ಹೊಸದಿಲ್ಲಿ : ಯುವಕರ ಗುಂಪೊಂದು ವಾಹನದ ಮೇಲೇರಿ ಡ್ಯಾನ್ಸ್ (Dance) ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ನಂತರ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರಿನ ಮಾಲೀಕರೊಬ್ಬರಿಗೆ 20,000 ರೂ ದಂಡ ವಿಧಿಸಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಇಬ್ಬರು ಯುವಕರು ಕುಡಿದವರಾಗಿ ಕಂಡಿದ್ದ, ಕಾರಿನ ಮೇಲೇರಿ ನೃತ್ಯ ಮಾಡುವುದನ್ನು ಕಾಣಬಹುದು. ಇಬ್ಬರು ಯುವಕರು ಕಾರಿನ ಮೇಲಿದ್ದು, ಇನ್ನಿಬ್ಬರು ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ಮಧ್ಯೆ ಘಾಜಿಯಾಬಾದ್‌ನಲ್ಲಿ, ಹುಡುಗರ ಗುಂಪು, ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ತಮ್ಮ ಕಾರಿನ ಟಾಪ್ ಮೇಲೇರಿ ಡ್ಯಾನ್ಸ್ ಮಾಡಿತ್ತಿದ್ದಾರೆ. ಗಾಜಿಯಾಬಾದ್ ಪೊಲೀಸರು ಇವರನ್ನು ಶ್ರೀಘ್ರದಲ್ಲೇ ಲಾಕಪ್ನಲ್ಲಿ ಹಾಕಿ ತಮ್ಮ ಟ್ಯೂನ್ಗೆ ಡ್ಯಾನ್ಸ್ ಮಾಡುತ್ತಾರೆಂದು ಭಾವಿಸುತ್ತೇವೆ ಎಂದು ಟ್ವಿಟರ್ ಬಳಕೆದಾರ ಪ್ರಶಾಂತ್ ಕುಮಾರ್ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡುವಾಗ ಬರೆದುಕೊಂಡಿದ್ದಾರೆ. ಅವರು ಟ್ವೀಟ್‌ನಲ್ಲಿ ಗಾಜಿಯಾಬಾದ್ ಪೊಲೀಸರನ್ನು ಟ್ಯಾಗ್ ಕೂಡ ಮಾಡಿದ್ದಾರೆ.
Meanwhile in Ghaziabad, a group of boys, visibly drunk, dancing on the roof of their car on the Delhi-Meerut expressway.
Hope @ghaziabadpolice makes them dance to their tunes in the lockup sooner. pic.twitter.com/mJck8JQ4Kh
— Prashant Kumar (@scribe_prashant) April 2, 2022
ಘಟನೆ ಕುರಿತು ಪ್ರತಿಕ್ರಿಯಿಸಿರುವ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾಹನ ಮಾಲೀಕರಿಗೆ 20,000 ರೂ. ದಂಡ ವಿಧಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಬಂದ ದೂರಿನನ್ವಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ವಾಹನ ಮಾಲೀಕರ ವಿರುದ್ಧ ಒಟ್ಟು 20,000 ರೂ.ಗಳ ಚಲನ್ನ್ನು ಹಾಕಲಾಗಿದೆ ಎಂದು ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ಮತ್ತೊಂದು ಹಾವನ್ನು ಜೀವಂತವಾಗಿ ತಿಂದು ತೇಗಿದ ಕಿಂಗ್ ಕೋಬ್ರಾ; ಇಲ್ಲಿದೆ ವೈರಲ್ ವಿಡಿಯೋ
Viral Video: ಕೋತಿ ಮತ್ತು ಕುರಿಮರಿ ನಡುವೆ ಅವಿನಾಭಾವ ಸಂಬಂಧ; ನೆಟ್ಟಿಗರ ಹೃದಯ ಸ್ಪರ್ಶಿಸಿದ ಮುದ್ದಾದ ಜೋಡಿ