Boyfriend: ಲೈಫು ಬೋರ್ ಆಗ್ತಿದೆ ಅಂತಾ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಂಡ ವಿವಾಹಿತ ಮಹಿಳೆ! ತಿಂಗಳ ಖರ್ಚಿಗೆ 60 ಸಾವಿರ ಕೊಡ್ತಿದಾನಂತೆ ಗುಪ್ತ್​​ ಗುಪ್ತ್​​​ ಗೆಳೆಯ!

|

Updated on: May 14, 2023 | 11:34 AM

ಹೀಗೆ ಬಾಯ್​ಫ್ರೆಂಡ್ ಗಾಗಿ ತಲಾಷೆ ಮಾಡುವಾಗ ಒಬ್ಬ ಸಿಕ್ಕಿದ್ದು, ಆ ಗೆಳೆಯನಿಂದ ಪ್ರತಿ ತಿಂಗಳು ಪಾಕೆಟ್​​ ಮನಿಗಾಗಿ 60 ಸಾವಿರ ರೂ ಬರುವಂತೆ ನೋಡಿಕೊಂಡಿದ್ದಾಳೆ. ಆದರೆ ಈ ಗೆಳೆಯನ ಬಗ್ಗೆ ಜೆನ್ನಿ ತನ್ನ ಪತಿಗೆ ಹೇಳಿಲ್ಲ ಎಂಬುದು ಸ್ವಾರಸ್ಯಕರವಾಗಿದೆ.

Boyfriend: ಲೈಫು ಬೋರ್ ಆಗ್ತಿದೆ ಅಂತಾ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಂಡ ವಿವಾಹಿತ ಮಹಿಳೆ! ತಿಂಗಳ ಖರ್ಚಿಗೆ 60 ಸಾವಿರ ಕೊಡ್ತಿದಾನಂತೆ ಗುಪ್ತ್​​ ಗುಪ್ತ್​​​ ಗೆಳೆಯ!
ಲೈಫು ಬೋರ್ ಆಗ್ತಿದೆ ಅಂತಾ ಬಾಯ್ ಫ್ರೆಂಡ್ ಆಯ್ಕೆ ಮಾಡಿಕೊಂಡ ವಿವಾಹಿತ ಮಹಿಳೆ!
Image Credit source: wikihow.com
Follow us on

ಹೆತ್ತವರು, ಸಹೋದರರು ಮತ್ತು ಸಹೋದರಿಯರಂತಹ ಅನೇಕ ರಕ್ತ ಸಂಬಂಧಗಳು ಜೀವನದಲ್ಲಿ ಬಹಳ ವಿಶೇಷವಾದವುಗಳಾಗಿವೆ. ಆದರೆ ಇದೆಲ್ಲಕ್ಕಿಂತ ಹೆಚ್ಚು ವಿಶೇಷ ಅನ್ನಿಸುತ್ತದೆ.. ಗಂಡ ಹೆಂಡತಿಯ (husband wife) ನಡುವಿನ ಸಂಬಂಧ. ಯಾವುದೇ ಬಂಧ ಅಥವಾ ಸಂಬಂಧವು ನಂಬಿಕೆಯ ಮೇಲೆ ಆಧಾರಿತವಾಗಿದೆ.. ಅದರಲ್ಲೂ ಪತಿ-ಪತ್ನಿಯರ ನಡುವೆ ಸುಂದರ ಸಂಬಂಧಕ್ಕೆ ಎಲ್ಲರಿಗೂ ನಂಬಿಕೆ ಮತ್ತು ಪ್ರೀತಿ ಬೇಕು. ಯಾಕೆಂದರೆ ಗಂಡ ಹೆಂಡತಿಯ ನಡುವಿನ ಬಾಂಧವ್ಯ ತುಂಬಾ ಸೂಕ್ಷ್ಮ. ಒಮ್ಮೆ ದಾರ ಕಿತ್ತುಬಂದರೆ.. ಅದನ್ನು ಒಂದುಗೂಡಿಸುವ ಗಂಟುಗಳು ಹೇಗೆ ಕಾಣಿಸುತ್ತದೋ.. ಅದೇ ರೀತಿ ಪತಿ-ಪತ್ನಿಯರ ನಡುವೆ ಗಲಾಟೆಯಾದರೆ.. ಅವುಗಳ ಪರಿಣಾಮ ಜೀವನದ ಮೇಲೆ ಗೋಚರಿಸುತ್ತದೆ. ಮತ್ತು ಸಂಬಂಧವು ಮುರಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ದಂಪತಿಗಳು ಗಲಿಬಿಲಿಯಾಗದಂತೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ.. ಅದರಂತೆ ತಮ್ಮ ಜೋಡಿ ಜೀವನವನ್ನು ಮುಂದುವರೆಸುತ್ತಾರೆ.. ಆದರೆ ಕೆಲವರು ಪತಿ-ಪತ್ನಿಯ ನಡುವಿನ ಸಂಬಂಧದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಇದಲ್ಲದೆ, ಮದುವೆಯ ನಂತರವೂ ಅವರು ಇತರರೊಂದಿಗೆ ಸಂಬಂಧವನ್ನು ಹೊಂದಲುಬಯಸುತ್ತಾರೆ. ಅಂಥದ್ದೊಂದು ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದು ತುಂಬಾ ಆಶ್ಚರ್ಯಕರವೂ ಆಗಿದೆ (life style).

