ಸೇಲ್ ಆಗದೇ ಉಳಿದ ಲಾಟರಿ ಟಿಕೆಟ್​ಗೆ 1 ಕೋಟಿ ರೂ ಬಂಪರ್ ಬಹುಮಾನ; ಏಜೆಂಟ್​ಗೆ ಹಿಗ್ಗೋ ಹಿಗ್ಗು

|

Updated on: Oct 08, 2023 | 12:35 PM

Kerala Fifty Fifty Lottery: ಮೂರು ವರ್ಷಗಳಿಂದ ಲಾಟರಿ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರಿಗೆ ಮೊದಲ ಬಾರಿಗೆ ಬಂಪರ್ ಬಹುಮಾನ ಸಿಕ್ಕಿದೆ. ಸೇಲ್ ಆಗದೇ ಉಳಿದ ಲಾಟರಿ ಟಿಕೆಟ್​ಗೆ ಮೊದಲ ಬಹುಮಾನ ಪ್ರಾಪ್ತವಾಗಿದೆ. ಕೇರಳ ಸರ್ಕಾರದ ಫಿಫ್ಟಿ ಫಿಫ್ಟಿ ಲಾಟರಿಯಲ್ಲಿ ಬಂಪರ್ ಬಹುಮಾನದ ಮೊತ್ತದವಾದ ಒಂದು ಕೋಟಿ ರೂ ಹಣ ಗಂಗಾಧರನ್ ಪಾಲಾಗಿದೆ. ಎನ್ ಕೆ ಗಂಗಾಧರನ್ 33 ವರ್ಷಗಳ ಕಾಲ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ ಬಳಿಕ ಕೋಳಿಕೋಡ್​ನಲ್ಲಿ 3 ವರ್ಷಗಳ ಹಿಂದೆ ಲಾಟರಿ ಶಾಪ್ ಸ್ಥಾಪಿಸಿದ್ದರು.

ಸೇಲ್ ಆಗದೇ ಉಳಿದ ಲಾಟರಿ ಟಿಕೆಟ್​ಗೆ 1 ಕೋಟಿ ರೂ ಬಂಪರ್ ಬಹುಮಾನ; ಏಜೆಂಟ್​ಗೆ ಹಿಗ್ಗೋ ಹಿಗ್ಗು
ಬಂಪರ್ ಬಹುಮಾನ
Follow us on

ತಿರುವನಂತಪುರಂ, ಅಕ್ಟೋಬರ್ 8: ಮಾರಾಟವಾಗದೇ ಉಳಿದ ಲಾಟರಿ ಟಿಕೆಟ್​ವೊಂದಕ್ಕೆ 1 ಕೋಟಿ ರೂ ಬಂಪರ್ ಬಹುಮಾನ (Kerala fifty fifty lottery bumper prize) ಸಿಕ್ಕಿದ ಘಟನೆ ಕೇರಳದಲ್ಲಿ ವರದಿಯಾಗಿದೆ. ಕೇರಳ ರಾಜ್ಯ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯಲ್ಲಿ ಬಂಪರ್ ಬಹುಮಾನವು ಕೋಳಿಕೋಡ್​ನ ಎನ್.ಕೆ. ಗಂಗಾಧರನ್ ಎಂಬುವರಿಗೆ ಸಿಕ್ಕಿದೆ. ಇವರು ಲಾಟರಿ ಶಾಪ್ ಇಟ್ಟುಕೊಂಡಿರುವವರು. ಇವರ ಶಾಪ್​​ನಲ್ಲಿ ಮಾರಾಟವಾಗದೇ ಉಳಿದ ಹಲವು ಟಿಕೆಟ್​ಗಳಲ್ಲಿ ಒಂದಕ್ಕೆ 1 ಕೋಟಿ ರೂ ಬಹುಮಾನ ಪ್ರಾಪ್ತವಾಗಿದೆ. ಈತನ ಸ್ಟಾಲ್​ಗೆ ವಿತರಣೆ ಆಗಿರುವ ಫಿಫ್ಟಿ ಫಿಫ್ಟಿ ಲಾಟರಿ ಟಿಕೆಟ್​ಗಳಲ್ಲಿ 6ಕ್ಕೆ 5,000 ರೂ ಬಹುಮಾನ ಕೂಡ ಸಿಕ್ಕಿದೆ.

