AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ-ಶರ್ಟ್ ಮೇಲಿದ್ದ ಅದೊಂದೇ ವಾಕ್ಯ: ಇಂಟರ್​ವ್ಯೂನಲ್ಲಿ ಪ್ರತಿಷ್ಠಿತ ಕಂಪೆನಿ ಕೆಲಸ ಕಳೆದುಕೊಂಡ ಯುವತಿ!

ಅಮೆಜಾನ್ ಪ್ರೈಮ್‌ನ ಭಾವಿಷಾ ಜೈನ್, ಸಂದರ್ಶನವೊಂದರಲ್ಲಿ ಅಭ್ಯರ್ಥಿಯೊಬ್ಬರನ್ನು ಟಿ-ಶರ್ಟ್ ಸ್ಲೋಗನ್ ಕಾರಣಕ್ಕೆ ತಿರಸ್ಕರಿಸಿದ ಘಟನೆ ವೈರಲ್ ಆಗಿದೆ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವುದು ಮತ್ತು ಕೆಲಸಕ್ಕೆ ಗೌರವ ನೀಡುವುದು ಮುಖ್ಯ ಎಂದು ಭಾವಿಷಾ ಸ್ಪಷ್ಟಪಡಿಸಿದ್ದಾರೆ. ಕೇವಲ ಉಡುಪಲ್ಲ, ಅದರಲ್ಲಿನ ಸಂದೇಶ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇದು ಕಾರ್ಪೊರೇಟ್ ವಲಯದಲ್ಲಿ ಡ್ರೆಸ್ಸಿಂಗ್ ಸೆನ್ಸ್ ಮತ್ತು ವೃತ್ತಿಪರ ವರ್ತನೆಯ ಮಹತ್ವದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಟಿ-ಶರ್ಟ್ ಮೇಲಿದ್ದ ಅದೊಂದೇ ವಾಕ್ಯ: ಇಂಟರ್​ವ್ಯೂನಲ್ಲಿ ಪ್ರತಿಷ್ಠಿತ ಕಂಪೆನಿ ಕೆಲಸ ಕಳೆದುಕೊಂಡ ಯುವತಿ!
ಕೆಲಸ ಕಳೆದುಕೊಂಡ ಯುವತಿImage Credit source: Getty Images
ಅಕ್ಷತಾ ವರ್ಕಾಡಿ
| Edited By: |

Updated on:Jun 24, 2026 | 11:20 AM

Share

ಮುಂಬೈ: ಇಂಟರ್ವ್ಯೂನಲ್ಲಿ ನಿಮ್ಮ ಪ್ರತಿಭೆ ಎಷ್ಟು ಮುಖ್ಯವೋ, ನಿಮ್ಮ ಡ್ರೆಸ್ಸಿಂಗ್​ ಸೆನ್ಸ್​​ ಮತ್ತು ವರ್ತನೆ ಕೂಡ ಅಷ್ಟೇ ಮುಖ್ಯ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ, ಅಮೆಜಾನ್ ಪ್ರೈಮ್ ವಿಡಿಯೋ (Prime Video) ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ಅಭ್ಯರ್ಥಿಯೊಬ್ಬಳನ್ನು ಇಂಟರ್ವ್ಯೂ ಆರಂಭವಾಗುವ ಮುನ್ನವೇ ರಿಜೆಕ್ಟ್ ಮಾಡಿದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆ ಧರಿಸಿದ್ದ ಟಿ-ಶರ್ಟ್. ಪ್ರೈಮ್ ವಿಡಿಯೋದ ಸೋಶಿಯಲ್ ಮತ್ತು ಎಡಿಟೋರಿಯಲ್ ಲೀಡ್ ಆಗಿರುವ ಭಾವಿಷಾ ಜೈನ್ (Bhavisha Jain) ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಈಗ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರೊಫೈಲ್ ಸೂಪರ್, ಆದರೆ ಟಿ-ಶರ್ಟ್ ಸ್ಲೋಗನ್ ಯಡವಟ್ಟು:

ಭಾವಿಷಾ ಜೈನ್ ತಿಳಿಸಿರುವ ಪ್ರಕಾರ, ಮೂರು ತಿಂಗಳ ಹಿಂದೆ ಅವರು ತಮ್ಮ ತಂಡದ ಕಾಂಟೆಂಟ್ ಕ್ರಿಯೇಷನ್ ಅಥವಾ ಕಲ್ಪನಾತ್ಮಕ (Creative Role) ಹುದ್ದೆಗಾಗಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದರು. ಆಗ ಒಬ್ಬ ಯುವತಿಯ ಸಿವಿ (CV) ಅವರಿಗೆ ತುಂಬಾ ಇಷ್ಟವಾಗಿತ್ತು. ಆಕೆಗೆ ಪ್ರಮುಖ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ ಅನುಭವವಿತ್ತು ಮತ್ತು ಸೋಶಿಯಲ್ ಮೀಡಿಯಾದಲ್ಲಿ 50,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ಆಕೆಯ ಪ್ರತಿಭೆ ನೋಡಿ ಭಾವಿಷಾ ಪ್ರಭಾವಿತರಾಗಿದ್ದರು. ಆದರೆ, ಇಂಟರ್ವ್ಯೂ ದಿನದಂದು ಆ ಯುವತಿ ಕ್ಯಾಮೆರಾ ಮುಂದೆ ಬಂದಾಗ ಭಾವಿಷಾ ಅವರಿಗೆ ಶಾಕ್ ಕಾದಿತ್ತು. ಆಕೆ ಧರಿಸಿದ್ದ ಟಿ-ಶರ್ಟ್ ಮೇಲೆ ದೊಡ್ಡದಾಗಿ ಹೀಗೆ ಬರೆಯಲಾಗಿತ್ತು:“I am too hot for a job” (ಅಂದರೆ, ‘ಕೆಲಸ ಮಾಡಲು ನಾನು ತುಂಬಾ ಹಾಟ್ ಆಗಿದ್ದೇನೆ’ ಅಥವಾ ‘ಈ ಕೆಲಸಕ್ಕಿಂತ ನಾನು ಮಿಗಿಲಾದವಳು’). ಇದನ್ನು ನೋಡಿದ ತಕ್ಷಣ ಭಾವಿಷಾ ಅವರು ಇಂಟರ್ವ್ಯೂ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿ, ಆಕೆಯನ್ನು ಕೆಲಸಕ್ಕೆ ಆಯ್ಕೆ ಮಾಡದಿರಲು ನಿರ್ಧರಿಸಿದರು.

ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ

“ಇದು ಬಟ್ಟೆಯ ವಿಷಯವಲ್ಲ, ನಿಮ್ಮ ಆಟಿಟ್ಯೂಡ್ ಮುಖ್ಯ!”

ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಭಾವಿಷಾ, “ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಾಗಲಿ ಅಥವಾ ಗ್ಲಾಮರಸ್ ಆಗಿದ್ದಾಳೆ ಎಂದಾಗಲಿ ಅಲ್ಲ. ಬದಲಿಗೆ, ಆಕೆ ಧರಿಸಿದ್ದ ಬಟ್ಟೆಯ ಮೇಲಿನ ಸಂದೇಶ ಅವಳಿಗೆ ಈ ಕೆಲಸದ ಮೇಲೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತಿತ್ತು. ನಾವು ಮದುವೆಗೆ ಸ್ವಿಮ್‌ಸೂಟ್ ಹಾಕಿಕೊಂಡು ಹೋಗಲ್ಲ, ಜಿಮ್‌ಗೆ ಟುಕ್ಸೆಡೋ (ಕೋಟ್ ಸೂಟ್) ಧರಿಸಲ್ಲ. ಸಂದರ್ಭಕ್ಕೆ ತಕ್ಕಂತೆ ಇರುವುದು ಕನಿಷ್ಠ ಜವಾಬ್ದಾರಿ” ಎಂದಿದ್ದಾರೆ. “ನಿಮ್ಮನ್ನು ನೀವು ಸಾಬೀತುಪಡಿಸಲು ಇಂಟರ್ವ್ಯೂನಲ್ಲಿ ಕೇವಲ 30 ನಿಮಿಷ ಸಿಗುತ್ತದೆ. ನಿಮ್ಮ ಮಾತು, ನಿಮ್ಮ ಕೆಲಸದ ಫೈಲ್ ಜೊತೆಗೆ ನಿಮ್ಮ ಬಟ್ಟೆಯ ಮೇಲಿರುವ ಬರಹವೂ ನಿಮ್ಮ ವ್ಯಕ್ತಿತ್ವವನ್ನು ಕಮ್ಯುನಿಕೇಟ್ ಮಾಡುತ್ತದೆ. ಆಕೆ ಇಂಟರ್ವ್ಯೂ ಶುರುವಾಗುವ ಮುನ್ನವೇ ತಾನು ಈ ಕೆಲಸಕ್ಕೆ ಮಿಗಿಲಾದವಳು ಎಂದು ಹೇಳಿಕೊಂಡಿದ್ದಳು, ನಾನು ಅದನ್ನೇ ನಂಬಿ ರಿಜೆಕ್ಟ್ ಮಾಡಿದೆ” ಎಂದು ಭಾವಿಷಾ ಬರೆದುಕೊಂಡಿದ್ದಾರೆ. ಸದ್ಯ ಪೋಸ್ಟ್​ ಸೋಶಿಯಲ್​ ಮಿಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Tue, 23 June 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