ಅಸಲಿ ವಿಷಯಕ್ಕೆ ಬರುವುದಾದರೆ..  ಯುನೈಟೆಡ್​​ ಕಿಂಗ್​​ಡಮ್​​​ ನಿವಾಸಿ 42 ವರ್ಷದ ಮಹಿಳೆಯೊಬ್ಬರು ಮದುವೆಯಾಗಿದ್ದರೂ ಬೇರೆ ಪುರುಷನೊಂದಿಗೆ (boyfriend) ಸಂಬಂಧ ಹೊಂದಿದ್ದಾರೆ. ಮೇಲಾಗಿ ತನ್ನ ಗೆಳೆಯನಿಂದ ಪಾಕೆಟ್ ಮನಿಗಾಗಿ ಪ್ರತಿ ತಿಂಗಳು ಸುಮಾರು 60 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾಳಂತೆ. ಸದ್ಯ ಈ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಆ ಮಹಿಳೆಯ ಹೆಸರು ಜೆನ್ನಿಫರ್.

ಇದನ್ನು ಸ್ವತಃ ಜೆನ್ನಿಫರ್ ಬಹಿರಂಗಪಡಿಸಿದ್ದಾರೆ – ಡೈಲಿ ಸ್ಟಾರ್ ಮಾಧ್ಯಮದ ಪ್ರಕಾರ, ಇತ್ತೀಚೆಗೆ ಜೆನ್ನಿಫರ್ ತನ್ನ ಜೀವನದ ಬಗ್ಗೆ ಆಘಾತಕಾರಿ ಸತ್ಯವನ್ನು ಹೇಳಿದ್ದಾಳೆ. ಜೀವನವೇ ನೀರಸ.. ಖರ್ಚು ಮಾಡುವಷ್ಟು ಹಣವೂ ಆ ನನ ಗಂಡನ ಬಳಿ ಇಲ್ಲ. ಹೀಗಿರುವಾಗ ಗಂಡನ ಮೇಲಿನ ನಂಬಿಕೆ ಕಡಿಮೆಯಾಗತೊಡಗಿತು. ಲೈಫ್ ಬೋರ್ ಆಗುತ್ತಿತ್ತು ಎಂದು ಹೇಳಿಕೊಂಡಿದ್ದಾಳೆ. ಸರಿಯಾಗಿ ಆಗಲೇ ಜೆನ್ನಿ ಹೊಸದೊಂದು ವಿಚಾರ ಮಾಡಿದ್ದಾಳೆ.. ತಕ್ಷಣವೇ ಅದನ್ನು ಕಾರ್ಯರೂಪಕ್ಕೂ ತಂದಿದ್ದಾಳೆ. ವೆಬ್‌ಸೈಟ್‌ನಲ್ಲಿ ಅಕ್ರಮ ಸಂಬಂಧಗಳು ಎಂಬ ಐ.ಡಿ. ಸೃಷ್ಟಿಸಿ ಬಾಯ್‌ಫ್ರೆಂಡ್‌ಗಾಗಿ ತಲಾಷೆ ಆರಂಭಿಸಿದ್ದಾಳೆ.