ಎನ್ ಕೆ ಗಂಗಾಧರನ್ 33 ವರ್ಷಗಳ ಕಾಲ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ ಬಳಿಕ ಕೋಳಿಕೋಡ್​ನಲ್ಲಿ 3 ವರ್ಷಗಳ ಹಿಂದೆ ಲಾಟರಿ ಶಾಪ್ ಸ್ಥಾಪಿಸಿದ್ದರು. ಇದೇ ಮೊದಲ ಬಾರಿಗೆ ಇವರ ಅಂಗಡಿಯಲ್ಲಿನ ಟಿಕೆಟ್​ಗೆ ಮೊದಲ ಬಹುಮಾನ ಸಿಕ್ಕಿರುವುದು. ಲಾಟರಿ ಡ್ರಾನಲ್ಲಿ ತಮ್ಮ ಅಂಗಡಿಯ ಟಿಕೆಟ್​ಗೆ ಬಂಪರ್ ಬಹುಮಾನ ಬಂದಿರುವುದು ಗೊತ್ತಾದಾಗ ಆ ಸಂಖ್ಯೆಯ ಟಿಕೆಟ್ ಮಾರಾಟವಾಗದೇ ಉಳಿದ ಲಾಟರಿಯದ್ದಾಗಿತ್ತು. ಇದು ಗೊತ್ತಾಗುತ್ತಲೇ ಗಂಗಾಧರನ್ ದಿಗ್ಮೂಢಗೊಂಡಿದ್ದರು.

ತಮ್ಮಲ್ಲಿ ಬಂಪರ್ ಲಾಟರಿ ಇರುವುದು ಗೊತ್ತಾದರೆ ಕಳ್ಳತನ ಆಗಬಹುದು ಎನ್ನುವ ಕಾರಣಕ್ಕೆ ಎಚ್ಚರವಹಿಸಿ, ಬ್ಯಾಂಕಿಗೆ ಆ ಟಿಕೆಟ್ ನೀಡುವವರೆಗೂ ಯಾರಿಗೂ ಈ ವಿಚಾರವನ್ನು ಗಂಗಾಧರ್ ತಿಳಿಸಲಿಲ್ಲವಂತೆ.

ಇದನ್ನೂ ಓದಿ: Viral: ‘2 ಲಕ್ಷಕ್ಕೆ ಮಾರಾಟಕ್ಕಿರುವ ಅಪ್ಪ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

ಬೆಂಗಳೂರಿನ ವ್ಯಕ್ತಿಗೆ ಅಬುಧಾಬಿ ಲಾಟರಿಯಲ್ಲಿ 44 ಕೋಟಿ ರೂ

ಕೆಲ ತಿಂಗಳ ಹಿಂದೆ ಬೆಂಗಳೂರಿನ ವ್ಯಕ್ತಿಯೊಬ್ಬರು ಅಬುಧಾಬಿ ಬಿಗ್ ಟಿಕೆಟ್ ಡ್ರಾನಲ್ಲಿ ಮೊದಲ ಬಹುಮಾನ ಗೆದ್ದಿದ್ದರು. ಅದರ ಮೊತ್ತ 20 ಮಿಲಿಯನ್ ಡಿರಾಂ ಆಗಿತ್ತು. ಅಂದರೆ ಬರೋಬ್ಬರಿ 44 ಕೋಟಿ ರೂ ಮೊತ್ತದ ಬಂಪರ್ ಬಹುಮಾನವಾಗಿತ್ತು. ಈ ಅದೃಷ್ಟವಂತನ ಹೆಸರು ಅರುಣ್ ಕುಮಾರ್ ವಾಟಕ್ಕೆ ಕೊರೋತ್. ಲಾಟರಿ ಸಂಸ್ಥೆ ಈತನಿಗೆ ಬಂಪರ್ ಬಹುಮಾನ ಬಂದಿದೆ ಎಂದು ಕರೆ ಮಾಡಿದಾಗ ಇದು ನಕಲಿ ಕರೆ ಎಂದು ಅರುಣ್ ಭಾವಿಸಿದ್ದರಂತೆ. ಆ ಕರೆಯನ್ನು ಡಿಸ್​ಕನೆಕ್ಟ್ ಮಾಡಿ ಆ ನಂಬರ್ ಅನ್ನೂ ಬ್ಲಾಕ್ ಮಾಡಿದ್ದರಂತೆ.

ಇದನ್ನೂ ಓದಿ: Viral Video: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು

ಆದರೆ ಬೇರೆ ನಂಬರ್​ನಿಂದ ಈತನಿಗೆ ಕರೆ ಮಾಡಿ ಲಾಟರಿ ಹೊಡೆದಿರುವ ವಿಚಾರವನ್ನು ತಿಳಿಸಲಾಯಿತಂತೆ. ಕುತೂಹಲ ಎಂದರೆ, ಈತ ಎರಡು ಲಾಟರಿ ಟಿಕೆಟ್ ಖರೀದಿಸಿದ್ದಕ್ಕೆ ಒಂದು ಉಚಿತವಾಗಿ ಸಿಕ್ಕಿತ್ತು. ಆ ಉಚಿತ ಲಾಟರಿ ಟಿಕೆಟ್​ಗೆಯೇ ಬಂಪರ್ ಬಹುಮಾನ ಬಂದಿತ್ತು.

(ಗಮನಿಸಿ: ಲಾಟರಿ ಆಡುವುದು ಜೂಜು. ಇದು ಗೆಲುವು ತಂದುಕೊಡುವ ಪ್ರಮಾಣ ತೀರಾ ಕಡಿಮೆ. ನಷ್ಟವಾಗುವ ಸಂಭವನೀಯತೆ ಬಹಳ ಹೆಚ್ಚು)

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