ರಾತ್ರಿ ಆಕಾಶ ನೋಡುತ್ತ ಕುಳಿತರೆ ಅಲ್ಲಿ ಸಾವಿರ ಕೌತುಕಗಳು ಕಾಣಿಸುತ್ತವೆ. ಹಾಗೇ ನಿನ್ನೆ ರಾತ್ರಿ ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶಗ ಹಲವು ಭಾಗಗಳಲ್ಲಿ ಆಗಸದಲ್ಲಿ ಒಂದು ಅದ್ಭುತ ಕಾಣಿಸಿಕೊಂಡಿದ್ದು, ಅದರ ವಿಡಿಯೋಗಳು ವೈರಲ್ ಆಗುತ್ತಿವೆ. ಥೇಟ್ ಉಲ್ಕಾಪಾತದಂತೆ ಕಾಣಿಸುವ ಬೆಳಕಿನ ಚಲನೆ ಅದು. ಬೆಳಕನ್ನೇ ಬಾಲವಾಗಿ ಹೊಂದಿರುವ ಏನೋ ಒಂದು ವೇಗವಾಗಿ ಕಪ್ಪು ಆಕಾಶದಲ್ಲಿ ಚಲಿಸುವ ದೃಶ್ಯ ತುಂಬ ಮನಮೋಹಕ ಎನ್ನಿಸದೆ ಇರದು. ಈ ದೃಶ್ಯ ಮಹಾರಾಷ್ಟ್ರದ ನಾಗ್ಪುರ, ಮಧ್ಯಪ್ರದೇಶದ ಝಬುವಾ, ಬರ್ವಾನಿ ಜಿಲ್ಲೆ ಸೇರಿ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದಾಗಿ ಎಎನ್ಐ ವರದಿ ಮಾಡಿದೆ. ಇದೊಂದು ಅಸಾಧಾರಣ ದೃಶ್ಯ ಎಂದೇ ಪರಿಗಣಿಸಲಾಗಿದೆ.
#WATCH | Maharashtra: In what appears to be a meteor shower was witnessed over the skies of Nagpur & several other parts of the state. pic.twitter.com/kPUfL9P18R
— ANI (@ANI) April 2, 2022
ಉಲ್ಕೆಗಳನ್ನು ಸಾಮಾನ್ಯವಾಗಿ ಶೂಟಿಂಗ್ ಸ್ಟಾರ್ಸ್ ಎಂದು ಕರೆಯಲಾಗುತ್ತದೆ. ಇವು ಸೆಕೆಂಡ್ಗೆ ಸುಮಾರು 30-60 ಕಿಮೀಯಷ್ಟು ಪ್ರಚಂಡ ವೇಗದಲ್ಲಿ ಭೂವಾತಾವರಣವನ್ನು ಪ್ರವೇಶಿಸುವ ಕಲ್ಲಿನಂತ ವಸ್ತುಗಳು. ಈ ಉಲ್ಕೆಗಳು ಭೂಮಿಯನ್ನು ಪ್ರವೇಶಿಸುವ ಪ್ರಕ್ರಿಯೆಗೆ ಉಲ್ಕಾಪಾತ ಎನ್ನಲಾಗುತ್ತದೆ. ಅಂದಹಾಗೇ, ನಿನ್ನೆ ಆಕಾಶದಲ್ಲಿ ಕಾಣಿಸಿಕೊಂಡ ತೀವ್ರ ಬೆಳಕು ಉಲ್ಕಾಪಾತವಲ್ಲ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್ಡೊವೆಲ್ ಟ್ವೀಟ್ ಮಾಡಿ, ನನಗನ್ನಿಸುವ ಪ್ರಕಾರ ಇದು ಉಲ್ಕಾಪಾತವಲ್ಲ. ಇದು 2021ರ ಫೆಬ್ರವರಿಯಲ್ಲಿ ಉಡಾವಣೆಗೊಂಡ ಚೀನಾದ ರಾಕೆಟ್ ಚಾಂಗ್ ಝೆಂಗ್ 3ಬಿ ( ಕ್ರಮ ಸಂಖ್ಯೆ Y77 )ಯ ಮೂರನೇ ಹಂತ. ಅಂದರೆ ಅದು ಭೂಮಿಗೆ ವಾಪಸ್ ಮರಳಿದೆ. ಭೂಮಿಗೆ ವಾಪಸ್ ಬರುವುದಕ್ಕೂ ಮೊದಲು ಹೀಗೆ ಆಕಾಶದಲ್ಲಿ ಚಲಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ 2022 ಪಾಯಿಂಟ್ ಟೇಬಲ್ನಲ್ಲಿ ದೊಡ್ಡ ಬದಲಾವಣೆ: ಆರೆಂಜ್, ಪರ್ಪಲ್ ಕ್ಯಾಪ್ ಯಾರ ಕೈಯಲ್ಲಿದೆ?
Published On - 10:01 am, Sun, 3 April 22