AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮರ್ ತೇರಿ ಲೆಫ್ಟ್ ರೈಟ್; 17 ಮಿಲಿಯನ್​ ನೆಟ್ಟಿಗರು ಈ ಪುಟ್ಟಿಯ ಆತ್ಮವಿಶ್ವಾಸಕ್ಕೆ ಫಿದಾ

Viral Video : ಹರ್ಯಾನ್ವಿ ಹಾಡಿಗೆ ಈ ಪುಟ್ಟ ಹುಡುಗಿ ಹೆಜ್ಜೆ ಹಾಕಿರುವ ರೀತಿ ಯಾರನ್ನೂ ಮರಳುಗೊಳಿಸುವಂತಿದೆ. 23 ಲಕ್ಷಕ್ಕೂ ಹೆಚ್ಚು ಜನ ಈಕೆಯ ನೃತ್ಯವನ್ನು ಮೆಚ್ಚಿದ್ದಾರೆ. ವರ್ಷಾಂತ್ಯಕ್ಕೆ ಉತ್ಸಾಹ ತುಂಬಲು ಈ ವಿಡಿಯೋ ಸಾಕಲ್ಲವೆ?

ಕಮರ್ ತೇರಿ ಲೆಫ್ಟ್ ರೈಟ್; 17 ಮಿಲಿಯನ್​ ನೆಟ್ಟಿಗರು ಈ ಪುಟ್ಟಿಯ ಆತ್ಮವಿಶ್ವಾಸಕ್ಕೆ ಫಿದಾ
ಕಮರ್ ತೇರಿ ಲೆಫ್ಟ್​ ರೈಟ್
TV9 Web
| Edited By: ಶ್ರೀದೇವಿ ಕಳಸದ|

Updated on: Dec 31, 2022 | 10:12 AM

Share

Viral Video : ಕಮರ್ ತೇರಿ ಲೆಫ್ಟ್ ರೈಟ್ ಇದು ಹರ್ಯಾನ್ವಿ ಹಾಡು. ಈ ಪುಟ್ಟ ಹುಡುಗಿ ಈ ಹಾಡಿಗೆ ನೃತ್ಯ ಮಾಡಿರುವ ರೀತಿಗೆ ನೆಟ್ಟಿಗರು ಮರುಳಾಗಿದ್ದಾರೆ. ಈತನ ಈ ವಿಡಿಯೋ ಅನ್ನು 16 ಮಿಲಿಯನ್ ಜನರು ನೋಡಿದ್ದಾರೆ. ವರ್ಷಾಂತ್ಯದ ಕೊನೆಯ ದಿನವಾದ ಇಂದು ಇದಕ್ಕಿಂತ ಉತ್ಸಾಹ ತುಂಬುವ ವಿಡಿಯೋ ಬೇಕೇ? ಈ ಪುಟ್ಟ ಹುಡುಗಿಯ ಹೆಸರು ದಿಶು ಯಾದವ್​. ಹಳದಿ ಫ್ರಾಕ್​ ಮತ್ತು ಡೆನಿಮ್ ಜಾಕೆಟ್ ಹಾಕಿಕೊಂಡು ನರ್ತಿಸಿರುವ ಈ ಹುಡುಗಿಯ ಗತ್ತು, ಮುಖಭಾವ ಎಂಥ ಚೆಂದ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dishu Yadav (@aapkidishu_)

ಈ ಹಾಡು 2020ರಲ್ಲಿ ಬಿಡುಗಡೆಯಾಗಿತ್ತು. ಗಾಯಕ ಅಜಯ್ ಹೂಡಾ ಈ ಹಾಡನ್ನು ಹಾಡಿದ್ದರು. ಈಗ ಈ ವಿಡಿಯೋದಲ್ಲಿಯೂ ಅವರೇ ಲೈವ್​ನಲ್ಲಿ ಹಾಡಿದ್ಧಾರೆ. ಈ ಪುಟ್ಟ ಹುಡುಗಿ ಅದೆಷ್ಟು ಗಂಭೀರವಾಗಿ ನೃತ್ಯಾಭಿನಯ ಮಾಡಿದ್ದಾಳೆ. ನೋಡಿದ ಯಾರಿಗೂ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಮುದ್ದಿನಿಂದ ಕೂಡಿದೆ ಈ ವಿಡಿಯೋ. 23 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇಂಥ ಆತ್ಮವಿಶ್ವಾಸ ಬೇಕು ಬದುಕಿನಲ್ಲಿ ಎಂದಿದ್ದಾರೆ ಒಬ್ಬರು. ಈ ಮಗು ಬೊಂಬೆಯಂತೆ ಚೆಂದ ಇದೆ ಎಂದಿದ್ದಾರೆ ಇನ್ನೊಬ್ಬರು. ವಯಸ್ಸಿಗೆ ಮೀರಿ ಗಾಂಭೀರ್ಯದಿಂದ ನೃತ್ಯದಲ್ಲಿ ತೊಡಗಿಕೊಂಡಿದೆ ಈ ಮಗು ಎಂದು ಅನೇಕರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್