ಹೀಗೆ ತಲಾಷೆ ಮಾಡುವಾಗ ಬಾಯ್​ಫ್ರೆಂಡ್ ಒಬ್ಬ ಸಿಕ್ಕಿದ್ದು, ಆ ಗೆಳೆಯನಿಂದ ಪ್ರತಿ ತಿಂಗಳು ಖರ್ಚಿಗಾಗಿ, ತನ್ನ ಪಾಕೆಟ್​​ ಮನಿಗಾಗಿ 60 ಸಾವಿರ ರೂಪಾಯಿಗಳು ಬರುವಂತೆ ನೋಡಿಕೊಂಡಿದ್ದಾಳೆ. ಆದರೆ ಈ ಗೆಳೆಯನ ಬಗ್ಗೆ ಜೆನ್ನಿ ತನ್ನ ಪತಿಗೆ ಹೇಳಿರಲಿಲ್ಲ ಎಂಬುದು ಸ್ವಾರಸ್ಯಕರವಾಗಿದೆ. ಇಷ್ಟಾದರೂ… ತನ್ನ ಬಾಯ್‌ಫ್ರೆಂಡ್‌ನಿಂದ ಖರ್ಚಿಗೆಂದು ಹಣ ತೆಗೆದುಕೊಳ್ಳಲು ಎಂದಿಗೂ ಬಯಸುವುದಿಲ್ಲ ಎಂದು ಜೆನ್ನಿಫರ್ ಹೇಳಿಕೊಂಡು ಮುಜುಗರಪಟ್ಟಿದ್ದಾಳೆ. ಆದರೆ ಸ್ವತಃ ತನ್ನ ಬಾಯ್‌ಫ್ರೆಂಡೇ ಬಲವಂತವಾಗಿ ಹಣ ನೀಡುತ್ತಿರುವುದರಿಂದ ಅದನ್ನು ನಿರಾಕರಿಸಲು ತನಗೆ ಸಾಧ್ಯವಾಗುತ್ತಿಲ್ಲ ಎಂದೂ ವಗ್ಗರಣೆ ಹಾಕಿದ್ದಾಳೆ ಪುಣ್ಯಾತ್ತಗಿತ್ತಿ.

ಈಗ ಜೆನ್ನಿಯ ಗೆಳೆಯ ಪ್ರತಿ ತಿಂಗಳು ಸ್ಥಳೀಯ ಕರೆನ್ಸಿಯಲ್ಲಿ ಸುಮಾರು 60 ಸಾವಿರ ರೂಪಾಯಿಗಳನ್ನು ನೀಡುತ್ತಿದ್ದಾನಂತೆ. ಈ ಹಣದಿಂದ ಜೆನ್ನಿ ಜಮ್ಮಂತ ಶಾಪಿಂಗ್ ಹೋಗುತ್ತಾಳೆ. ಆ ಬಾಯ್​​ಫ್ರೆಂಡ್​​ ಇವಳ ಎಲ್ಲಾ ಆಸೆಗಳನ್ನು ಪೂರೈಸಲು ಪ್ರಯತ್ನಿಸುತ್ತಾನೆ. ಆದರೆ ಈ ವಿಚಾರ ಪತಿಗೆ ತಿಳಿದರೆ ಪತಿ-ಪತ್ನಿಯರ ಸಂಬಂಧಕ್ಕೆ ಧಕ್ಕೆಯಾಗುತ್ತದೆ ಎಂಬ ಆತಂಕವೂ ಒಂದೆಡೆ ಜೆನ್ನಿಯನ್ನು ಕಾಡುತ್ತಿದೆಯಂತೆ! ಮುಂದೆ ಈ ಸಂಬಂಧ ಹೇಗೋ ಏನೋ!? ಎಷ್ಟು ದಿನ ಉಳಿಯುತ್ತದೋ ಈ ಗುಪ್ತ್​​ ಗುಪ್ತ್​​ ಸಂಬಂಧಗಳು, ಅಲ್ವರಾ!?

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Sun, 14 May 23