ.  ಅದೇ ರೀತಿ ಶ್ವಾನದಂತೆ ಕಾಣುವ ಆಸೆಯಿಂದ ಜಪಾನಿನ ವ್ಯಕ್ತಿಯೊಬ್ಬ ಕಳೆದ ವರ್ಷ ಬರೋಬ್ಬರಿ 12 ಲಕ್ಷ ರೂಪಾಯಿ ಖರ್ಚು ಮಾಡಿ ಶ್ವಾನದಂತೆ ಬದಲಾದ ಸುದ್ದಿಯನ್ನು ನೀವೆಲ್ಲರೂ ಕೇಳಿದ್ದೀರಿ ಅಲ್ವಾ. ಇದೀಗ ಆ ವ್ಯಕ್ತಿ ತನ್ನ ಶ್ವಾನದ ರೂಪವನ್ನು ಅಪ್ಗ್ರೇಡ್ ಮಾಡಿಕೊಂಡಿದ್ದಾನೆ. 

Viral Video: ಶ್ವಾನವಾಗಿ ಬದಲಾದ ವ್ಯಕ್ತಿ, ಬರೋಬ್ಬರಿ 12 ಲಕ್ಷ ರೂ. ಖರ್ಚು
ವೈರಲ್​​​ ವಿಡಿಯೋ
Edited By:

Updated on: May 01, 2024 | 6:07 PM

ಮನುಷ್ಯನಾದ ಪ್ರತಿಯೊಬ್ಬನಿಗೂ ಆಸೆ ಆಕಾಂಕ್ಷೆ ಅನ್ನೋದು ಇದ್ದೇ ಇರುತ್ತದೆ. ಚೆಂದದ ಮನೆ ಕಟ್ಟಬೇಕು, ಚೆನ್ನಾಗಿ ಸಂಪಾದನೆ ಮಾಡಬೇಕು ಮಡದಿ ಮಕ್ಕಳೊಂದಿಗೆ ಸುಖವಾಗಿ ಬಾಳಬೇಕು ಹೀಗೆ ಹಲವಾರು ಆಸೆಯನ್ನು ಇಟ್ಟುಕೊಂಡಿರುತ್ತಾನೆ. ಅದೇ ರೀತಿ ತಾನು ಶ್ವಾನದಂತೆ ಕಾಣಬೇಕು ಎಂಬ ವಿಚಿತ್ರ ಬಯಕೆಯಿಂದ ಜಪಾನಿನ ವ್ಯಕ್ತಿಯಾದ ಟೋಕೊ ಎಂಬವನು ಕಳೆದ ವರ್ಷ ಬರೋಬ್ಬರಿ 12 ಲಕ್ಷ ರೂಪಾಯಿ ಖರ್ಚು ಮಾಡಿ ಶ್ವಾನದಂತೆ ಬದಲಾಗಿದ್ದನು. ಈ ಸುದ್ದಿಯಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಆತ ಮತ್ತೊಮ್ಮೆ ಸುದ್ದಿಯಲ್ಲಿದ್ದು, ತನ್ನ ಶ್ವಾನದ ರೂಪವನ್ನು ಅಪ್ಗ್ರೇಡ್ ಗೊಳಿಸಿದ್ದಾನೆ.

ತಾನು ಶ್ವಾನದಂತೆ ಕಾಣಬೇಕು ಎಂಬ ಕಾರಣಕ್ಕೆ ಟೋಕೊ ಕಳೆದ ವರ್ಷ ಜಪೆಟ್ ಕಂಪೆನಿಯ ಮೊರೆ ಹೋಗಿದ್ದನು.  ಕಂಪೆನಿಯೂ ಈತನಿಗೆ ಇಷ್ಟವಾಗುವಂತೆ ಕೊಲಿ  ಜಾತಿಯ ನಾಯಿಯ ಕಾಸ್ಟ್ಯೂಮ್ ತಯಾರಿಸಿಕೊಟ್ಟಿತ್ತು. ಇದಕ್ಕಾಗಿ ಈತ ಬರೋಬ್ಬರಿ 12 ಲಕ್ಷ ರೂ. ಗಳನ್ನು ಖರ್ಚು ಮಾಡಿದ್ದನು. ಇದೀಗ ಈತ ತನ್ನ ಶ್ವಾನದ ರೂಪವನ್ನು ಅಪ್ಗ್ರೇಡ್ ಗೊಳಿಸಿದ್ದು,  ಕೊಲಿ ಶ್ವಾನದಿಂದ ತನ್ನ ರೂಪವನ್ನು ಅಲಾಸ್ಕನ್ ಮಲಾಮುಟ್ ಎಂಬ ಜಾತಿಯ ನಾಯಿಯಾಗಿ  ಬದಲಿಸಿಕೊಂಡಿದ್ದಾನೆ.  ಈ ಕಾಸ್ಟ್ಯೂಮ್ ಅನ್ನು ಕೂಡಾ ಜಪೆಟ್ ಕಂಪೆನಿಯೇ ತಯಾರಿಸಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು @I want to be animal ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಟೋಕೊ ಅಲಾಸ್ಕನ್  ಮಲಾಮುಟ್ ಜಾತಿಯ ಶ್ವಾನದ ವೇಷಭೂಷಣವನ್ನು ತೊಟ್ಟು ಬಾಲವನ್ನು ಅಲ್ಲಾಡಿಸುತ್ತಾ ಪಾರ್ಕ್ ಒಂದರಲ್ಲಿ ಸುತ್ತಾಡುತ್ತಾ ಅತ್ತಿಂದ್ದಿತ್ತ ಓಡಾಡುತ್ತಿರುವ ಮುದ್ದದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಜೈನ ಸನ್ಯಾಸಿಯಾದ ಬೆಂಗಳೂರು ಉದ್ಯಮಿಯ ಪತ್ನಿ ಮತ್ತು ಮಗ, ಇದು ಸಂತೋಷ, ಹೆಮ್ಮೆ ಕ್ಷಣ ಎಂದ ಪತಿ

ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 25 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಶ್ವಾನದ ವೇಷ ತುಂಬಾನೇ ಮುದ್ದಾಗಿದೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Wed, 1 May 24