ಉಕ್ರೇನ್ ಮತ್ತು ರಷ್ಯಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಅಶಾಂತಿ ನೆಲೆಯೂರಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರೊಬ್ಬರ ವಿಡಿಯೋ ವೈರಲ್ ಆಗಿದೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪತ್ರಕರ್ತರೊಬ್ಬರು ಏಕಕಾಲದಲ್ಲಿ 6 ಭಾಷೆಗಳಲ್ಲಿ ವರದಿ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ವಾವ್ ಎಂದಿದ್ದಾರೆ. ಫಿಲಿಪ್ ಕ್ರೌಥರ್ ಎನ್ನುವವರು ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು. ಆರು ಭಾಷೆಗಳಲ್ಲಿ ನೇರಪ್ರಸಾರದ ವರದಿ ನೀಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಇವರು ಇಂಗ್ಲಿಷ್, ಲಕ್ಸೆಂಬರ್ಗ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಒಂದಾದಮೇಲೆ ಒಂದರಂತೆ ಭಾಷೆ ಬದಲಾಯಿಸಿ ವರದಿ ನೀಡಿದ್ದಾರೆ.
Six-language coverage from #Kyiv with @AP_GMS. In this order: English, Luxembourgish, Spanish, Portuguese, French, and German. pic.twitter.com/kyEg0aCCoT
— Philip Crowther (@PhilipinDC) February 21, 2022
ಉಕ್ರೇನ್ ರಾಜಧಾನಿ Kyivನಿಂದ ನೇರಪ್ರಸಾರದಲ್ಲಿ ಆರು ಭಾಷೆಗಳಲ್ಲಿ ವರದಿ ನೀಡಿದ್ದಾರೆ. ಸದ್ಯ ಜಗತ್ತಿನಾದ್ಯಂತ ಎಲ್ಲರ ದೃಷ್ಟಿ ಮಾಧ್ಯಮಗಳಿಗೆ ಅದಕ್ಕೆ ಕಾರಣ ಉಕ್ರೇನ್ ಮತ್ತು ರಷ್ಯಾ ನಡುವುನ ಸಂಘರ್ಷ. ಹೀಗಾಗಿ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಲು ಮಾಧ್ಯಮಗಳನ್ನು ನೋಡುವ ಜನರಿಗೆ ಒಬ್ಬನೇ ವ್ಯಕ್ತಿ ಆರು ಭಾಷೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 8 ವರ್ಷಗಳಿಂದ ನಡೆಯುತ್ತಿದ ಸಂಘರ್ಷ ಈಗ ಉದ್ವಿಗ್ವಗೊಂಡಿದೆ. ಆದರೆ ರಾಜಧಾನಿಉ Kyiv ಶಾಂತವಾಗಿದೆ ಎಂದು ನೇರಪ್ರಸಾರದಲ್ಲಿ ವರದಿ ನೀಡಿದ್ದಾರೆ. ಸದ್ಯ ಈ ವಿಡಿಯೋ 17 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದಿದೆ.
ಇದನ್ನೂ ಓದಿ:
ಜಗತ್ತಿನ ಸಕ್ರಿಯ ಜ್ವಾಲಾಮುಖಿ ಮೌಂಟ್ ಎಟ್ನಾ ಸ್ಫೋಟ: 12 ಕಿಮೀ ವ್ಯಾಪಿಸಿದ ಹೊಗೆ-ವಿಡಿಯೋ ವೈರಲ್
Published On - 11:00 am, Wed, 23 February 22