ಕೊರಿಯನ್ Vs ಭಾರತೀಯ ಆಫೀಸ್ ಡಿನ್ನರ್: ಯಾವುದು ಉತ್ತಮ; ಕೋರಿಯನ್ ಮಹಿಳೆ ಹೇಳಿದ್ದೇನು?

|

Updated on: Apr 02, 2023 | 5:06 PM

ಕೊರಿಯದಲ್ಲಿನ ಆಫೀಸ್ ಭೋಜನ ಮತ್ತು ಭಾರತದಲ್ಲಿ ಆಫೀಸ್ ಭೋಜನದ ನಡುವಿನ ವ್ಯತ್ಯಾಸವನ್ನು ಇಲ್ಲಿರುವ ವೀಡಿಯೊದಲ್ಲಿ ನೋಡಿ.

ಕೊರಿಯನ್ Vs ಭಾರತೀಯ ಆಫೀಸ್ ಡಿನ್ನರ್: ಯಾವುದು ಉತ್ತಮ; ಕೋರಿಯನ್ ಮಹಿಳೆ ಹೇಳಿದ್ದೇನು?
Korean Vs Indian Office Dinners
Follow us on

ಭಾರತದಲ್ಲಿ ದಕ್ಷಿಣ ಕೊರಿಯಾಯದ ಡ್ರಾಮಾ (K-drama), ಪಾಪ್ ಕಲ್ಚರ್ (K-pop)ಹಾಗು ಆಹಾರ (Food) ಸಖತ್ ಫೇಮಸ್ ಆಗುತ್ತಿದೆ. ಅದರಲ್ಲೂ ಕೆ-ಡ್ರಾಮಾದಲ್ಲಿ ಕಾಣೋ ಕೆಲವು ಆಹಾರವನ್ನು ಜನ ಹುಚ್ಚೆದ್ದು ತಿನ್ನಲು ಬಯಸುತ್ತಾರೆ. ಹಾಗೆಯೇ ಕೋರಿಯನ್ (Korean) ಬಟ್ಟೆಗಳು, ಹೇರ್ ಸ್ಟೈಲ್, ಸಂಸ್ಕೃತಿಯ ಬಗ್ಗೆ ಆಸಕ್ತಿ ಇರುವವರು ಹಲವರಾದರೆ, ನಾನು ಕೊರಿಯಾಗೆ ಹೋಗಿ ಅಲ್ಲಿಯೇ ಇರಬೇಕು ಎಂದು ಆಸೆ ಪಡುವವರು ಕೆಲವರು. ಕೆ-ಡ್ರಾಮಾ ನೋಡಿ ಪ್ರೇರಿತಗರಿರುವವರಿಗೆ ಇಲ್ಲಿದೆ ಒಂದು ಸಣ್ಣ ಉದಾಹರಣೆ, ಇದರಿಂದ ಅಲ್ಲಿಯ ಸಂಸ್ಕೃತಿಗೂ, ಇಲ್ಲಿಗೂ ಎಷ್ಟು ವ್ಯತ್ಯಾಸ ಇದೆ ಎಂಬುದು ತಿಳಿಯುತ್ತೆ. ಜೊತೆಗೆ ನಮ್ಮ ಭಾರತ ಯಾಕೆ ಬೆಸ್ಟ್ ಅನ್ನೋದು ಗೊತ್ತಾಗುತ್ತೆ.

