
ಈ ವಿಡಿಯೋ ನೋಡಿ ಅನೇಕ ನೆಟ್ಟಿಗರು ದಂಗಾಗಿದ್ದಾರೆ. ಇಂಥ ಗತಿ ಸ್ವತಃ ತಮಗೇ ಬಂದರೆ ಏನು ಮಾಡೋದು ಎಂದು ಕಂಗಾಲಾಗಿದ್ದಾರೆ. ಆಸ್ಪತ್ರೆ ಚೆನ್ನಾಗಿದೆ, ವೈದ್ಯರು ಸಹಾಯಕರು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ನಿಟ್ಟುಸಿರು ಬಿಡಲೂ ಆಗದಂಥ ಕಾಲದಲ್ಲಿದ್ದೇವೆಯೇ? ಎಂಬ ಆತಂಕ ಉಂಟಾಗುತ್ತದೆ ಈ ವಿಡಿಯೋ ನೋಡಿದಾಕ್ಷಣ. ಆಸ್ಪತ್ರೆಯಲ್ಲಿ ಸ್ಟ್ರೆಚರ್ ಮೂಲಕ ರೋಗಿಯನ್ನು ಲಿಫ್ಟ್ ಬಳಿ ಕರೆತರಲಾಗುತ್ತದೆ. ಆದರೆ ಸ್ಟ್ರೆಚರ್ ಲಿಫ್ಟ್ನೊಳಗೆ ಅರ್ಧ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದುಬಿಡುತ್ತದೆ. ರೋಗಿ ಮತ್ತು ಆಸ್ಪತ್ರೆಯ ಸಿಬ್ಬಂದಿ ಕೆಳಮುಖವಾಗಿ ಬಿದ್ದುಬಿಡುತ್ತಾರೆ.
ನಿನ್ನೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 10.5 ಮಿಲಿಯನ್ ಜನರು ನೋಡಿದ್ದಾರೆ. ಆದರೆ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಅಕ್ಟೋಬರ್ 8ರಂದು. ಈ ಆಘಾತಕಾರಿ ವಿಡಿಯೋದ ಬಗ್ಗೆ ಅನೇಕರು ರೀಟ್ವೀಟ್ ಮಾಡಿದ್ದಾರೆ. ಲಿಫ್ಟ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ ಬಗ್ಗೆ ಅನೇಕರು ತಕರಾರು ಎತ್ತಿದ್ದಾರೆ. ಅನೇಕರು ಈ ದೃಶ್ಯ ತಮಗೆ ದುಃಸ್ವಪ್ನದಂತೆ ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ತಾಯಿಯ ಕೊನೆಯ ಆಸೆ ಪೂರೈಸಲು ಐಸಿಯುನಲ್ಲಿಯೇ ಮಗಳ ಮದುವೆ
ನಂತರ ಆ ರೋಗಿ ಮತ್ತು ಒಳಗಿದ್ದ ಸಹಾಯಕರಿಗೆ ಏನಾಯಿತೆಂದು ತಿಳಿಯಿತೇ? ಎಂದು ಪ್ರಶ್ನಿಸಿದ್ದಾರೆ ಅನೇಕರು. ಇಂಥ ಸಂದರ್ಭದಲ್ಲಿ ಯಾರನ್ನು ದೂರುವುದು ಎಂದು ಪ್ರಶ್ನಿಸಿದ್ದಾರೆ ಹಲವರು. ಆಸ್ಪತ್ರೆಯ ಆಡಳಿತ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:26 pm, Tue, 27 December 22