ಹೌದು, ಕೆ-ಡ್ರಾಮಾದಲ್ಲಿ ನೋಡೋವಾಗ ನಾವು ಉದ್ಯೋಗಿಗಳು ತಮ್ಮ ಬಾಸ್, ಅಥವಾ ತಮ್ಮಿಂದೇ ಉತ್ತಮ ಸ್ಥಾನದಲ್ಲಿರುವವರ ಜೊತೆ ಟೀಮ್ ಲಂಚ್ ಅಥವಾ ಡಿನ್ನರ್​ಗೆ ಹೋಗುವುದನ್ನು ನೋಡಿರುತ್ತೀರಾ. ಅಲ್ಲಿ ಮಾಂಗ್ನೇ (maknea) ಎಲ್ಲರಿಂದ ಕಿರಿಯ ಉದ್ಯೋಗಿ ಉಳಿದವರಿಗೆ ಸೂಜು ಅನ್ನು ಹಾಕಿ ಅವರನ್ನು ನೋಡದೆ ಪಕ್ಕಕ್ಕೆ ತಿರುಗಿ ಸೂಜು ಅನ್ನು ಕುಡಿಯುತ್ತಾರೆ. ಇದರಲ್ಲೂ ಮಹಿಳೆಯರಿಗೆ ಮದ್ಯಪಾನ ಇಷ್ಟವಿಲ್ಲದಿದ್ದರು, ಅದೆಷ್ಟೋ ಬಾರಿ ಮದ್ಯಪಾನ ಮಾಡಲೇಬೇಕಾಗುತ್ತದೆ. ಏಕೆಂದರೆ ಕೊರಿಯಾದಲ್ಲಿ ಅದು ಗೌರವದ ಸಂಕೇತ ಎಂದು ಹೇಳಬಹುದು.

ಹೀಗಿರುವಾಗ ಮೂಲತಃ ದಕ್ಷಿಣ ಕೋರೆಯಾದವರಾದ ಮಹಿಳಾ ಉದ್ಯೋಗಿಯೊಬ್ಬರು ಭಾರತದ್ಲಲಿ ಟೀಮ್ ಡಿನ್ನರ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ಅವರು ಭಾರತದಲ್ಲಿನ ಟೀಮ್ ಡಿನ್ನರ್ ಅನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಆಫೀಸ್ ಮುಗಿದ ನಂತರ ಎಲ್ಲರು ಹಿರಿಯರು, ಕಿರಿಯರು ಎಂದು ಭೇದ-ಭಾವ ಮಾಡದೆ ಸಂತೋಷದಿಂದ ಟೀಮ್-ಔಟಿಂಗ್, ಡಿನ್ನರ್ ಅಥವಾ ಲಂಚ್ ಅಲ್ಲಿ ಕಾಲ ಕಳೆಯುತ್ತಾರೆ. ಮದ್ಯಪಾನ ಇಷ್ಟವಿಲ್ಲದಿದ್ದರೆ, ಯಾರು ಯಾರನ್ನು ಒತ್ತಾಯಿಸುವಿದಿಲ್ಲ. ಈ ಎಲ್ಲ ಅಂಶಗಳು ಆ ಕೋರಿಯನ್ ಉದ್ಯೋಗಿಗೆ ಸಂತೋಷ ತಂದಿದೆ.

ಇದನ್ನೂ ಓದಿ: ಉತ್ತರ ಪತ್ರಿಕೆಯಲ್ಲಿ ಫುಲ್​​​​​ ಸಿನಿಮಾ ಸಾಂಗ್ ಬರೆದಿಟ್ಟ ವಿದ್ಯಾರ್ಥಿ, ಯಾವ ಹಾಡು ಗೊತ್ತಾ?

ಯಾವುದೇ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಒಲವು ತೋರಿಸುವುದು, ಕೂತಹಲ ಇರುವುದು ತಪ್ಪಲ್ಲ. ಆದರೆ ಅಲ್ಲಿನ ಆಚಾರ ವಿಚಾರವನ್ನು ಸಂಪೂರ್ಣವಾಗಿ ತಿಳಿಯದೆ ಅದೇ ಸಂಸ್ಕೃತಿ ಉತ್ತಮ ಎಂದು ನಂಬುವುದು ಸರಿಯಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ. ಕೆಲವರು ತಮ್ಮ ಸ್ವಂತ ಕಚೇರಿಯ ಪಾರ್ಟಿ ಅನುಭವಗಳನ್ನು ಹಂಚಿಕೊಂಡರು.